ಬೆಂಗಳೂರು: ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಗೂಂಡಾಗಿರಿ ಆರೋಪ; ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಪೊಲೀಸರು
ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರು ಗೂಂಡಾಗಿರಿ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು: ಬೆಂಗಳೂರಿನ ಶಿವಾಜಿನಗರ (Shivajinagar) ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಬೆಂಬಲಿಗರು ಗೂಂಡಾಗಿರಿ ನಡೆಸಿರುವ ಆರೋಪ ಕೇಳಿಬಂದಿದೆ. ರಿಜ್ವಾನ್ ಅರ್ಷದ್ ಬೆಂಬಲಿಗರು ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ, ರಿಚರ್ಡ್ಸ್ ಪಾರ್ಕ್ ಬಳಿಯ ಹರ್ಮನ್ ರಿಗಾಲಿಯಾ ಅಪಾರ್ಟ್ಮೆಂಟ್ನಲ್ಲಿ ನಲೆಸಿರುವ ದೆಹಲಿ ಮೂಲದ ಸೋನಂ ಮಿಶ್ರಾ ಎಂಬ ಮಹಿಳೆಯ ಮನೆಗೆ ರಾತ್ರೋರಾತ್ರಿ ನುಗ್ಗಿದ್ದಾರೆ. ನಂತರ ಮಹಿಳೆ ಮೇಲೆ ದೌರ್ಜನ್ಯವೆಸಗಿ ಮನೆಯಲ್ಲಿನ ಚಿನ್ನಾಭರಣ, ಹಣ, ದೋಚಿ ನಂತರ ಮನೆಗೆ ಬೀಗ ಹಾಕಿ ಸೋನಂ ಮಿಶ್ರಾರನ್ನು ಹೊರಹಾಕಿರುವ ಆರೋಪ ಕೇಳಿಬಂದಿದೆ.
ಇನ್ನೂ ಪುಲಿಕೇಶಿನಗರ ಪೊಲೀಸ್ ಠಾಣೆ ಪೊಲೀಸರು ಘಟನೆ ಕುರಿತು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಸೋನಂ ಆರೋಪಿಸಿದ್ದಾರೆ.
ಇಬ್ಬರು ಪುರುಷರು, ಮೂರು ಜನ ಮಹಿಳೆಯರು ಮನೆಯೊಳಗೆ ಇದ್ದಾರೆ
ಇಬ್ಬರು ಪುರುಷರು, ಮೂರು ಜನ ಮಹಿಳೆಯರು ಮನೆಯೊಳಗೆ ಇದ್ದಾರೆ. ಒಳಗಡೆಯಿಂದ ಬಾಗಿಲಿನ ಗ್ರಿಲ್ ಲಾಕ್ ಮಾಡಿದ್ದಾರೆ. ಅಕ್ರಮವಾಗಿ ಮನೆಯಲ್ಲಿ ನಿನ್ನೆ ರಾತ್ರಿಯಿಂದ ಇದ್ದಾರೆ. ಪೊಲೀಸರು ಕರೆದರು ಅವರು ಹೊರ ಬರುತ್ತಿಲ್ಲ. ಒಂದು ವರ್ಷದ ಹಿಂದೆಯೂ ಇದೇ ತರಹ ಆಗಿತ್ತು. ರಿಜ್ವಾನ್ ಅರ್ಷಾದ್ ಕಡೆಯವರೇ ಇದನ್ನು ಮಾಡುತ್ತಿದ್ದಾರೆ. ರಹಮಾನ್, ಬಷೀರ್, ಮಜರ್ ಅನ್ನುವಂತರೇ ಇದರಲ್ಲಿ ಇದ್ದಾರೆ. ಹೆದರಿಸಿ ,ಬೆದರಿಸಿ ನಮನ್ನು ಮನೆ ಖಾಲಿ ಮಾಡಿಸಲು ನೋಡುತ್ತಿದ್ದಾರೆ ಎಂದು ಸೋನಮ್ ಮಿಶ್ರಾ ಗಂಡ ಶಹಬಾಸ್ ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 20 December 22