ಬೆಂಗಳೂರು: ಜೈ ಶ್ರೀರಾಮ್ ಎಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪಿ ಬಂಧನ
ಜೈ ಶ್ರೀರಾಮ್ ಎಂದು ಕೂಗಿ ರೀಲ್ಸ್ ಮಾಡಿದ್ದ ಮುಸ್ಲಿಂ ಯುವಕ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ವಿಡಿಯೋವನ್ನು ಪೋಸ್ಟ್ ಮಾಡಿದ್ದ. ಇದನ್ನು ನೋಡಿದ ನೆಟ್ಟಿಗರು ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಯುವಕನನ್ನು ಪತ್ತೆ ಹಚ್ಚಲಾಗಿದೆ.
ಬೆಂಗಳೂರು, ಆ.31: ಜೈ ಶ್ರೀರಾಮ್ (Jai Sriram) ಎಂದು ಕೂಗಿ ರೀಲ್ಸ್ ಮಾಡಿದ್ದ ಮುಸ್ಲಿಂ ಯುವಕ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪಿಯನ್ನು ಇದೀಗ ತಲಘಟ್ಟಪುರ (Talaghattapura) ಪೊಲೀಸರು ಬಂಧಿಸಿದ್ದಾರೆ. ನಯಾಜ್ ಖಾನ್ ಬಂಧಿತ ಆರೋಪಿ. ನಗರದ ಕೋಣನಕುಂಟೆ ನಿವಾಸಿಯಾದ ಇತ, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಕೂಡ ಆಗಿದ್ದ ನಯಾಜ್ ಖಾನ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ವಿಡಿಯೋ ಮಾಡಿದ್ದ ಯುವಕ ಯುವತಿಗೆ ನಿಂದಿಸಿ ಪುನಃ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ವಿಡಿಯೋವನ್ನು ಹಾಕಿದ್ದನು.
ವಿಡಿಯೋ ನೋಡಿ ನೆಟ್ಟಿಗರಿಂದ ಪೊಲೀಸರಿಗೆ ದೂರು
ಹೌದು, ವಿಡಿಯೋ ನೋಡಿದ ನೆಟ್ಟಿಗರು ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಯುವಕನನ್ನು ಪತ್ತೆ ಹಚ್ಚಲಾಗಿದೆ. ಇನ್ನು ನಯಾಜ್ ಖಾನ್ ವಿರುದ್ಧ ಯಾವುದೇ ಹಳೆ ಪ್ರಕರಣಗಳು ಇಲ್ಲ. ಪ್ರಾಥಮಿಕ ತನಿಖೆಗೆ ಒಳಪಡಿಸ ಪೊಲೀಸರಿಗೆ ಇತ ವಿಡಿಯೋ ನೋಡಿ ಪ್ರಚೋದಿತನಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬೆಂಗಳೂರು: ಬುರ್ಖಾ-ಟೋಪಿ ಧರಿಸಿ ಜೈ ಶ್ರೀರಾಮ್ ಎಂದ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ, ವಿಡಿಯೋ ವೈರಲ್
ಟಿಕ್ಟಾಕ್ ಸ್ಟಾರ್ ಕೊಲೆ ಪ್ರಕರಣ; ಹಳೆಯ ದ್ವೇಷಕ್ಕೆ ಬಲಿಯಾದನಾ ಯುವಕ?
ನಂಜನಗೂಡು ಬಳಿ ಕೊಲೆಯಾದ ನವೀನ್ ಆಲಿಯಾಸ್ ಸ್ಮೈಲ್ ನವೀನ್ ವಿರುದ್ದ ಬೆಂಗಳೂರು ಮತ್ತು ರಾಮನಗರ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ನವೀನ್ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ದ ರೌಡಿಶೀಟ್ ತೆರೆಯಲಾಗಿತ್ತು. ಇದಾದ ಬಳಿಕ 2020ರಲ್ಲಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲೂ ಭಾಗಿಯಾಗಿ ಜೈಲು ಸೇರಿದ್ದ. ಈ ಕೇಸ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ರೀಲ್ಸ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದ. ಇದೀಗ ಆತನನ್ನು ಅಪರಿಚಿತ ವ್ಯಕ್ತಿಗಳು ಬಂದು ಹತ್ಯೆ ಮಾಡಿದ್ದರು. ಈ ಕುರಿತು ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಸಂಬಂಧ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನವೀನ್ ಕೊಲೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ