PSI, ಸಹಾಯ ಪ್ರಾಧ್ಯಾಪಕರ ನೇಮಕಾತಿ ಬಳಿಕ RTO ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ!

ಕೆಪಿಎಸ್​ಸಿ 2016ರಲ್ಲಿ ನೇರ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವಿದ್ಯಾರ್ಹತೆ, ದೈಹಿಕ ಪರೀಕ್ಷೆ, ಹೆವಿ ಡಿಎಲ್ ಕಡ್ಡಾಯಗೊಳಿಸಿತ್ತು. ಸೇವಾನುಭವ ಹೊಂದಿರದ, ದೈಹಿಕ ಪರೀಕ್ಷೆಯಲ್ಲಿ ಆಯ್ಕೆ ಆಗದವರನ್ನ ರಿಜೆಕ್ಟ್ ಮಾಡಿತ್ತು.

PSI, ಸಹಾಯ ಪ್ರಾಧ್ಯಾಪಕರ ನೇಮಕಾತಿ ಬಳಿಕ RTO ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:May 04, 2022 | 11:06 AM

ಬೆಂಗಳೂರು: ಪಿಎಸ್ಐ (PSI), ಸಹಾಯ ಪ್ರಾಧ್ಯಾಪಕರ ನೇಮಕಾತಿ ಬಳಿಕ ಆರ್ಟಿಓ (RTO) ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಕೆಪಿಎಸ್ಸಿ ಹಾಗೂ ಸಾರಿಗೆ ಇಲಾಖೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದ್ದು, ಕೆಪಿಎಸ್ಸಿಯಿಂದ 144 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಆಗಿದೆ. 92 ಅನರ್ಹರನ್ನು ಒಳಗೊಂಡ 144 ಜನರ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಕಳೆದ ವಾರ ಮತ್ತೆ ಬಿಡುಗಡೆ ಮಾಡಿದ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ರಿಜೆಕ್ಟ್ ಆದ 92 ಅಭ್ಯರ್ಥಿಗಳ ಹೆಸರು ನಮೂದಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಕೆಪಿಎಸ್​ಸಿ 2016ರಲ್ಲಿ ನೇರ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವಿದ್ಯಾರ್ಹತೆ, ದೈಹಿಕ ಪರೀಕ್ಷೆ, ಹೆವಿ ಡಿಎಲ್ ಕಡ್ಡಾಯಗೊಳಿಸಿತ್ತು. ಸೇವಾನುಭವ ಹೊಂದಿರದ, ದೈಹಿಕ ಪರೀಕ್ಷೆಯಲ್ಲಿ ಆಯ್ಕೆ ಆಗದವರನ್ನ ರಿಜೆಕ್ಟ್ ಮಾಡಿತ್ತು. ಸ್ವತಃ ಕೆಪಿಎಸ್​ಸಿ 2019 ರಲ್ಲಿ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ಅನರ್ಹ ಅಭ್ಯರ್ಥಿಗಳನ್ನ ಹೆಸರು ಉಲ್ಲೇಖ ಮಾಡಿತ್ತು.ಆದರೆ ಕಳೆದ ವಾರ ಮತ್ತೆ ಬಿಡುಗಡೆ ಮಾಡಿದ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ರಿಜೆಕ್ಟ್ ಆದ 92 ಅಭ್ಯರ್ಥಿಗಳ ಹೆಸರು ಕಂಡುಬಂದಿದೆ. ಹೀಗಾಗಿ ಇದರಲ್ಲಿ ಅಕ್ರಮ ನಡೆದಿದೆ ಎಂದು ಅಂತ ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ಇನ್ನು ಪಿಎಸ್​ಐ ನೇಮಕಾತಿಯಲ್ಲಿ ನಡೆದ ಅಕ್ರಮ ದಿನಕ್ಕೊಂದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿಬಂದಿದೆ. ಕಿಂಗ್​ಪಿನ್​ಗಳ ಜತೆ ಮಧ್ಯವರ್ತಿಗಳಾಗಿ ಕೆಲವು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳಿಂದಲೇ ಈ ಅಕ್ರಮ ಡೀಲ್​ ನಡೆದಿರುವ ಅನುಮಾನ ಹೆಚ್ಚಾಗಿದೆ. ಕಿಂಗ್​ಪಿನ್​ ರುದ್ರಗೌಡ ಪಾಟೀಲ್ ಅಭ್ಯರ್ಥಿ ಪರ ​ಹಣ ಸಂದಾಯ ಮಾಡಿದ್ದಾನೆ. ಸದ್ಯ ಓರ್ವ ಅಧಿಕಾರಿ ಕರೆದು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ

ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ

ಐದು ಕೆಜಿಯ ಕೇಕ್ ಕತ್ತರಿಸಿ ಸಾಕು ಕುರಿಯ ಹುಟ್ಟುಹಬ್ಬ ಆಚರಿಸಿದ ಕುರಿ ವ್ಯಾಪಾರಿ; ಫೋಟೋಗಳು ಇಲ್ಲಿವೆ

Published On - 10:59 am, Wed, 4 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್