Police Constable Jobs: 5 ಸಾವಿರ ಕಾನ್ಸ್​ಟೇಬಲ್ ನೇಮಕಕ್ಕೆ ಶೀಘ್ರ ಅಧಿಸೂಚನೆ; ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: ಆಯೇಷಾ ಬಾನು

Updated on: Sep 20, 2022 | 12:05 PM

ಶೀಘ್ರವೇ ಮತ್ತೆ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

Police Constable Jobs: 5 ಸಾವಿರ ಕಾನ್ಸ್​ಟೇಬಲ್ ನೇಮಕಕ್ಕೆ ಶೀಘ್ರ ಅಧಿಸೂಚನೆ; ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಶೀಘ್ರವೇ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಘೋಷಣೆ ಮಾಡಿದ್ದಾರೆ. ಹಾಗೂ ಇದೇ ವೇಳೆ ಕೊವಿಡ್ ವೇಳೆ ಪೊಲೀಸ್​ ನೇಮಕಾತಿ ಆಗಿಲ್ಲ ಅನ್ನೋದು ತಪ್ಪು ಎಂದು ಸ್ಪಷ್ಟನೆ ನೀಡಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್​​ಗಳ ನೇಮಕಾತಿ ವಿಳಂಬ ಬಗ್ಗೆ ಹಾಸನ BJP ಶಾಸಕ ಪ್ರೀತಮ್ ಗೌಡ ಪ್ರಶ್ನೆ ಮಾಡಿದ್ರು. ಈ ವೇಳೆ ಉತ್ತರಿಸಿದ ಆರಗ ಜ್ಞಾನೇಂದ್ರ, 9,432 ಪೊಲೀಸ್ ಕಾನ್ಸ್​ಟೇಬಲ್​ ಹುದ್ದೆಗಳು ಖಾಲಿ ಇವೆ. ಈಗ 3,500 ಕಾನ್ಸ್​ಟೇಬಲ್​​ ನೇಮಕಕ್ಕೆ ನೋಟಿಫಿಕೇಷನ್ ಆಗಿದೆ. ಶೀಘ್ರವೇ ಮತ್ತೆ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

ಇದೇ ವೇಳೆ, ಕೊವಿಡ್ ವೇಳೆ ಪೊಲೀಸ್​ ನೇಮಕಾತಿ ಆಗಿಲ್ಲ ಅನ್ನೋದು ತಪ್ಪು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ರು. ಆಗ ಕೊವಿಡ್ ಕಾರಣದಿಂದ ಕಾನ್ಸ್​ಟೇಬಲ್​ ನೇಮಕಾತಿ ವಿಳಂಬ ಆಗಿದೆ. ಹೀಗಾಗಿ ಕಾನ್ಸ್​ಟೇಬಲ್​​ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ರು. ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ, ಸಾಮಾನ್ಯ ವರ್ಗಕ್ಕೆ 18ರಿಂದ 25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿ ಸಡಿಲಿಸಲು ನನಗೂ ಕೂಡ ಫೋನ್ ಬರುತ್ತಿದೆ. ಆದರೆ ಕೊವಿಡ್ ವೇಳೆ ನೇಮಕಾತಿ ಆಗಿಲ್ಲ ಎಂಬುದು ತಪ್ಪು. ಕೊವಿಡ್ ಅವಧಿಯಲ್ಲಿ ಪೊಲೀಸ್ ನೇಮಕಾತಿ ನಿಂತಿರಲಿಲ್ಲ. ವಯೋಮಿತಿ ಹೆಚ್ಚಳ ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: Fake App: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಇರಬಹುದು: ಸರ್ಕಾರದಿಂದ ವಾರ್ನಿಂಗ್

ಇನ್ನು ಕಲಾಪದಲ್ಲಿ ನಮ್ಮ ಭಾಗದಲ್ಲಿ ಪೊಲೀಸ್ ಠಾಣೆ ಇಲ್ಲ, ಒಂದು ಠಾಣೆ ಕೊಡಿ ಅಂತ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಮನವಿ ಇಟ್ಟಿದ್ದಾರೆ. ಪೊಲೀಸ್ ಠಾಣೆ ಕೇಳಬೇಡಿ, ನಿಮ್ಮಲ್ಲಿ ಸಜ್ಜನರಿದ್ದಾರೆ, ನೀವು ಅದೃಷ್ಟವಂತರು. ನಿಮ್ಮ ಭಾಗದ ಜನರ ಬಗ್ಗೆ ನೀವು ಹೆಮ್ಮೆ ಪಟ್ಟುಕೊಳ್ಳಬೇಕು. ನಿಮಗೆ ಪೊಲೀಸ್ ಠಾಣೆ ಅವಶ್ಯಕತೆ ಇಲ್ಲ. ಅದರ ಬದಲು ಆಸ್ಪತ್ರೆ ಕೇಳಿ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಕಾಲೆಳೆದ್ರು. ಅದು ಹೇಗೆ ಆಸ್ಪತ್ರೆ ಬೇಕು ಅಂತ ಕೇಳೋದು, ತಪ್ಪಲ್ವಾ ಎಂದು ಸ್ಪೀಕರ್ ಕಾಗೇರಿ ಮಧ್ಯ ಪ್ರವೇಶಿಸಿ ಪ್ರಶ್ನಿಸಿದರು. ಆಸ್ಪತ್ರೆ ಕೇಳಿದ್ರೆ ಅನಾರೋಗ್ಯ ಜಾಸ್ತಿ ಆದಂತೆ ಅಲ್ವಾ, ಸುಧಾಕರ್ ಗಟ್ಟಿ ಇದ್ದಾರೆ ಅಂತ ಆಗಲ್ವಾ ಎಂದು ಸ್ಪೀಕರ್ ಹಾಸ್ಯ ಮಾಡಿದ್ರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಸಿ.ಟಿ. ರವಿ, ನಿಮ್ಮ ಪ್ರಕಾರ ಹಾಗಾದ್ರೆ ದುರ್ಜನರು ಜಾಸ್ತಿ ಆಗಬೇಕು ಅಂತಲಾ ಅಂತ ಕಾಲೆಳೆದ್ರು. ಹಾಗೆ ನಾನು ಹೇಳಲಿಲ್ಲ ಅಂತ ಆರಗ ಜ್ಞಾನೇಂದ್ರ ನಕ್ಕಿ ಸುಮ್ಮನಾದ್ರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:48 am, Tue, 20 September 22