Aero India 2023: ಮೂರು ದಿನಗಳಲ್ಲಿ 80 ಸಾವಿರ ಕೋಟಿ ರೂ. ಒಪ್ಪಂದ, ಇಂದಿನಿಂದ ಏರ್​ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 16, 2023 | 11:25 AM

ಈ ಬಾರಿಯ ಏರೋ ಶೋನಲ್ಲಿ, ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳು ಸದ್ದು ಮಾಡ್ತಿವೆ. ವಿದೇಶದ ರಕ್ಷಣಾ ಅಧಿಕಾರಿಗಳು, ನಗರದ ಸ್ಟಾರ್ಟ್ ಅಪ್ ಕಂಪನಿಗಳ ಜೊತೆ ಸಾವಿರಾರು ಕೋಟಿಯ ಒಡಂಬಡಿಕೆ ಮಾಡಿಕೊಂಡಿವೆ.

Aero India 2023: ಮೂರು ದಿನಗಳಲ್ಲಿ 80 ಸಾವಿರ ಕೋಟಿ ರೂ. ಒಪ್ಪಂದ, ಇಂದಿನಿಂದ ಏರ್​ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ
ಏರೋ ಇಂಡಿಯಾ-2023
Follow us on

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಏರ್​ ಶೋ ‘ಏರೋ ಇಂಡಿಯಾ-2023‘(Aero India 2023) ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದು ಕಳೆದ ಮೂರು ದಿನಗಳಿಂದ ಕಮಾಲ್ ಮಾಡುತ್ತಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳ ಕಸರತ್ತು ಕಣ್ಮನ ಸೆಳೆಯುತ್ತಿದೆ. ಸದ್ಯ ಕಳೆದ ಮೂರು ದಿನಗಳಲ್ಲಿ 80 ಸಾವಿರ ಕೋಟಿ ರೂ. ಒಪ್ಪಂದ ಆಗಿದೆ. 226 ಸಹಭಾಗಿತ್ವ, 201 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಯುದ್ಧ ವಿಮಾನಗಳ ಖರೀದಿ, ನಿರ್ಮಾಣ ಸಂಬಂಧ ಏರೋ ಇಂಡಿಯಾದಲ್ಲಿ ಕಂಪನಿಗಳ ನಡುವೆ ಪರಸ್ಪರ ಒಪ್ಪಂದಗಳಾಗಿವೆ.

ಈ ಬಾರಿಯ ಏರೋ ಶೋನಲ್ಲಿ, ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳು ಸದ್ದು ಮಾಡ್ತಿವೆ. ವಿದೇಶದ ರಕ್ಷಣಾ ಅಧಿಕಾರಿಗಳು, ನಗರದ ಸ್ಟಾರ್ಟ್ ಅಪ್ ಕಂಪನಿಗಳ ಜೊತೆ ಸಾವಿರಾರು ಕೋಟಿಯ ಒಡಂಬಡಿಕೆ ಮಾಡಿಕೊಂಡಿವೆ. ಗೋಪಾಲನ್ ಏರೋ ಸ್ಪೇಸ್ ಕಂಪನಿಯ ಡ್ರೋನ್​​ ಎಲ್ಲರ ಗಮನ ಸೆಳೆಯುತ್ತಿದೆ. ಏರೋ ಇಂಡಿಯಾದಲ್ಲಿ ಬೆಮಲ್‌ ನ ಮಾವನ ರಹಿತ ಮೆಟ್ರೋ ರೈಲು ಕಣ್ಮನ ಸೆಳೆಯುತ್ತಿದೆ. ಇದರ ಜೊತೆಗೆ ಅಗ್ನಿಕಾ ಹೆಸರಿನ ಚಾಲಕನಿಲ್ಲದ ವಿಮಾನವೂ ಸಾಕಷ್ಟು ಸದ್ದು ಮಾಡ್ತಿದೆ.

ಇದನ್ನೂ ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

ಇಂದಿನಿಂದ 2 ದಿನ ಏರ್​ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2023 ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಇಂದಿನಿಂದ 2 ದಿನ ಏರ್​ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದ್ದು ಆನ್​​ಲೈನ್​ನಲ್ಲಿ ಟಿಕೆಟ್ ಖರೀದಿಸಿದವರಿಗಷ್ಟೇ ಪ್ರವೇಶಕ್ಕೆ ಅನುಮತಿ. ಸಾರಂಗ್​ ಹೆಲಿಕಾಪ್ಟರ್​​, ಸೂರ್ಯ ಕಿರಣ್​​, ತೇಜಸ್ ಯುದ್ಧ ವಿಮಾನ, ರಫೆಲ್​​​​ ಯುದ್ಧ ವಿಮಾನ, ಅಮೆರಿಕದ F-35A ಫೈಟರ್​​ ಜೆಟ್​​, HAL ನಿರ್ಮಿತ ಲೈಟ್​ ಕಾಂಬ್ಯಾಕ್ಟ್​ ಹೆಲಿಕಾಪ್ಟರ್​ಗಳ ಪ್ರದರ್ಶನ ಇಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ವೈಮಾನಿಕ ಪ್ರದರ್ಶನ ಶೋ ಆರಂಭವಾಗಲಿದೆ. ಇಂದು ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:36 am, Thu, 16 February 23