Abdul Nazeer: ಕರ್ನಾಟಕ ಮೂಲದ ನಿ. ನ್ಯಾ| ಅಬ್ದುಲ್ ನಜೀರ್ ಆಂಧ್ರದ ನೂತನ ರಾಜ್ಯಪಾಲ; ಐತಿಹಾಸಿಕ ತಲಾಖ್, ಅಯೋಧ್ಯೆ ತೀರ್ಪು ನೀಡಿದವರು ಇವರು

Karnataka Born Ret. Judge Abdul Nazeer New Andhra Governor: ತಲಾಖ್ ಅಸಿಂಧು ಎಂದು ಮತ್ತು ಬಾಬ್ರಿ ಮಸೀದಿ ಜಾಗ ಹಿಂದೂಗಳಿಗೆ ಕೊಡಬೇಕೆಂದು ತೀರ್ಪು ನೀಡಿದ್ದ ನಿ. ನ್ಯಾ| ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

Abdul Nazeer: ಕರ್ನಾಟಕ ಮೂಲದ ನಿ. ನ್ಯಾ| ಅಬ್ದುಲ್ ನಜೀರ್ ಆಂಧ್ರದ ನೂತನ ರಾಜ್ಯಪಾಲ; ಐತಿಹಾಸಿಕ ತಲಾಖ್, ಅಯೋಧ್ಯೆ ತೀರ್ಪು ನೀಡಿದವರು ಇವರು
ನಿ. ನ್ಯಾ| ಅಬ್ದುಲ್ ನಜೀರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 12, 2023 | 10:39 AM

ಬೆಂಗಳೂರು: ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ (Ret Judge S Abdul Nazeer) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ (New Andhra Governor) ನೇಮಕ ಮಾಡಿದ್ದಾರೆ. ಇಂದು 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್​ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಇದೆ. ದಕ್ಷಿಣಕನ್ನಡ ಜಿಲ್ಲೆಯವರಾದ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಹುಟ್ಟಿದ ಎಸ್ ಅಬ್ದುಲ್ ನಾಜಿರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್​ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ನಂತರ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಅದೇ ಹೈಕೋರ್ಟ್​ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆಯೇ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮೂರನೇ ಜಡ್ಜ್ ಅವರಾಗಿದ್ದಾರೆ.

ಐತಿಹಾಸಿಕ ತೀರ್ಪಿನಲ್ಲಿ ಅಬ್ದುಲ್ ನಜೀರ್

2017ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕವಾದ ಬಳಿಕ ಅಬ್ದುಲ್ ನಜೀರ್ ಕೆಲ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದಾರೆ. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ಅಬ್ದುಲ್ ನಜೀರ್ ಇದ್ದರು. ಆ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿತ್ತು.

ಇದನ್ನೂ ಓದಿ: New Governors: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ರಾಜೀನಾಮೆ; ರಾಷ್ಟ್ರಪತಿಗಳಿಂದ 12 ರಾಜ್ಯಪಾಲರ ನೇಮಕ; ಇಲ್ಲಿದೆ ಪಟ್ಟಿ

ಇನ್ನು, 2019ರ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠದಲ್ಲೂ ಅಬ್ದುಲ್ ನಜೀರ್ ಇದ್ದರು. ರಾಮಮಂದಿರದ ಪರ ತೀರ್ಪು ನೀಡಿದ ನ್ಯಾಯಪೀಠ, ವಿವಾದಿತ ಬಾಬ್ರಿ ಮಸೀದಿ ಜಾಗವನ್ನು ಹಿಂದೂಗಳಿಗೆ ರಾಮಮಂದಿರ ನಿರ್ಮಾಣಕ್ಕೆ ಕೊಟ್ಟು ಆದೇಶಿಸಿತು. ಹಾಗೆಯೇ, ಅಬ್ದುಲ್ ನಜೀರ್ ಅವರು ಕೇಂದ್ರದ ನೋಟ್ ಬ್ಯಾನ್ ಕ್ರಮದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠದಲ್ಲೂ ಇದ್ದರು.

ರಾಷ್ಟ್ರಪತಿಗಳಿಂದ ನೇಮಕವಾದ 12 ರಾಜ್ಯಪಾಲರು

ಅರುಣಾಚಲಪ್ರದೇಶ ರಾಜ್ಯಪಾಲ: ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕ

ಸಿಕ್ಕಿಂ ರಾಜ್ಯಪಾಲ: ಲಕ್ಷ್ಮಣ್ ಪ್ರಸಾದ್ ಆಚಾರ್ಯ

ಜಾರ್ಖಂಡ್ ರಾಜ್ಯಪಾಲ: ಸಿ.ಪಿ. ರಾಧಾಕೃಷ್ಣನ್

ಹಿಮಾಚಲಪ್ರದೇಶ ರಾಜ್ಯಪಾಲ: ಶಿವಪ್ರತಾಪ್ ಶುಕ್ಲಾ

ಅಸ್ಸಾಂ ರಾಜ್ಯಪಾಲ: ಗುಲಾಬ್ ಚಂದ್ ಕಟಾರಿಯಾ

ಛತ್ತೀಸ್​ಗಡ ರಾಜ್ಯಪಾಲ: ಬಿಸ್ವ ಭೂಸನ್ ಹರಿಚಂದನ್

ಮಣಿಪುರ ರಾಜ್ಯಪಾಲ: ಅನುಸೂಯ ಊಕ್ಯೆ

ನಾಗಾಲೆಂಡ್ ರಾಜ್ಯಪಾಲ: ಲಾ ಗಣೇಸನ್

ಮೇಘಾಲಯ ರಾಜ್ಯಪಾಲ: ಫಾಗು ಚೌಹಾಣ್

ಬಿಹಾರ ರಾಜ್ಯಪಾಲ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್

ಅರುಣಾಚಲ ಕೇಂದ್ರಾಡಳಿತದ ಲೆಫ್ಟಿನೆಂಟ್ ಗವರ್ನರ್: ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

Published On - 10:39 am, Sun, 12 February 23