ಅನಂತ ಕುಮಾರ್ ಹೆಗಡೆ ಕಾರು ಕಿರಿಕ್: ವ್ಯಕ್ತಿ ಮೇಲೆ ಹಲ್ಲೆ ಒಪ್ಪಿಕೊಂಡ ಡ್ರೈವರ್, ಗನ್ ಮ್ಯಾನ್..!

ಉತ್ತರ ಕನ್ನಡದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಪುತ್ರ, ಚಾಲಕ ಮತ್ತು ಗನ್ಮ್ಯಾನ್ ಅವರ ವಿರುದ್ಧ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹಳೇ ನಿಜಗಲ್ ಬಳಿ ಘಟನೆ ನಡೆದಿದ್ದು, ಓವರ್‌ ಟೇಕಿಂಗ್‌ ವಿಚಾರದಲ್ಲಿ ಜಗಳ ಆರಂಭವಾಗಿದೆ ಎನ್ನಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಲಕ ಹಾಗೂ ಗನ್ಮ್ಯಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಅನಂತ ಕುಮಾರ್ ಹೆಗಡೆ ಕಾರು ಕಿರಿಕ್:  ವ್ಯಕ್ತಿ ಮೇಲೆ ಹಲ್ಲೆ ಒಪ್ಪಿಕೊಂಡ ಡ್ರೈವರ್, ಗನ್ ಮ್ಯಾನ್..!
ಅನಂತ ಕುಮಾರ್ ಹೆಗಡೆ ಕಾರು ಚಾಲಕನಿಂದ ಹಲ್ಲೆ
Updated By: ರಮೇಶ್ ಬಿ. ಜವಳಗೇರಾ

Updated on: Jun 23, 2025 | 7:41 PM

ನೆಲಮಂಗಲ, ಜೂನ್​ 23: ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ (BJP) ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ (Ananth Kumar Hegde) ಅವರ ಪುತ್ರ, ಗನ್‌ಮ್ಯಾನ್‌ ಮತ್ತು ಕಾರು ಚಾಲಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಳೇ ನಿಜಗಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ (National Highway 4) ಘಟನೆ ನಡೆದಿದೆ. ಮಾಜಿ ಸಂಸದ ಅನಂತ್​ ಕುಮಾರ್ ಹೆಗಡೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

ಈ ವೇಳೆ, ಅನಂತ್ ಕುಮಾರ್ ಹೆಗಡೆ ಅವರು ಇದ್ದ ಕಾರನ್ನು ಮತ್ತೊಂದು ಕಾರು ಓವರ್​​ಟೇಕ್​ ಮಾಡಿದೆ. ಓವರ್‌ಟೇಕ್‌ ಮಾಡಿದ್ದಕ್ಕೆ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಮತ್ತು ಅನಂತ್ ಕುಮಾರ್ ಹೆಗಡೆ ಅವರ ಪುತ್ರ ಆಶುತೋಷ್ ಮತ್ತೊಂದು ಕಾರಿನಲ್ಲಿದ್ದ ಸಲ್ಮಾನ್, ಸೈಪ್, ಇಲಿಯಾಜ್ ಖಾನ್, ಗುಲಷಿರ್ ಉನ್ನಿಸಾ ಎಂಬುವರ ಮೇಲೆ ಹಲ್ಲೆ ಮಾಡಿರುವ ಎಂಬ ಆರೋಪ ಕೇಳಿಬಂದಿದೆ.

ಹಲ್ಲೆಯಿಂದ ಗಾಯಗೊಂಡವರನ್ನು ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ಅನಂತ್‌ ಕುಮಾರ್‌ ಹೆಗಡೆ, ಚಾಲಕ ಮತ್ತು ಗನ್​ಮ್ಯಾನ್​ನನ್ನು ಡಿವೈಎಸ್ಪಿ ಜಗದೀಶ್ ವಿಚಾರಣೆ ನಡೆಸಿದ್ದಾರೆ.

ಹಲ್ಲೆ ಮಾಡಿಲ್ಲ ಎಂದ ಅನಂತ ಕುಮಾರ್ ಹೆಗಡೆ

ಅನ್ಯ ಕೋಮಿನವರ ಮೇಲೆ ಹಲ್ಲೆ ಮಾಡಿರುವುದನ್ನು ಅನಂತ ಕುಮಾರ್ ಹೆಗಡೆ ಕಾರು ಚಾಲಕ ಮತ್ತು ಗನ್​ಮ್ಯಾನ್​ ಒಪ್ಪಿಕೊಂಡಿದ್ದಾರೆ. “ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ, ಹಿಂದಿನಿಂದ ಬಂದ ಇನ್ನೊವಾ ಕಾರು ಓವರ್ ಟೇಕ್ ಮಾಡಿತು. ಓವರ್ ಟೇಕ್ ಮಾಡಿದ ಕಾರು ನಮ್ಮ ಕಾರಿಗೆ ಟಚ್ ಆಗುವ ಸಂದರ್ಭ ಹಿನ್ನೆಲೆಯಲ್ಲಿ ಚಾಲಕ ಕೇಳಿದ್ದಾನೆ. ಅವರೂ ಕೂಡಾ ಬೈದಿದ್ದಾರೆ ಮಾತಿಗೆ ಮಾತು ಬೆಳೆದಿದೆ” ಎಂದು ಅನಂತ್​ ಕುಮಾರ್ ಹೆಗಡೆ ಹೇಳಿದ್ದಾರೆ.

ಈ ವೇಳೆ ಹಲ್ಲೆ ಮಾಡಿರುವುದಾಗಿ ಅನಂತ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್ ಮ್ಯಾನ್ ಒಪ್ಪಿಕೊಂಡಿದ್ದಾರೆ. “ಆದರೆ, ನಾನು ಕಾರಿನಲ್ಲೇ ಇದ್ದೆ. ಹಲ್ಲೆ ಮಾಡಿಲ್ಲ ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಘಟನೆ ಸಂಬಂಧ ದಾಬಸ್ ಪೇಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ: ಮಂಜುನಾಥ್​

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Mon, 23 June 25