ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ; ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ; ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಗೌರವ್ ಗುಪ್ತಾ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಕಳಪೆ ಕಾಮಗಾರಿ ಎಂದು ಖುದ್ದು ಬಿಬಿಎಂಪಿಯೇ ಪತ್ತೆ ಮಾಡಿದೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಧ್ವನಿ ಎತ್ತಿದೆ.

TV9kannada Web Team

| Edited By: Ayesha Banu

Oct 20, 2021 | 8:05 AM

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆ(Smart City Project) ವಿರುದ್ಧ ಬಿಬಿಎಂಪಿ(BBMP) ಗುಡುಗಿದೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಹಿಂಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಕಳಪೆ ಕಾಮಗಾರಿ ಎಂದು ಖುದ್ದು ಬಿಬಿಎಂಪಿಯೇ ಪತ್ತೆ ಮಾಡಿದೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಧ್ವನಿ ಎತ್ತಿದೆ. 36 ರಸ್ತೆಗಳನ್ನ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ58 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಕಾಮಗಾರಿ‌ ಕಳಪೆ, ಅವೈಜ್ಞಾನಿಕವಾಗಿದೆ ಎಂದು ಬಿಬಿಎಂಪಿ ಗುಡುಗಿದೆ. ಅಲ್ಲದೆ ಈ ಬಗ್ಗೆ ಸರ್ಕಾರದ‌ ಗಮನಕ್ಕೂ ತಂದಿದೆ. ಕೂಡಲೇ ಸ್ಮಾರ್ಟ್ ಸಿಟಿಗೆ ನೀಡಿರುವ ರಸ್ತೆಗಳನ್ನ ಹಿಂಪಡೆದು ಬಿಬಿಎಂಪಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪತ್ರ ಬರೆದಿದ್ದಾರೆ. 1) ರಸ್ತೆ ಮೇಲಿನ ಮಳೆ ನೀರು ಹರಿದು ಹೋಗಲು grating ನಿರ್ಮಿಸಲಾಗಿದೆ, ಆದರೆ grating ರಸ್ತೆಮಟ್ಟಕ್ಕಿಂತ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ರಸ್ತೆ ಮಟ್ಟಕ್ಕಿಂತ gratingಮೇಲಿರುವ ಕಾರಣ ಮಳೆ ನೀರು ಹರಿದು ಹೋಗಲು ಆಗುತ್ತಿಲ್ಲ. 2)ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಸಂಪರ್ಕ ನೀಡದೆ ಕಾಮಗಾರಿ. BWSSB ಲೈನ್ ಗಳನ್ನ ಮುಚ್ಚಿರುವ ಸ್ಮಾರ್ಟ್ ಸಿಟಿ ರಸ್ತೆಗಳು. 3) ಬೆಸ್ಕಾಂ ಇಲಾಖೆಯ ಲೈನ್ ಗಳಿಗೆ ಧಕ್ಕೆ ತಂದಿರುವ ಸ್ಮಾರ್ಟ್ ಸಿಟಿ ಯೋಜನೆ. ಎಂದು ಎಲ್ಲಾ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಬಿಬಿಎಂಪಿ ಪತ್ರದಲ್ಲಿ ಉಲ್ಲೇಖಿಸಿದೆ.

ಇನ್ನು ಕಳೆದ ತಿಂಗಳ 15ರಂದು ಟಿವಿ9 ಕೂಡ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಎಂದು ವರದಿಮಾಡಿತ್ತು. ಸ್ಮಾರ್ಟ್ ಲೂಟಿ ಹೆಸರಿನಡಿ 935 ಕೋಟಿಯ ಕಾಮಗಾರಿ ಕಳಪೆ ಎಂದು ಎಕ್ಸ್ಪೋಸ್ ಮಾಡಲಾಗಿತ್ತು. ಟಿವಿ9 ವರದಿ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಈಗ ಎಚ್ಚೆತ್ತಿರುವ ಬಿಬಿಎಂಪಿ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದೆ.

ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಕಾಮಗಾರಿ; ಟಿವಿ9 ವರದಿ ಪ್ರಸಾರದ ಬಳಿಕ ಎಚ್ಛೆತ್ತ ರಾಜ್ಯ ಸರ್ಕಾರ

Follow us on

Related Stories

Most Read Stories

Click on your DTH Provider to Add TV9 Kannada