AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬುರ್ಖಾ-ಟೋಪಿ ಧರಿಸಿ ಜೈ ಶ್ರೀರಾಮ್ ಎಂದ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ, ವಿಡಿಯೋ ವೈರಲ್

ಬುರ್ಖಾ ತೊಟ್ಟ ಯುವತಿ ಹಾಗೂ ಟೋಪಿ ಧರಿಸಿ, ಕ್ರಾಸ್ ತೊಟ್ಟ ಯುವಕ ಇಬ್ಬರೂ ಸೇರಿ ಒಂದು ರೀಲ್ಸ್ ಮಾಡಿದ್ದಾರೆ. ಅದರಲ್ಲಿ ಟೋಪಿ ಧರಿಸಿದ ಯುವಕ ಹೃದಯಾ ಮತ್ತು ಮನಸ್ಸಿನಲ್ಲಿ ಒಂದೇ ಹೆಸರಿದೆ ಅಂತ ಹೇಳ್ತಾನೆ. ಆಗ ಬುರ್ಖಾ ತೊಟ್ಟ ಯುವತಿ, ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಹೇಳುತ್ತಾಳೆ. ಈ ವಿಡಿಯೋಗೆ ಮತ್ತೋರ್ವ ಮುಸ್ಲಿಂ ಯುವಕ ಬೆದರಿಕೆಯ ವಿಡಿಯೋ ಮಾಡಿದ್ದಾನೆ.

ಬೆಂಗಳೂರು: ಬುರ್ಖಾ-ಟೋಪಿ ಧರಿಸಿ ಜೈ ಶ್ರೀರಾಮ್ ಎಂದ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ, ವಿಡಿಯೋ ವೈರಲ್
ಬುರ್ಖಾ-ಟೋಪಿ ಧರಿಸಿ ಜೈ ಶ್ರೀರಾಮ್ ಎಂದ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ
ರಾಚಪ್ಪಾಜಿ ನಾಯ್ಕ್
| Edited By: |

Updated on: Aug 29, 2023 | 2:21 PM

Share

ಬೆಂಗಳೂರು, ಆ.29: ಬುರ್ಖಾ ಹಾಕಿ(Burkha), ಟೋಪಿ(Taqiyah) ಧರಿಸಿ ಜೈ ಶ್ರೀರಾಮ್ ಎಂದಿದ್ದ ಜೋಡಿಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಜೋಡಿಯೊಂದು ಸೌಹಾರ್ದತೆಯನ್ನು ಸೂಚಿಸುವ ರೀತಿಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬುರ್ಖಾ ಮತ್ತು ಟೋಪಿ ಧರಿಸಿ ಜೈ ಶ್ರೀ ರಾಮ್( Jai Shri Ram) ಎಂದು ಘೋಷಣೆ ಕೂಗಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋಗೆ ವಿರೋಧ ವ್ಯಕ್ತವಾಗಿದ್ದು ವಿಡಿಯೋದಲ್ಲಿರುವ ಜೋಡಿಗೆ ಬೆದರಿಕೆ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋವನ್ನು ಬಲಪಂಥೀಯ ಯುವಕ ಟ್ವಿಟರ್​ನಲ್ಲಿ ಷೇರ್ ಮಾಡಿದ್ದಾನೆ.

‘ಬುರ್ಖಾ ತೆಗೆದು ಏನಾದ್ರು ಮಾತನಾಡಿ’ ಮುಸ್ಲಿಂರನ್ನ ಮಧ್ಯಕ್ಕೆ ತಂದು ಜೈ ಶ್ರೀರಾಂ ಅಂತ ಹೇಳಬೇಡಿ. ನಿಜವಾದ ಮುಸ್ಲಿಮರ ಮುಂದೆ ಬಂದು ಈ ಮಾತನಾಡಿದರೆ ಇಬ್ಬರನ್ನೂ ಸೀಳಿಬಿಡುತ್ತೇವೆ ಎಂದು ಯುವಕ ವಿಡಿಯೋದಲ್ಲಿ ಜೋಡಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಸ್ಥಳೀಯರು ದೂರು ನೀಡಿದ್ದು ಪರಿಶೀಲನೆ ನಡೆಸುವುದಾಗಿ ಬಿಸಿಪಿ ರಿಟ್ವೀಟ್ ಮಾಡಿದೆ.

ವಿಡಿಯೋದಲ್ಲೇನಿದೆ?

ಬುರ್ಖಾ ತೊಟ್ಟ ಯುವತಿ ಹಾಗೂ ಟೋಪಿ ಧರಿಸಿ ಕ್ರಾಸ್ ತೊಟ್ಟ ಯುವಕ ಇಬ್ಬರೂ ಸೇರಿ ಒಂದು ರೀಲ್ಸ್ ಮಾಡಿದ್ದಾರೆ. ಅದರಲ್ಲಿ ಟೋಪಿ ಧರಿಸಿದ ಯುವಕ ಹೃದಯಾ ಮತ್ತು ಮನಸ್ಸಿನಲ್ಲಿ ಒಂದೇ ಹೆಸರಿದೆ ಅಂತ ಹೇಳ್ತಾನೆ. ಆಗ ಬುರ್ಖಾ ತೊಟ್ಟ ಯುವತಿ, ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಹೇಳುತ್ತಾಳೆ. ಈ ವಿಡಿಯೋಗೆ ಮತ್ತೋರ್ವ ಮುಸ್ಲಿಂ ಯುವಕ ಬೆದರಿಕೆ ಹಾಕಿ ವಿಡಿಯೋ ಮಾಡಿದ್ದಾನೆ. ನೀನು ಏನೇ ಹೇಳಿದ್ರು ಬುರ್ಖಾ ತೆಗೆದು, ಟೋಪಿ ತೆಗೆದು ಹೇಳು. ಇಸ್ಲಾಂನ ಏಕೆ ಮಧ್ಯ ತರ್ತಿದ್ದೀರಾ? ನಿಜವಾದ ಮುಸ್ಲಿಮರ ಮುಂದೆ ಬಂದು ಈ ಮಾತು ಹೇಲಿದರೆ ನಿಮಿಬ್ಬರನ್ನೂ ಸೀಳಿಬಿಡುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಅನ್ಯ ಧರ್ಮದ ಹುಡುಗನ ಜೊತೆ ಹೋಗುತ್ತಿದ್ದ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯ; ಮುಸ್ಲಿಂ ಯುವಕ ಬಂಧನ

ಬುರ್ಖಾ ಧರಿಸಿ ಅನ್ಯಕೋಮಿನ ಯುವಕನ ಜೊತೆ ಹೋಗಿದ್ದಕ್ಕೆ ನಿಂದನೆ

ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮುಸ್ಲಿಂ ಯುವಕನೊಬ್ಬ ಯುವತಿಯನ್ನು ನಿಂದಿಸಿದ ಘಟನೆ ನಡೆದಿತ್ತು. ಬುರ್ಕಾ ಹಾಕೊಂಡು ಸ್ನೇಹಿತನ ಜೊತೆ ಹೋಗುತ್ತಿದ್ದ ಯುವತಿಯೋರ್ವಳನ್ನ ತಡೆದು ಆಕೆಯನ್ನ ನಿಂದಿಸಿ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂಗೆ ಬೈದು. ಅನ್ಯ ಕೋಮುವಿನ ಯುವಕನ ಜೊತೆ ಹೋಗ್ತಿದ್ಯಾ? ಒಂದು ಮುಸ್ಲಿಂ ಯುವತಿಯಾಗಿ ಹಿಂಗೆ ಮಾಡ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?