ಬೆಂಗಳೂರು: ನಗರದ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಟಿವಿ9 ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ನಡೆಯುವ ಅತಿ ದೊಡ್ಡ ಆಟೋ ಮೊಬೈಲ್ ಮತ್ತು ಲೈಫ್ಸ್ಟೈಲ್ ಎಕ್ಸ್ಪೋಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ನಿನ್ನ ಸನಿಹಕೆ ಚಿತ್ರದ ನಟಿ ಧನ್ಯ ರಾಮ್ ಕುಮಾರ್ ಚಾಲನೆ ನೀಡಿದ್ದಾರೆ.
ಎಕ್ಸ್ಪೋಗೆ ಚಾಲನೆ ಕೊಟ್ಟ ಧನ್ಯಾ ರಾಮ್ ಕುಮಾರ್ ಸ್ಟಾಲ್ಗಳಿಗೆ ಭೇಟಿಕೊಟ್ಟು ಸಂತೋಷ ವ್ಯಕ್ತಪಡಿಸಿದ್ದಾರೆ. ಅಮ್ಮನ ಜೊತೆ ವಾಪಸ್ ಎಕ್ಸ್ಪೋಗೆ ಬಂದು ಕಾರ್ ಖರೀದಿ ಮಾಡಬೇಕು ಅಂದುಕೊಂಡಿದ್ದೇನೆ. ಎಕ್ಸ್ಪೋ ತುಂಬಾ ಚೆನ್ನಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಲೈಫ್‌ಸ್ಟೈಲ್, ಆಟೋಮೊಬೈಲ್, ಫರ್ನಿಚರ್ ಎಕ್ಸ್‌ಪೋದಲ್ಲಿ ಮೊಬೈಲ್, ಟಿವಿ, ಎಸಿ ಸೇರಿ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಗೃಹೋಪಯೋಗಿ ಸಲಕರಣೆಗಳು, ಲೈಫ್‌ಸ್ಟೈಲ್ ಸೇರಿದಂತೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಟೂ ವ್ಹೀಲರ್ಸ್, ಫೋರ್ ವ್ಹೀಲರ್ಸ್ ಸೇರಿ ನೂರಾರು ಬ್ರ್ಯಾಂಡ್‌ನ ಕಂಪನಿಗಳು ಭಾಗಿಯಾಗಿವೆ. ಕೊವಿಡ್ ಮಾರ್ಗಸೂಚಿ ಪಾಲಿಸಿ ಲೈಫ್ ಸ್ಟೈಲ್ ಎಕ್ಸ್ಪೋ ಆಯೋಜಿಸಲಾಗಿದೆ.
ವಿಶೇಷವಾಗಿ ನೂರಾರು ಬ್ರಾಂಡ್ಗಳು, ಸಾವಿರಾರು ವಸ್ತುಗಳು ಒಂದೇ ಸೂರಿನಡಿ ಸಿಗಲಿದೆ. ವಿಶಾಲವಾದ ಕಾರ್ ಪಾರ್ಕಿಂಗ್ ವ್ಯವಸ್ಥೆ ಇದ್ದು, ಪ್ರವೇಶ ಉಚಿತವಾಗಿದೆ. ಈ ಬಾರಿಯ ಎಕ್ಸ್ಪೋದಲ್ಲಿ ವಿಶೇಷ ಆಫರ್ಗಳನ್ನೂ ನೀಡಲಾಗತ್ತೆ. ಇಎಂಐ ಸೌಲಭ್ಯದ ವ್ಯವಸ್ಥೆಯೂ ಇದೆ.
ಇನ್ನೇನು ದಿಪಾವಳಿ ಸನೀಹವಾಗುತ್ತಿದೆ. ಹೀಗಾಗಿ ಎಕ್ಸ್‌ಪೋದಲ್ಲಿ ಭರ್ಜರಿ ಆಫರ್ಗಳನ್ನು ನೀಡಲಾಗುತ್ತಿದ್ದು ಇಂದಿನಿಂದ ಅಕ್ಟೋಬರ್ 24ರ ತನಕ ಎಕ್ಸ್‌ಪೋ ನಡೆಯುತ್ತೆ. ಹೀಗಾಗಿ ತಪ್ಪದೆ ಬಂದು ನಿಮಗಿಷ್ಟವಾಗುವ ವಸ್ತುಗಳನ್ನು ಖರೀದಿ ಮಾಡಿ.
Published On - 3:28 pm, Fri, 22 October 21