
ಬೆಂಗಳೂರು, ಮೇ 26: ಮಕ್ಕಳು ಒಂದು ಒಳ್ಳೆಯ ಕೆಲಸ ಮಾಡಿಕೊಂಡು ಜೀವನದಲ್ಲಿ ಆರಾಮವಾಗಿದ್ದರೆ ಸಾಕು ಎನ್ನುವುದು ಅದೆಷ್ಟೋ ಪೋಷಕರ (parents) ಆಸೆ. ಅದರಲ್ಲೂ ಮಕ್ಕಳು ಸಾಧನೆ ಮಾಡಿದರೆ ಪೋಷಕರ ಖುಷಿಗೆ ಪಾರವೇ ಇರಲ್ಲ. ಬೆಂಗಳೂರಿನ ಅದೊಂದು ಪೋಷಕರಿಗೆ (Bengaluru family) ಇಂತಹದೊಂದು ಖುಷಿಗೆ ಕಾರಣರಾಗಿದ್ದಾರೆ. ನೆಲದಿಂದ ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಚಂಡೀಗಢ ಟು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ಭಾವನಾತ್ಮಕ ಕ್ಷಣಕ್ಕೆ ಕಾರಣವಾಗಿತ್ತು.
ಉಳಿದ ಪ್ರಯಾಣಿಕರಿಗೆ ಅದೊಂದು ಸಾಮಾನ್ಯ ವಿಮಾನ ಪ್ರಯಾಣವಾಗಿತ್ತು. ಆದರೆ ಅನಿಲ್ ಮತ್ತು ಅರ್ಚನಾ ಚೌಧರಿ ದಂಪತಿಗೆ ಮರೆಯಲಾಗದ ದಿನವಾಗಿತ್ತು. ಏಕೆಂದರೆ ಅವರ ಮಗ ಅತುಲ್ ಚೌಧರಿ, ವಿಮಾನ ಹಾರಾಟ ನಡೆಸುವುದು ಮಾತ್ರವಲ್ಲದೇ, ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ಕಮಾಂಡ್ ಮಾಡುತ್ತಿದ್ದರು.
ಇದನ್ನೂ ಓದಿ: 3 ಸಾವಿರ ಕೋಟಿ ರೂ. ಪಿಎಫ್ ಬಾಕಿ ಉಳಿಸಿಕೊಂಡ ಕೆಎಸ್ಆರ್ಟಿಸಿ, ಬಿಎಂಟಿಸಿ: ಪಿಎಫ್ ಸಿಗದೆ ಸಂಕಷ್ಟದಲ್ಲಿ ಸಾರಿಗೆ ನೌಕರರು
ಈ ಹೃದಯಸ್ಪರ್ಶಿ ಕ್ಷಣವನ್ನು ಸತ್ವಃ ಅತುಲ್ ಅವರ ತಂದೆ ಅನಿಲ್ ಕಾಂತ್ ಚೌಧರಿ ಅವರು ತಮ್ಮ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗ ಹೇಗೆ ಪೈಲಟ್ ಸ್ಥಾನದಿಂದ ಕ್ಯಾಪ್ಟನ್ ಸ್ಥಾನಕ್ಕೇರಿದರು ಎಂಬುವುದನ್ನು ಹೇಳಿದ್ದಾರೆ.
‘ಒಬ್ಬ ವ್ಯಕ್ತಿಯು ತನ್ನ ನಿಯಮಿತ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೇರಿದಾಗ ಆತನ ಜವಾಬ್ದಾರಿಗಳು ಕೂಡ ಬದಲಾಗುತ್ತವೆ. ಈ ಗಮನಾರ್ಹ ಬದಲಾವಣೆಯೂ ನಂಬಿಕೆ ಮತ್ತು ಗೌರವಕ್ಕೆ ಒಂದು ಮಹತ್ವದ ಹೆಜ್ಜೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಕಾಕ್‌ಪಿಟ್‌ನಲ್ಲಿ ಬಲ ಸೀಟಿನಿಂದ ಎಡ ಸೀಟಿಗೆ ವರ್ಗಾವಣೆಗೊಳ್ಳುವವರು ಸೀನಿಯರ್ ಫಸ್ಟ್ ಆಫೀಸರ್ (SFO) ಕ್ಯಾಪ್ಟನ್ ಆಗುತ್ತಾರೆ. ಸಹ-ಪೈಲಟ್‌ಗಳು ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಮುಖ್ಯವಾಗಿ ಪ್ರಯಾಣಿಕರ ವಿಶ್ವಾಸವನ್ನು ಕಾಪಾಡುವುದು ಇವರ ಹೊಣೆಯಾಗಿರುತ್ತದೆ. ಕ್ಯಾಪ್ಟನ್ ತನ್ನ ವಿಮಾನದಲ್ಲಿರುವ ಪ್ರಯಾಣಿಕರ ರಕ್ಷಕನಾಗಿರುತ್ತಾನೆ ಎಂದಿದ್ದಾರೆ.
‘ಪ್ರತಿಯೊಬ್ಬ ಪೈಲಟ್‌ಗೆ ಇದೊಂದು ದೊಡ್ಡ ಕ್ಷಣ, ಅದರಲ್ಲೂ ಆ ಪೈಲಟ್‌ನ ಪೋಷಕರಿಗೆ ಇದು ಇನ್ನೂ ತುಂಬಾ ದೊಡ್ಡ ಕ್ಷಣ. ಕಳೆದ ಗುರುವಾರ ಅರ್ಚನಾ ಚೌಧರಿ ಮತ್ತು ನಾನು ಈ ಬದಲಾವಣೆಯನ್ನು ಕಂಡೆವು. ನಮ್ಮ ಮಗ ಕ್ಯಾಪ್ಟನ್ ಆಗುವುದರ ಮೂಲಕ ಮೊದಲ ಬಾರಿಗೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ. ಇದು ನಮಗೆ ಖುಷಿಯ ವಿಚಾರ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Rains: ಕರವಾಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
‘ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಅತುಲ್ ಚೌಧರಿ ಪರಿಣಾಮಕಾರಿಯಾಗಿ ತಮ್ಮ ಕಾರ್ಯವನ್ನ ನಿರ್ವಹಿಸುತ್ತಾರೆ ಮತ್ತು ಪ್ರಯಾಣಿಕರು ಸೇರಿದಂತೆ ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ ಎಂಬ ನಂಬಿಕೆ ಇದೆ. ಯಾವಾಗಲೂ ಹಾರುತ್ತಲೇ ಇರಿ, ಖುಷಿಯಾಗಿ ಇರುವಂತೆ’ ತಮ್ಮ ಮಗನಿಗೆ ಚೌಧರಿ ದಂಪತಿ ಶುಭಾಶಯ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 am, Mon, 26 May 25