ಪಿಎಸ್ಐ, ಪಿಡಬ್ಲ್ಯುಡಿ ಹಗರಣದ ಬಳಿಕ ಕೆಪಿಎಸ್​ಸಿ ಅಕ್ರಮ? ಕೆಪಿಎಸ್ಸಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಭ್ಯರ್ಥಿಯಿಂದ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ದೂರು

| Updated By: ಆಯೇಷಾ ಬಾನು

Updated on: May 12, 2022 | 4:19 PM

ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆ ಹುದ್ದೆಗಳ ನೇಮಕಾತಿ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಅಭ್ಯರ್ಥಿ ವಿನ್ಸೆಂಟ್ ಆರೋಪ ಮಾಡಿದ್ದಾರೆ. ವಿನಯ್ ಕುಮಾರ್ ಎಂಬಾತ ಕರೆಮಾಡಿ ಪರೋಕ್ಷವಾಗಿ ಆಮಿಷವೊಡ್ಡಿರುವ ಆರೋಪ ಮಾಡಿದ್ದಾರೆ.

ಪಿಎಸ್ಐ, ಪಿಡಬ್ಲ್ಯುಡಿ ಹಗರಣದ ಬಳಿಕ ಕೆಪಿಎಸ್​ಸಿ ಅಕ್ರಮ? ಕೆಪಿಎಸ್ಸಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಭ್ಯರ್ಥಿಯಿಂದ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ದೂರು
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಪಿಎಸ್ಐ, ಪಿಡಬ್ಲ್ಯುಡಿ ಹಗರಣದ ಬಳಿಕ ಕೆಪಿಎಸ್​ಸಿ ಅಕ್ರಮ? ಕೇಳಿ ಬಂದಿದೆ. ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರ ನೇಮಕದಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅಭ್ಯರ್ಥಿ ವಿನ್ಸೆಂಟ್ ರೋಡ್ರಿಗ್ಸ್ ಎಂಬುವವರು ದೂರು ನೀಡಿದ್ದಾರೆ.

ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆ ಹುದ್ದೆಗಳ ನೇಮಕಾತಿ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಅಭ್ಯರ್ಥಿ ವಿನ್ಸೆಂಟ್ ಆರೋಪ ಮಾಡಿದ್ದಾರೆ. ವಿನಯ್ ಕುಮಾರ್ ಎಂಬಾತ ಕರೆಮಾಡಿ ಪರೋಕ್ಷವಾಗಿ ಆಮಿಷವೊಡ್ಡಿರುವ ಆರೋಪ ಮಾಡಿದ್ದಾರೆ. ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರ ಹುದ್ದೆಗೆ KPSC ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. 2020ರ ಡಿಸೆಂಬರ್‌ನಲ್ಲಿ ಈ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಈ ವೇಳೆ ವಿನಯ್ ಕುಮಾರ್ ಎಂಬಾತ ಕರೆ ಮಾಡಿ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಾಗೂ ಕೆಪಿಎಸ್ಸಿ ಸದಸ್ಯರ ಮೂಲಕ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಎಂದು ವಿನ್ಸೆಂಟ್ ಆರೋಪ ಮಾಡಿದ್ದಾರೆ. ಆದ್ದರಿಂದ ಸೆಲೆಕ್ಷನ್ ಪ್ರೋಸೆಸ್ ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ ಎಂದು ಅಭ್ಯರ್ಥಿ ವಿನ್ಸೆಂಟ್ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ದೂರು ನೀಡಿದ್ದಾರೆ. ಆಯ್ಕೆಯಾದ ಒಟ್ಟು 54 ಹುದ್ದೆಗಳ ಬಗ್ಗೆ ಅನುಮಾನವಿದೆ. KPSC ಪರೀಕ್ಷಾ ಅಕ್ರಮದಲ್ಲಿ ಹಲವರು ಭಾಗಿಯಾಗಿರುವ ಶಂಕೆ ಇದೆ. ಕೆಪಿಎಸ್ಸಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿನ್ಸೆಂಟ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಶಾಸಕ ರಾಜುಗೌಡ ಹೆಸರು ದುರ್ಬಳಕೆ
ಇನ್ನು ಮತ್ತೊಂದೆಡೆ ಕೆಲಸ ಕೊಡಿಸುವುದಾಗಿ ಶಾಸಕ ರಾಜುಗೌಡ ಹೆಸರು ದುರ್ಬಳಕೆ ಕೇಸ್ಗೆ ಸಂಬಂಧಿಸಿ ಪ್ರಕರಣವನ್ನ ಬೆಳಕಿಗೆ ತಂದ ಹೋರಾಟಗಾರ ಚನ್ನಪ್ಪಗೌಡಗೆ ಯಾದಗಿರಿ ಜಿಲ್ಲೆಯ ಸುರಪುರ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮಕ್ಕೆ ತೆರಳಿ ಹೋರಾಟಗಾರ ಚನ್ನಪ್ಪಗೌಡಗೆ ನೋಟಿಸ್ ನೀಡಲಾಗಿದೆ. ನೋಟಿಸಿ ನೀಡಿ ಚನ್ನಪ್ಪಗೌಡನನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುರಪುರ ಸಿಪಿಐ ಸುನಿಲ್ರಿಂದ ಹೋರಾಟಗಾರ ಚನ್ನಪ್ಪಗೌಡ ವಿಚಾರಣೆ ನಡೆದಿದೆ. ವಂಚನೆ ಪ್ರಕರಣದ ಕಿಂಗ್ಪಿನ್ ರೇಖಾ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಆಡಿಯೋ ಕ್ಲಿಪ್ ವೈರಲ್ ಆಗಿದ್ದೇಕೆ? ಮಾತನಾಡಿರುವವರು ಯಾರು? ಆಡಿಯೋದಲ್ಲಿ ಶಾಸಕ ರಾಜುಗೌಡ ಹೆಸರು ದುರ್ಬಳಕೆಯಾಗಿದ್ದೇಕೆ? ವಿವಿಧ ಆಯಾಮಗಳಲ್ಲಿ ಸುರಪುರ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:19 pm, Thu, 12 May 22