ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮೀಜಿ (89) ಅನಾರೋಗ್ಯದಿಂದ ಲಿಂಗೈಕ್ಯ
ಗರಗದ ಮಡಿವಾಳೇಶ್ವರ ಮಠದ ಪೀಠಾಧಿಪತಿ ಚನ್ನಬಸವ ಮಹಾಸ್ವಾಮೀಜಿ (89)ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. 55 ವರ್ಷಗಳಿಂದ ಮಠದಲ್ಲಿದ್ದ ಸ್ವಾಮೀಜಿಯವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.
ಧಾರವಾಡ: ತಾಲೂಕಿನ ಗರಗದ ಮಡಿವಾಳೇಶ್ವರ ಮಠದ ಪೀಠಾಧಿಪತಿ ಚನ್ನಬಸವ ಮಹಾಸ್ವಾಮೀಜಿ (89)ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. 55 ವರ್ಷಗಳಿಂದ ಮಠದಲ್ಲಿದ್ದ ಸ್ವಾಮೀಜಿಯವರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ವಾರವಷ್ಟೇ ನಡೆದಿದ್ದ ಮಠದ ಜಾತ್ರೆಯಲ್ಲಿ ಚನ್ನಬಸವ ಮಹಾಸ್ವಾಮೀಜಿಯವರು ಅನಾರೋಗ್ಯ ಹಿನ್ನೆಲೆ ಭಾಗವಹಿಸಿರಲಿಲ್ಲ. ಇದೀಗ ನಿಧನರಾಗಿದ್ದು, ಅಪಾರ ಭಕ್ತರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 12.30 ರಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಾಳೆ ಬೆಳಗ್ಗೆ 7.30ಕ್ಕೆ ಶ್ರೀಗಳ ಅಂತಿಮ ಯಾತ್ರೆಯನ್ನ ಹಂಗರಕಿ ಗ್ರಾಮದಿಂದ ಮೂಲಕ ಗರಗ ಗ್ರಾಮದವರೆಗೆ ನಡೆಯಲಿದೆ. ಇನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಗರಗ ಗ್ರಾಮದ ಶ್ರೀಮಠದ ಆವರಣದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ