ಬೆಂಗಳೂರು, ನವೆಂಬರ್ 03: ಜಾತಿ ನಿಂದನೆ ಆರೋಪದಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ (Puneeth Kerehalli) ಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾತಿ ನಿಂದನೆ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆಯಲ್ಲಿ ಹರೀಶ್ ಭೈರಪ್ಪ ಎಂಬುವವರು ದೂರಿ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ನಾಳೆ ನ್ಯಾಯಾಲಯದ ಪೊಲೀಸರು ಮುಂದೆ ಹಾಜರುಪಡಿಸಲಿದ್ದಾರೆ.
ಈ ಕುರಿತಾಗಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಟ್ವೀಟ್ ಮಾಡಿದ್ದು, ಜಾತಿ ನಿಂದನೆನಾ? ಯಾವಾಗ? ಏನಂತ? ಯಾರಿಗೆ? ಅಂದು ಉಪೇಂದ್ರ, ಇಂದು ಪುನೀತ್, ನಾಳೆ ಇನ್ಯಾರೋ?
ಅಟ್ರಾಸಿಟಿ ದುರ್ಬಳಕೆ ಇದಕ್ಕೆ ತಡೆ ಯಾವಾಗ. ಇದಕ್ಕೊಂದು ಬೃಹತ್ ಹೋರಾಟ ಆಗಲೇಬೇಕು ಎಂದು ಬರೆದುಕೊಂಡಿದ್ದಾರೆ.
ಜಾತಿ ನಿಂದನೆನಾ? ಯಾವಾಗ? ಏನಂತ? ಯಾರಿಗೆ?
ಅಂದು ಉಪೇಂದ್ರ, ಇಂದು ಪುನೀತ್, ನಾಳೆ ಇನ್ಯಾರೋ?#ಅಟ್ರಾಸಿಟಿ_ದುರ್ಬಳಕೆ ಇದಕ್ಕೆ ತಡೆ ಯಾವಾಗ?
“ಇದಕ್ಕೊಂದು ಬೃಹತ್ ಹೋರಾಟ ಆಗಲೇ ಬೇಕು” pic.twitter.com/HfEHBeNCn8— Puneeth Kerehalli (@Puneeth74353549) November 2, 2023
ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ಆರೋಪಿಗಳನ್ನ 7 ದಿನ ಪೋಲಿಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸಲಹಾ ಸಮಿತಿಯನ್ನು ನೇಮಕ ಮಾಡಿತ್ತು. ಪುನೀತ್ ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ವರದಿಯಲ್ಲಿ ಸಲಹಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ ಪುನೀತ್ ಕೆರೆಹಳ್ಳಿಯನ್ನು ಬಂಧನದಿಂದ ಸರ್ಕಾರ ಮುಕ್ತಗೊಳಿಸಿತ್ತು.
ಇದನ್ನೂ ಓದಿ: ಬೆಳಗಾವಿ: ಗಂಡನನ್ನೇ ಕೊಲೆ ಮಾಡಿ ಸಹಜ ಸಾವೆಂದು ನಾಟಕ; ತನಿಖೆ ಬಳಿಕ ಹೊರಬಿತ್ತು ಹತ್ಯಗೆ ಕಾರಣ?
ಜಾನುವಾರು ಸಾಗಾಟ ವೇಳೆ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ನಾಲ್ಕು ಆರೋಪಿಗಳಿಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ಆದೇಶ ಹೊರಡಿಸಿತ್ತು.
ಪುನೀತ್ ಕೆರೆಹಳ್ಳಿ ವಿರುದ್ಧ ಡಿಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಗೋ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸಾಯಿಸಿದ್ದರು ಎಂಬ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಇತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ ಗೂಂಡಾ ಕಾಯ್ದೆಯಡಿ ಪರಪ್ಪನ ಆಗ್ರಹಾರಕ್ಕೆ ಹಾಕಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:11 pm, Fri, 3 November 23