ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒ ಹತ್ಯೆ ಕೇಸ್ (Double Murder Case) ಗೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಅರುಣ್ ಕುಮಾರ್ ಆಜಾದ್ನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈತನ ಪಾತ್ರ ಹಾಗೂ ಸಹಾಯದ ಬಗ್ಗೆ ಈಗಷ್ಟೇ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ.
ಆರೋಪಿ ಅರುಣ್ ಕುಮಾರ್ ಆಜಾದ್ನನ್ನು ಜು. 12ರ ರಾತ್ರಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಎಂಡಿ ಫಣೀಂದ್ರ ಮತ್ತು ಸಿಇಒ ವಿನುಕುಮಾರ್ ಕೊಲೆಗೆ ಸುಪಾರಿ ನೀಡಿರುವುದಾಗಿ ಹೇಳಿದ್ದಾನೆ.
ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್; ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಅರೆಸ್ಟ್
ಅರುಣ್ ಕುಮಾರ್ ಜಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಕಂಪನಿ ನಡೆಸುತ್ತಿದ್ದ. ಕೈಯಲ್ಲಿ ಗನ್ ಹಿಡಿದು ಬಿಲ್ಡಪ್ ಕೊಡುತ್ತಿದ್ದ. ತನ್ನ ವ್ಯಾವಹಾರಕ್ಕೆ ಅಡ್ಡ ಬರುವವರಿಗೆ ಹೆದರಿಸಿ, ಅಲ್ಲಿಗೆ ಯಾರು ಸುಳಿಯದಂತೆ ಹವಾ ಮೈಂಟೇನ್ ಮಾಡುತ್ತಿದ್ದ. ಬೇರೆ ಇಂಟರ್ನೆಟ್ ಕೆಬಲ್ನವರು ಬಂದರೆ ಸಾಕು ಅವರಿಗೆ ಅವಾಜ್ ಹಾಕಿ ಕುಳಿಸುತ್ತಿದ್ದ.
ಸ್ಥಳೀಯ ಶಾಸಕರ ಜೊತೆ ಕೂಡ ಅರುಣ್ ಕುಮಾರ್ ಗುರುತಿಸಿಕೊಂಡಿದ್ದ. YKPL ಹೆಸರಿನಲ್ಲಿ ಕಬ್ಬಡಿ ಟೂರ್ನಮೆಂಟ್ ಸಹ ಆಯೋಜನೆ ಮಾಡಿದ್ದ. ಸಮಾಜ ಸೇವಕನ ರೀತಿಯಲ್ಲಿ ಪೋಸ್ ಕೊಡುತ್ತಿದ್ದ. ಶಾಸಕರ ಜತೆಯಿದ್ದು, ನಂತರ ಒನ್ ಫೋರ್ಸ್ ಸಂಘಟನೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್: ಹತ್ಯೆ ಹಿಂದಿದೆಯಾ ಜಿ-ನೆಟ್ ಕಂಪನಿ ಮಾಲೀಕನ ಕೈವಾಡ?
ಇನ್ನೂ ತನ್ನ ಕಂಪನಿಗೆ ವಿರುದ್ದವಾಗಿ ಯಾರಾದರೂ ಮಾರ್ಕೇಟಿಂಗ್ ಮಾಡಿದರೆ ಅವರ ಮೇಲೆ ಕೂಡ ಹಲ್ಲೆ ಮಾಡಿಸುತ್ತಿದ್ದ. ಇವನ ಕೈಯಿಂದ ಸಾಕಷ್ಟು ಜನ ಒದೆ ತಿಂದು ಕೆಲಸ ಬಿಟ್ಟಿದ್ದಾರೆ. ಬನ್ನೇರುಘಟ್ಟ ರಸ್ತೆಯ ಬಿಳೆಕಹಳ್ಳಿಯ ವಿಜಯ ಬ್ಯಾಂಕ್ ಲೇಔಟ್ ಮನೆಯನ್ನೆ ಕಚೇರಿ ಮಾಡಿಕೊಂಡಿದ್ದ.
ಬಂಧನವಾದರೂ ಆರೋಪಿ ಅರುಣ್ ಪೊಗರು ಮಾತ್ರ ಕಡಿಮೆ ಆಗಿಲ್ಲ. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಪೊಲೀಸ್ ಸಿಬ್ಬಂದಿ ಹೆಗಲ ಮೇಲೆಯೇ ಕೈ ಹಾಕಿದ್ದಾನೆ. ಕಾರಿನೊಳಗೆ ಕುಳಿತ್ತಿದ್ದ ಅರುಣ್ ಪಕ್ಕದಲ್ಲೇ ಇದ್ದ ಸಿಬ್ಬಂದಿ ಹೆಗಲ ಮೇಲೆ ಕೈ ಹಾಕಿದ್ದಾನೆ. ತಕ್ಷಣ ಕೈ ಕೆಳಗಿಳಿಸುವಂತೆ ಸಿಬ್ಬಂದಿಗಳು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Thu, 13 July 23