AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ಎಫ್​ಐಆರ್ ದಾಖಲು

ಖಾತೆದಾರರ ಹಣ ದುರ್ಬಳಕೆ ಆರೋಪದಡಿ ಬಸವನಗುಡಿಯ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Bengaluru News: ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ಎಫ್​ಐಆರ್ ದಾಖಲು
ಸಾಂದರ್ಭಿಕ ಚಿತ್ರ
Jagadisha B
| Edited By: |

Updated on:Jul 07, 2023 | 7:08 PM

Share

ಬೆಂಗಳೂರು: ಎಸಿಎಂಎಂ ಕೊರ್ಟ್ (ACMM Court) ನಿರ್ದೇಶನದ ಮೇರೆಗೆ ಖಾತೆದಾರರ ಹಣ ದುರ್ಬಳಕೆ ಆರೋಪದಡಿ ಬಸವನಗುಡಿಯ (Basavangudi) ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಖಾಸಗಿ ಕಂಪನಿಯೊಂದರ ಪಾಲುದಾರರಾದ ಆರ್​​ಎನ್ ನಾಗರಾಜು ಎಂಬುವರು ಸಹಕಾರಿ ಬ್ಯಾಂಕ್​​ನಲ್ಲಿ ಚಾಲ್ತಿ ಖಾತೆ ಹೊಂದಿದ್ದರು. ಹಾಸನದ ಎಸ್​ಬಿಐ ಬ್ಯಾಂಕ್​​ನ ನಾಲ್ಕು ಖಾತೆಯ 1.49 ಕೋಟಿ ರೂ. ಹಣ ಸಹಕಾರಿ ಬ್ಯಾಂಕ್​​ನ ಕಂಪನಿ ಖಾತೆಗೆ ಜಮಾ ಮಾಡಿದ್ದರು.

ಇದನ್ನೂ ಓದಿ: ಕರ್ನಾಟಕ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ; 5 ಗ್ಯಾರಂಟಿಗಳ ಜಾರಿಗೆ 52,000 ಕೋಟಿ ರೂ

ಬಳಿಕ ಗ್ರಾಹಕರು ನಗದು ರೂಪದಲ್ಲಿ ಹಣ ಪಡೆಯಲು ಮುಂದಾದಾಗ ಖಾತೆಯಲ್ಲಿ ಹಣ ಇಲ್ಲವೆಂದು ತಿರಸ್ಕಾರ ಮಾಡಿದ್ದಾರೆ. ಅಲ್ಲದೇ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆ ಇದ್ದರೂ ಇಲ್ಲಸಲ್ಲದ ಕಾರಣ ಹೇಳಿದ್ದಾರೆ. ಇದೇ ವೇಳೆ ಬ್ಯಾಂಕ್ ಸ್ಟೇಟ್ಮೆಂಟ್ ತಿರುಚಿದ ಆರೋಪ ಕೂಡ ಕೇಳಿಬಂದಿದೆ.

ಈ ಹಿನ್ನೆಲೆ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಸವನಗುಡಿ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಆರೋಪ ಸಂಬಂಧ ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Fri, 7 July 23