AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Updates: ಏರೋ ಇಂಡಿಯಾ ಶೋ; ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ; ಹೊಸ ಅಪ್​ಡೇಟ್ಸ್ ಇಲ್ಲಿವೆ

Aero India Show 2023: ಯಲಹಂಕದಲ್ಲಿ ಸೋಮವಾರ ನಡೆಯುವ ಏರೋ ಇಂಡಿಯಾ ಶೋ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಕೆಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಯಲಹಂಕ ಹಾಗೂ ಬಳ್ಳಾರಿ ರಸ್ತೆ ಬಳಸುವವರು ಇತ್ತ ಗಮನ ಕೊಡಿ.

Traffic Updates: ಏರೋ ಇಂಡಿಯಾ ಶೋ; ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ; ಹೊಸ ಅಪ್​ಡೇಟ್ಸ್ ಇಲ್ಲಿವೆ
ಏರೋ ಇಂಡಿಯಾ ಶೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 12, 2023 | 2:22 PM

Share

ಬೆಂಗಳೂರು: ನಾಳೆ ಸೋಮವಾರ ಏರೋ ಇಂಡಿಯಾ ಶೋ (Aero India Show) ಉದ್ಘಾಟನೆಗೊಳ್ಳಲಿದ್ದು, ಅದಕ್ಕಾಗಿ ಯಲಹಂಕ ಸುತ್ತಮುತ್ತ ಟ್ರಾಫಿಕ್ ನಿಯಂತ್ರಣಕ್ಕೆ (Traffic changes) ಕ್ರಮ ಕೈಗೊಳ್ಳಲಾಗಿದೆ. ಫೆಬ್ರುವರಿ 13ರಂದು ಬೆಳಗ್ಗೆ 8ರಿಂದ 11:30ವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್​ನಿಂದ ಎಲಿವೇಟೆಡ್ ರಸ್ತೆಯಲ್ಲಿ (Elevated Road Stretch) ವಾಹನಗಳ ಚಾಲನೆಗೆ ನಿಷೇಧ ಹಾಕಲಾಗಿದೆ. ಕಾರ್ಯಕ್ರಮದ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಪ್ರವೇಶ ಇರುತ್ತದೆ.

ಯಲಹಂಕ ಹಾಗು ಸುತ್ತಲ ಪ್ರದೇಶಗಳಿಗೆ ಹೋಗಬೇಕಾದ ಜನರು ಎಲಿವೇಟೆಡ್ ರಸ್ತೆ ಬದಲು ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಬೇಕು. ವಿಮಾನ ನಿಲ್ದಾಣಕ್ಕೆ ಹೋಗಬೇಕೆನ್ನುವವರು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿದೆ.

ಬೆಂಗಳೂರಿನಲ್ಲಿ ಸಂಚಾರ ವ್ಯತ್ಯಯ

ಏರೋ ಇಂಡಿಯಾ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸುತ್ತಿದ್ದಾರೆ. ಎಲ್ಲಾ 5 ದಿನಗಳಿಗೂ ಅನ್ವಯವಾಗುವಂತೆ ಟ್ರಾಫಿಕ್ ನಿಯಂತ್ರಣ ಕ್ರಮಗಳನ್ನು ಚಾಲನೆಗೆ ತರಲಾಗುತ್ತಿದೆ.

ಏರ್​ಪೋರ್ಟ್​ಗೆ ಹೋಗುವ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಐದು ದಿನಗಳು ಅವಕಾಶ ನಿರಾಕರಿಸಲಾಗಿದೆ. ಬೆಂಗಳೂರಿನ ಪೂರ್ವಭಾಗದಿಂದ ಏರ್​ಪೋರ್ಟ್​ಗೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ಏರ್​ಪೋರ್ಟ್ ತಲುಪಬಹುದು.

ಪಶ್ಚಿಮ ಭಾಗದಿಂದ ಏರ್​ಪೋರ್ಟ್​ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ಹಾದು ಹೋಗಬಹುದು.

ಇದನ್ನೂ ಓದಿ: Abdul Nazeer: ಕರ್ನಾಟಕ ಮೂಲದ ನಿ. ನ್ಯಾ| ಅಬ್ದುಲ್ ನಜೀರ್ ಆಂಧ್ರದ ನೂತನ ರಾಜ್ಯಪಾಲ; ಐತಿಹಾಸಿಕ ತಲಾಖ್, ಅಯೋಧ್ಯೆ ತೀರ್ಪು ನೀಡಿದವರು ಇವರು

ಬೆಂಗಳೂರು ದಕ್ಷಿಣ ಭಾಗದಿಂದ ಏರ್​ಪೋರ್ಟ್​ಗೆ ಹೋಗಲು ಮೈಸೂರು ರಸ್ತೆ, ನಾಯಂಡಹಳ್ಳಿ, ಚಂದ್ರಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ ಕ್ರಾಸ್ ಮತ್ತು ವಿದ್ಯಾನಗರ್ ಕ್ರಾಸ್ ಈ ಮಾರ್ಗ ಬಳಸಬಹುದು.

ದೊಡ್ಡ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳು:

ಬಳ್ಳಾರಿ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರವನ್ನು ಫೆಬ್ರುವರಿ 17ರವರೆಗೂ ತಡೆಯಲಾಗಿದೆ. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ದೊಡ್ಡ ವಾಹನಗಳು ಹಾಗೂ ಖಾಸಗಿ ವಾಹನಗಳು ದೇವನಹಳ್ಳಿ ಬಳಿ ದೊಡ್ಡಬಳ್ಳಾರಪುರ ಕ್ರಾಸ್​ನಿಂದ ತಿರುವು ತೆಗೆದುಕೊಂಡು ರಾಹೆ4 ತುಮಕೂರು ಪುಣೆ ರಸ್ತೆ ಕಡೆ ಹೋಗಬಹುದು.

ತುಮಕೂರು ರಸ್ತೆ ಕಡೆಯಿಂದ ಬರುವ ದೊಡ್ಡ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ಡೈವರ್ಶನ್ ತೆಗೆದುಕೊಂಡು ರಿಂಗ್ ರಸ್ತೆಯತ್ತ ಸಾಗಿ ನೈಸ್ ರಸ್ತೆ ತಲುಪಬಹುದು.

ಇದನ್ನೂ ಓದಿ: PM Narendra Modi: ನಾಳೆ ಏರ್​ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ

ತೋಟಗೆರೆ ಬಸವಣ್ಣ ದೇವಸ್ಥಾನ ಕಡೆಯಿಂದ ಬರುವ ವಾಹನಗಳು ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆಯತ್ತ ಹೋಗಬಹುದು. ನೆಲಮಂಗಲದಿಂದ ಬರುವವವರು ಸೊಂಡೇಕೊಪ್ಪ ಮೂಲಕ ನೈಸ್ ರಸ್ತೆ ತಲುಪಬಹುದು.

ಚಿಕ್ಕಬಾಣಾವರ ಮೂಲಕ ಬರುವ ವಾಹನಗಳು ತೋಟಗೆರೆ ಬಸವಣ್ಣ ದೇವಸ್ಥಾನದತ್ತ ಯೂಟರ್ನ್ ಪಡೆದು ಅಲ್ಲಿಂದ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ತಲುಪಬಹುದು.

ನೆಲಮಂಗಲದಿಂದ ಬರುವ ವಾಹನಗಳು ಸೊಂಡೇಕೊಪ್ಪ ಮೂಲಕ ರೈಸ್ ರಸ್ತೆ ತಲುಪಬಹುದು.

Published On - 2:22 pm, Sun, 12 February 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ