ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ, ಇಬ್ಬರಿಗೆ ಗಾಯ ಮತ್ತೊಂದೆಡೆ ಕಾಲುವೆಗೆ ಕಾರು ಉರುಳಿ ನಾಲ್ವರ ಸಾವು

| Updated By: ಆಯೇಷಾ ಬಾನು

Updated on: Oct 22, 2021 | 9:45 AM

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಎರಡೂ ಏರ್ ಬ್ಯಾಗ್ ಒಪನ್ ಆದ ಕಾರಣ ಕಾರಿನಲ್ಲಿದ್ದ ಇಬ್ಬರೂ ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ, ಇಬ್ಬರಿಗೆ ಗಾಯ ಮತ್ತೊಂದೆಡೆ ಕಾಲುವೆಗೆ ಕಾರು ಉರುಳಿ ನಾಲ್ವರ ಸಾವು
ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ; ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಕಾರು, ಇಬ್ಬರಿಗೆ ಗಾಯ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ಸುಜುಕಿ ಬಲೆನೋ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಘಟನೆ ಸೆಂಟ್ ಜಾನ್ಸ್ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದ್ದು, ಕಾರ್ ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಎರಡೂ ಏರ್ ಬ್ಯಾಗ್ ಒಪನ್ ಆದ ಕಾರಣ ಕಾರಿನಲ್ಲಿದ್ದ ಇಬ್ಬರೂ ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಡಿವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಲುವೆಗೆ ಕಾರು ಉರುಳಿ ನಾಲ್ವರ ಸಾವು
ಘಟಪ್ರಭಾ ಕಾಲುವೆಗೆ ಕಾರು ಉರುಳಿ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ತಡರಾತ್ರಿ ಸಂಭವಿಸಿದೆ. ಮಹಾದೇವಗೌಡ(27), ಎರಿತಾತಾ(26), ವಿಜಯ್(26), ಸುನಿಲ್(24) ಮೃತ ದುರ್ದೈವಿಗಳು.

ಮುಧೋಳದಿಂದ ರಾಮದುರ್ಗದ ಕಡೆ ಹೊರಟಿದ್ದ ಯುವಕರು ವೇಗವಾಗಿ ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಕಾರು ಕಲ್ಲಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಘಟಪ್ರಭಾ ಕಾಲುವೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru: ಬಿಎಂಟಿಸಿ ಬಸ್​ನ ಬ್ರೇಕ್ ಫೇಲ್ ಆಗಿ ಅಪಘಾತ

Published On - 8:36 am, Fri, 22 October 21