Aero India 2023: ದೇಶೀಯ ಉತ್ಪಾದನೆ, ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ- ರಾಜನಾಥ್​ ಸಿಂಗ್​

| Updated By: ವಿವೇಕ ಬಿರಾದಾರ

Updated on: Feb 12, 2023 | 8:21 PM

Aero India Air Show: ಕಳೆದ‌ ಹಲವಾರು ತಿಂಗಳುಗಳ ಪರಿಶ್ರಮ ಈಗ‌ ಫಲ ನೀಡುತ್ತಿದೆ. ಡೈನಾಮಿಕ್ ಸಿಎಂ ಬಸವರಾಜ್​ ಬೊಮ್ಮಾಯಿಯವರಿಂದ ಇದು ಸಾಧ್ಯವಾಗಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್​ನಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸುತ್ತಿದ್ದಾರೆ. ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡೋಕೆ ಇದು ವೇದಿಕೆಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ಹೇಳಿದ್ದಾರೆ.

Aero India 2023: ದೇಶೀಯ ಉತ್ಪಾದನೆ, ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ- ರಾಜನಾಥ್​ ಸಿಂಗ್​
ರಕ್ಷಣಾ ಸಚಿವ ರಾಜನಾಥ್​ ಸಿಂಗ್​
Follow us on

ಬೆಂಗಳೂರು: ನಗರದ ಯಲಹಂಕ ಏರ್​ಬೇಸ್​ನಲ್ಲಿ (Yalahanka Air Base) ನಾಳೆ (ಫೆ.13) ರಿಂದ 14ನೇ ಆವೃತ್ತಿಯ ಏರೋ ಇಂಡಿಯಾ (Aero India) ಏರ್​​ಶೋ (Air Show) ಆರಂಭವಾಗಲಿದೆ. ಈ ಏರ್​ಶೋವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಇಂದು (ಫೆ.12) ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ (Rajnath Singh) ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ವಿಶ್ವಗುರು ಬಸವಣ್ಣ (Basvanna) ಮತ್ತು ನಾಡಪ್ರಭು ಕೆಂಪೇಗೌಡರನ್ನು (Kempegowda) ಸ್ಮರಿಸಿದರು. ಏರೋ ಇಂಡಿಯಾದಲ್ಲಿ 2ನೇ ಬಾರಿಗೆ ಭಾಗಿಯಾಗಿದ್ದೇನೆ. ದೇಶಿಯ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡೋಕೆ ಏರೋ ಇಂಡಿಯಾ ಏರ್​ ಶೋ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ‌ ಹಲವಾರು ತಿಂಗಳುಗಳ ಪರಿಶ್ರಮ ಈಗ‌ ಫಲ ನೀಡುತ್ತಿದೆ. ಡೈನಾಮಿಕ್ ಸಿಎಂ ಬಸವರಾಜ್​ ಬೊಮ್ಮಾಯಿಯವರಿಂದ (Basavaraj Bommai) ಇದು ಸಾಧ್ಯವಾಗಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್​ನಲ್ಲಿ (IT Capital) ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸುತ್ತಿದ್ದಾರೆ. ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡೋಕೆ ಇದು ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.

2020ರಲ್ಲಿ ನಾವು ತುಂಬಾ ದೊಡ್ಡ ಈವೆಂಟ್ ಪ್ಲಾನ್ ಮಾಡಿದ್ದೆವು. ಈ‌ ಬಾರಿ ಅದಕ್ಕಿಂತ ದೊಡ್ಡ ಈವೆಂಟ್ ನಡೆಯಲಿದೆ. ಕರ್ನಾಟಕ, ದೇಶಕ್ಕೆ ಆರ್ಥಿಕ ಬಲ ನೀಡುವುದರಲ್ಲಿ ಮೇಲಿನ ಸ್ಥಾನದಲ್ಲಿದೆ. ರಾಜ್ಯ, ಸೇನೆಗೆ ಬೇಕಾದ ಅನೇಕ ಕಂಪನಿಗಳಿಗೆ ಜಾಗ ನೀಡಿದೆ. ರಾಜ್ಯ ಐಟಿ ಉತ್ಪಾದನಾ ಕ್ಯಾಪಿಟಲ್ ಆಗಿದೆ. 100ಕ್ಕೂ ಅಧಿಕ ಫ್ರೆಂಡ್ಲಿ ಕಂಟ್ರಿಗಳು ಈ ಶೋದಲ್ಲಿ ಭಾಗಿಯಾಗುತ್ತವೆ. ಕಳೆದ ಎಲ್ಲ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ವಿಂಗ್ಸ್ ಆಫ್​ದ ಫ್ರೂಚರ್ ಹೆಸರನಲ್ಲಿ ಇಂಡಿಯಾ‌ ಪೆವಿಲಿಯನ್ ಕಾಣಲಿದೆ ಎಂದು ಹೆಮ್ಮೆವ್ಯಕ್ತಪಡಿಸಿದರು.

ಸ್ಟಾರ್ಟ್ ಅಪ್​ಗಳು ತಮ್ಮ ಕಲೆಯನ್ನು ಇಲ್ಲಿ‌ ಪ್ರದರ್ಶಿಸಲಿವೆ. ಡಿಫೆನ್ಸ್ ಮಿನಿಸ್ಟರ್‌ಗಳ ಕಾನ್ಲೇವ್ ಇರಲಿದೆ. ಸ್ಪೀಡ್ ಕಾನ್‌ಕ್ಲೇವ್ ಆಯೋಜಿಸಲಾಗಿದೆ. ಸೈಬರ್ ಸೆಕ್ಯೂರಿಟಿ, ಆಗ್ಯುಮೆಂಟೆಡ್ ರಿಯಾಲಿಟಿ ಸೇರಿದಂತೆ ಅನೇಕ ಹೊಸತನಗಳನ್ನು ಕಾಣಬಹುದು. ಕರ್ನಾಟಕ ಪೆವಿಲಿಯನ್ ಕೂಡ ಕಾಣಬಹುದು. ರಾಜ್ಯದ ನಾಗರೀಕರ ಉದ್ಯೋಗ ಸೃಷ್ಟಿಸಲು ಕೂಡ ಇದು ಉಪಯೋಗವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಏರ್​ಶೋ ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ

ಬೆಂಗಳೂರಿನಲ್ಲಿ ಏರ್​ಶೋ ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ. 14ನೇ ಬಾರಿಗೆ ಇಲ್ಲಿ ಏರ್​ಶೋ ಆಯೋಜನೆಗೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಅವರಿಗೆ ಧನ್ಯವಾದ. ಕೊರೊನಾ ಸಂದರ್ಭದಲ್ಲೂ ನಮ್ಮಲ್ಲಿ ಆಯೋಜನೆ ಮಾಡಿದ್ದೇವು. ಬೇರೆ ದೇಶದಲ್ಲಿ ಏರ್​ಶೋ ರದ್ದಾಗಿದ್ದರೂ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏರೋ‌ ಇಂಡಿಯಾ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 35 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಕ್ಸಿಬಿಷನ್​ ಆಯೋಜಿಸಲಾಗಿದೆ. 67 ಫ್ಲೈಯಿಂಗ್ ಡಿಸ್ಪ್ಲೇ, 36 ಸ್ಟ್ಯಾಂಡಿಂಗ್​ ಡಿಸ್ಪ್ಲೇ, 809 ಪ್ರದರ್ಶಕರು, 98 ವಿದೇಶ ಕಂಪನಿಗಳು ಏರ್​ಶೋನಲ್ಲಿ ಭಾಗಿಯಾಗಲಿವೆ. 27 ಭಾರತೀಯ ಕಂಪನಿಗಳು ಸೇರಿದಂತೆ 73 ಕಂಪನಿಗಳು ಭಾಗಿಯಾಗಲಿವೆ. ನಮ್ಮ ದೇಶಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿ ತಯಾರಿಸಿಕೊಳ್ಳುತ್ತಿದ್ದೇವೆ. ವಿದೇಶಕ್ಕೂ ರಕ್ಷಣಾ ಸಾಮಗ್ರಿ ರಫ್ತು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Sun, 12 February 23