ಮನೆಯನ್ನೇ ಪಾರ್ಕ್ ಮಾಡಿದ ಪರಿಸರ ಪ್ರೇಮಿ; 250ಕ್ಕೂ ಹೆಚ್ಚು ಬಗೆಯ ಗಿಡಗಳ ಹಸಿರ ಮನೆ

| Updated By: ಆಯೇಷಾ ಬಾನು

Updated on: Jun 20, 2024 | 8:06 AM

ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿ ಮಾರ್ಪಡುತ್ತಿದೆ. ನಗರದಲ್ಲಿ ಹಸಿರನ್ನ ನೋಡುವುದೇ ಅಪರೂಪವಾಗಿ ಹೋಗಿದೆ. ಈ ಮಧ್ಯೆ ಡಾಲೋರ್ಸ್ ಕಾಲೋನಿಯಲ್ಲಿ ಪರಿಸರ ಪ್ರೇಮಿಯೊಬ್ಬರು ತಮ್ಮ ಮನೆಯನ್ನೇ ಸುಂದರ ಪಾರ್ಕ್ ಅನ್ನಾಗಿ ಮಾಡಿಕೊಂಡಿದ್ದು, ನಗರದ ಜನರಿಗೆ ಮಾದರಿಯಾಗಿದ್ದಾರೆ.

ಮನೆಯನ್ನೇ ಪಾರ್ಕ್ ಮಾಡಿದ ಪರಿಸರ ಪ್ರೇಮಿ; 250ಕ್ಕೂ ಹೆಚ್ಚು ಬಗೆಯ ಗಿಡಗಳ ಹಸಿರ ಮನೆ
ಪರಿಸರ ಪ್ರೇಮಿ ಮನೆ
Follow us on

ಬೆಂಗಳೂರು, ಜೂನ್.20: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಬೆಂಗಳೂರು (Bengaluru) ಇತ್ತೀಚಿನ ದಿನಗಳಲ್ಲಿ ಆಧುನೀಕರಣದ ಹೊಡೆತಕ್ಕೆ ಸಿಕ್ಕಿ ಒದ್ದಾಡುತ್ತಿದೆ. ಒಂದು ಕಾಲದಲ್ಲಿ ಉದ್ಯಾನ ನಗರ ಎಂದೇ ಹೆಸರಾಗಿದ್ದ ಸಿಲಿಕಾನ್ ಸಿಟಿ ಈಗ ಪರಿಸರ ಜಾಗೃತಿಯ ಅರಿವು ಮೂಡಿಸಿಕೊಳ್ಳುವ ಅನಿವಾರ್ಯತೆಯ ಹಂತಕ್ಕೆ ಬಂದು ನಿಂತಿದೆ. ಸಧ್ಯ ಹಲವೆಡೆ ಪರಿಸರ ನಾಶವಾಗುತ್ತಿದ್ದರೂ ಅಪ್ಪಟ ಪರಿಸರ ಪ್ರೇಮಿಗಳ ಕಾಳಜಿ ಕೆಲವೆಡೆ ಕಾಣಸಿಗುತ್ತಿದೆ. ಡಾಲರ್ಸ್‌ ಕಾಲೋನಿಯಲ್ಲಿರುವ (Dollars Colony) ಪರಿಸರ ಪ್ರೇಮಿಯಾಗಿರುವ ಮಟಿಲ್ಡಾ ಡಿಸೋಜ ಅವರು ತಮ್ಮ ಮನೆಯಲ್ಲೇ ಮಿನಿ ಉದ್ಯಾನವನ ಸೃಷ್ಟಿಸಿ ಮರ, ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬೇರೆ ಬೇರೆ ನಗರದಿಂದ ಗಿಡಗಳನ್ನು ತಂದು ನೆಟ್ಟಿದ್ದಾರೆ. ಇವರು 200ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.

ಮಟಿಲ್ಡಾ ಡಿಸೋಜ ತಮ್ಮ ಮನೆಯ 1500 ಚ.ಅಡಿ ಜಾಗದಲ್ಲಿ ಮಿನಿ ಪ್ಲಾಟ್, ಲಿಲಿ ಹೂ, ದಾಸವಾಳ, ಗುಲಾಬಿ, ಲ್ಯಾವೆಂಡರ್, ಬಿದಿರು, ಹಾವಿನ ಗಿಡ (ಸ್ನೇಕ್ ಪ್ಲಾಂಟ್), ಜೇಡ್ ಸಸ್ಯಗಳು, ಪಿಯೋನಿ, ತುಳಸಿ, ರಬ್ಬರ್ ಪ್ಲಾಂಟ್ ಸೇರಿದಂತೆ ಹಲವು ರೀತಿಯ ಹಸಿರು ಗಿಡಗನ್ನು ಬೆಳೆಸಿದ್ದಾರೆ. ಜೊತೆಗೆ ಮನೆಯ ಹೊರಾಂಗಣದಲ್ಲಿ ಬೇವು, ಮಾವು, ಪಪ್ಪಾಯ, ಡ್ರಾಗನ್ ಫ್ರೋಟ್ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ನೆಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಮ್ಮ ಮನೆಯಲ್ಲಿ ಗಿಡ ನೆಡುವ ಕೆಲಸವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ಪರಿಹಾರಕ್ಕೆ ಸುರಂಗ ಮಾರ್ಗ: ಎಲ್ಲೆಲ್ಲಿ ಹಾದುಗೋಗಲಿದೆ? ಎಂಟ್ರಿ – ಎಕ್ಸಿಟ್ ವಿವರ ಇಲ್ಲಿದೆ ನೋಡಿ

ಡಿಸೋಜ, ಮೂಲತಃ ಕೊಡಗಿನವರಾಗಿದ್ದು, ಮಂಗಳೂರು, ಕೇರಳ, ಆಂಧ್ರ, ಹಾಸನ ಹೀಗೆ ಹಲವು ಜಿಲ್ಲೆಗಳಿಂದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಬೆಳೆಸಬಹುದಾದಂತ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ. ಭೂಮಿಯ ಮೇಲೆ ಪ್ರಾಣಿ, ಪಕ್ಷಿ, ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲವೂ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗೆ ಪರಿಸರವನ್ನು ಅವಲಂಬಿತವಾಗಿದೆ. ಪ್ರತಿಯೊಂದು ಮನೆಯಲ್ಲಿ ಐದರಿಂದ ಹತ್ತು ಗಿಡಗಳನ್ನು ಬೆಳೆಸಿದರೂ ನಮ್ಮ ಪರಿಸರವನ್ನು ನಾವೇ ಸಂರಕ್ಷಣೆ ಮಾಡಬಹುದು. ಈ ವರ್ಷ ಆದಂತಹ ಬರಗಾಲವನ್ನ ಮುಂದೆ ಆಗದಂತೆ ತಡೆಯಬಹುದು ಅಂತ ಡಿಸೋಜಾ ಹೇಳಿದ್ರು.

ಒಟ್ನಲ್ಲಿ, ಪರಿಸರ ಎಷ್ಟು ಮುಖ್ಯ ಎನ್ನುವುದನ್ನು ನಾಗರೀಕರು ಮರೆತಿದ್ದಾರೆ. ಇಂದು ಕಾಡು ಇದ್ದಂತಹ ಜಾಗದಲ್ಲಿ ನೆಮ್ಮದಿ ಹುಡುಕಲು ಹೊರಟ ಮಾನವ ಅಲ್ಲೂ ರೆಸಾರ್ಟ್ ಹೆಸರಿನಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದಾನೆ. ಇಂದಿನ ದಿನಗಳಲ್ಲಿ ಪರಿಸರವನ್ನು ನಾವು ಉಳಿಸಿ ಬೆಳೆಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಾವು ಪಶ್ಚಾತಾಪಪಡುವುದು ಖಂಡಿತ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ