ಬೆಂಗಳೂರಿನಲ್ಲಿ ಭಾರಿ ಮಳೆ; ರಾಜಾಜಿನಗರದಲ್ಲಿ ಮನೆ ಕುಸಿದು ಬೀದಿಗೆ ಬಿದ್ದ ಕುಟುಂಬ, ಎರಡು ದಿನ ಕಳೆದ್ರು ಸ್ಥಳಕ್ಕೆ ಬಾರದ ಅಧಿಕಾರಿಗಳು

| Updated By: ಆಯೇಷಾ ಬಾನು

Updated on: Oct 17, 2021 | 12:09 PM

ಮೊನ್ನೆ ರಾತ್ರಿ‌ 9ರ ಸುಮಾರಿಗೆ ಮನೆ ಒಂದು ಭಾಗ ಉರುಳಿಬಿದ್ದಿದೆ. ಅಕ್ಕಪಕ್ಕದಲೇ ಇರುವ ಎರಡು ಎಂಚಿನ ಮನೆಯ ಗೋಡೆ ಕುಸಿದಿದೆ. ಕುಸಿದ ಮನೆಯಲ್ಲಿ 7 ಜನರು ವಾಸವಾಗಿದ್ದರು. ಆದರೆ ಮನೆ ಕುಸಿದು ಕುಟುಂಬ ಬೀದಿಗೆ ಬಿದ್ದಿದೆ.

ಬೆಂಗಳೂರಿನಲ್ಲಿ ಭಾರಿ ಮಳೆ; ರಾಜಾಜಿನಗರದಲ್ಲಿ ಮನೆ ಕುಸಿದು ಬೀದಿಗೆ ಬಿದ್ದ ಕುಟುಂಬ, ಎರಡು ದಿನ ಕಳೆದ್ರು ಸ್ಥಳಕ್ಕೆ ಬಾರದ ಅಧಿಕಾರಿಗಳು
ರಾಜಾಜಿನಗರದಲ್ಲಿ ಮನೆ ಕುಸಿದು ಬೀದಿಗೆ ಬಿದ್ದ ಕುಟುಂಬ
Follow us on

ಬೆಂಗಳೂರು: ಭಾರಿ ಮಳೆಗೆ ನಗರದಲ್ಲಿ ಮತ್ತೊಂದು ಮನೆ ಕುಸಿದಿದೆ. ಸುಮಾರು 80 ವರ್ಷದ ಹಿಂದೆ ನಿರ್ಮಾಣವಾದ ಮನೆಯೊಂದು ರಾಜಾಜಿನಗರದ ಆರ್.ಜಿ.ಐ ಕಾಲೋನಿಯ ವಾರ್ಡ್ ನಂ. 97 ದಯಾನಂದನಗರದಲ್ಲಿ ಕುಸಿದು ನೆಲಕ್ಕೆ ಉರುಳಿದೆ.

ಮೊನ್ನೆ ರಾತ್ರಿ‌ 9ರ ಸುಮಾರಿಗೆ ಮನೆ ಒಂದು ಭಾಗ ಉರುಳಿಬಿದ್ದಿದೆ. ಅಕ್ಕಪಕ್ಕದಲೇ ಇರುವ ಎರಡು ಎಂಚಿನ ಮನೆಯ ಗೋಡೆ ಕುಸಿದಿದೆ. ಕುಸಿದ ಮನೆಯಲ್ಲಿ 7 ಜನರು ವಾಸವಾಗಿದ್ದರು. ಆದರೆ ಮನೆ ಕುಸಿದು ಕುಟುಂಬ ಬೀದಿಗೆ ಬಿದ್ದಿದೆ. ಪತ್ನಿ ಮನೆ ಕೆಲಸ, ಗಂಡ ಗಾರೆ ಕೆಲಸ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 7 ಸದಸ್ಯರ ಕುಟುಂಬ ಮನೆ ಇಲ್ಲದೆ ಬಿದ್ದಿಯಲ್ಲೇ ಜೀವನ ಸಾಗಿಸುವಂತಾಗಿದೆ. ಊಟ, ನಿದ್ರೆಯಿಲ್ಲದೆ ಬೀದಿಯಲ್ಲೇ ಪರದಾಡುತ್ತಿದ್ದಾರೆ. ಮೊನ್ನೆ ರಾತ್ರಿಯೇ ದುರ್ಘಟನೆ ನಡೆದಿದ್ರೂ ಯಾವೊಬ್ಬ ಅಧಿಕಾರಿಯೂ ಇದುವರೆಗೂ ಭೇಟಿ ನೀಡಿಲ್ಲ. ಶಾಸಕ ಹಾಗೂ ಬಿಬಿಎಂಪಿ ಅಧಿಕಾರಿಗಳು ಇಲ್ಲಿಯವರೆಗೂ ಮನೆಯ ಸುತ್ತ ಸುಳಿದಿಲ್ಲ.

ಶಾಸಕ ಸುರೇಶ್ ಕುಮಾರ್ ನೆರವಿಗೆ ಬಂದಿಲ್ಲ. ಇರಲು ಒಂದು‌ ಸೂರು ಕಲ್ಪಿಸಿ ಎಂದು ಮಹಿಳೆ ಕಣ್ಣೀರು ಇಟ್ಟಿದ್ದಾರೆ. ಸುರೇಶ್ ಕುಮಾರ್ ಪಿಎಗೆ ಫೋನ್ ಮಾಡಿ ಮಾಹಿತಿ ನೀಡಿ ಎರಡು ದಿನ ಆದರೂ ಸ್ಥಳಕ್ಕೆ ಯಾರೊಬ್ಬರೂ ಬಂದಿಲ್ಲ ಎಂದು ಮಹಿಳೆ ಗೋಳಾಡಿದ್ದಾರೆ.

ಮನೆ ಕುಸಿದ 2 ದಿನದ ಬಳಿಕ ಎಸ್.ಸುರೇಶ್‌ಕುಮಾರ್ ಭೇಟಿ
ಸದ್ಯ ಎರಡು ದಿನಗಳ ಬಳಿಕ ಮನೆ ಕುಸಿದುಬಿದ್ದ ಸ್ಥಳಕ್ಕೆ ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರಿಗೆ ಬುಧವಾರದವರೆಗೆ ಅಂಗನವಾಡಿಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. 15 ದಿನಗಳ ಬಳಿಕ ಆ ಕುಟುಂಬಕ್ಕೆ ಮನೆ ವ್ಯವಸ್ಥೆ ಮಾಡುವುದಾಗಿ ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಒಟ್ಟು 2 ಕುಟುಂಬಗಳು ಆ ಮನೆಯಲ್ಲಿ ವಾಸವಾಗಿತ್ತು. ಮನೆ ನಿರ್ಮಾಣಕ್ಕೆ 2 ವರ್ಷದ ಹಿಂದೆಯೇ ಹೇಳಿದ್ದೆವು. ಪ್ರಧಾನಮಂತ್ರಿ ನಿವಾಸ್ ಯೋಜನೆಯಡಿ 5 ಲಕ್ಷ ರೂಪಾಯಿ ಕೂಡ ಬಿಡುಗಡೆಯಾಗಿತ್ತು. ಕುಟುಂಬಸ್ಥರ ಮನಸ್ತಾಪದಿಂದ ಮನೆ ಕಟ್ಟೋಕೆ ಆಗಿಲ್ಲ ಎಂದು ಸುರೇಶ್‌ಕುಮಾರ್ ತಿಳಿಸಿದ್ರು.

ರಾಜಾಜಿನಗರದಲ್ಲಿ ಮನೆ ಕುಸಿದು ಬೀದಿಗೆ ಬಿದ್ದ ಕುಟುಂಬ, ಎರಡು ದಿನ ಕಳೆದ್ರು ಸ್ಥಳಕ್ಕೆ ಬಾರದ ಅಧಿಕಾರಿಗಳು

ಇದನ್ನೂ ಓದಿ: ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ: 6 ಕುಟುಂಬಗಳಿಗೆ ತಲಾ 1 ಲಕ್ಷ ರೂ ವೈಯಕ್ತಿಕ ಪರಿಹಾರ ವಿತರಿಸಿದ ಡಿ.ವಿ. ಸದಾನಂದ ಗೌಡ

Published On - 11:54 am, Sun, 17 October 21