ಬಿನ್ನಿ ಮಿಲ್ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಬಿರುಕು ಪ್ರಕರಣ: 32 ಕುಟುಂಬಗಳಿಗೆ ಶಿಫ್ಟ್ ಆಗಲು ಸೂಚನೆ, ಉಳಿದ ಕುಟುಂಬಗಳಲ್ಲಿ ಆತಂಕ

ಬಿ ಬ್ಲಾಕ್‌ನಲ್ಲಿ ಒಟ್ಟು 64 ಪೊಲೀಸ್ ಕುಟುಂಬಗಳು ವಾಸವಾಗಿವೆ. ಸದ್ಯ 32 ಕುಟುಂಬಗಳಿಗೆ ಮನೆ ಖಾಲಿ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಉಳಿದ ನಿವಾಸಿಗಳು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಬಿನ್ನಿ ಮಿಲ್ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಬಿರುಕು ಪ್ರಕರಣ: 32 ಕುಟುಂಬಗಳಿಗೆ ಶಿಫ್ಟ್ ಆಗಲು ಸೂಚನೆ, ಉಳಿದ ಕುಟುಂಬಗಳಲ್ಲಿ ಆತಂಕ
ಕುಸಿಯುವ ಹಂತದಲ್ಲಿರುವ ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್

ಬೆಂಗಳೂರು: ಬಿನ್ನಿ ಮಿಲ್ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಬಿರುಕು ಕೇಸ್ಗೆ ಸಂಬಂಧಿಸಿ ಅದೇ ಕಟ್ಟಡದಲ್ಲಿ ವಾಸವಾಗಿರುವ ಪೊಲೀಸ್ ಕುಟುಂಬಗಳನ್ನು ಮಧ್ಯಾಹ್ನದ ಬಳಿಕ ಹಂತಹಂತವಾಗಿ ಖಾಲಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿನ್ನೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿನ್ನಿ ಮಿಲ್ ಕ್ವಾರ್ಟರ್ಸ್ ನಲ್ಲಿರುವ ಪೊಲೀಸ್ ಕುಟುಂಬಗಳನ್ನು ನಾಗರಬಾವಿ ಪೊಲೀಸ್ ಕ್ವಾರ್ಟರ್ಸ್ಗೆ ಶಿಫ್ಟ್ ಆಗಲು ಸೂಚಿಸಿದ್ದಾರೆ. ನಿನ್ನೆ ರಾತ್ರಿ ಮಾಹಿತಿ ನೀಡಿರುವ ಹಿನ್ನೆಲೆ ಖಾಲಿ‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬಿ ಬ್ಲಾಕ್‌ನಲ್ಲಿ ಒಟ್ಟು 64 ಪೊಲೀಸ್ ಕುಟುಂಬಗಳು ವಾಸವಾಗಿವೆ. ಸದ್ಯ 32 ಕುಟುಂಬಗಳಿಗೆ ಮನೆ ಖಾಲಿ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಉಳಿದ ನಿವಾಸಿಗಳು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಇನ್ನು ಬಿ ಬ್ಲಾಕ್‌ನ ಪೂರ್ವ ಭಾಗದ ವರ್ಟಿಕಲ್ ಅಲೈನ್ ಮೆಂಟ್ ನಲ್ಲಿ ಬಿರುಕು ಬಿಟ್ಟಿದೆ. ಪೊಲೀಸ್ ಕುಟುಂಬಗಳು ಖಾಲಿ ಮಾಡಿದ ಬಳಿಕ ತಜ್ಞರ ತಂಡದಿಂದ ಅಧ್ಯಯನ ನಡೆಯಲಿದೆ. ಆ ಕಟ್ಟಡ ವಾಸಕ್ಕೆ ಯೋಗ್ಯವಾಗಿದೆಯಾ ಎಂದು ಅಧ್ಯಯನ ನಡೆಯಲಿದೆ. ತಜ್ಞರ ತಂಡ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಕಳಪೆ ಕಾಮಗಾರಿಯಾಗಿರುವುದು ಕಂಡು ಬಂದರೆ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಇಲ್ಲದಿದ್ದರೆ ಬಿರುಕು ಬಿಟ್ಟಿರುವ ಜಾಗದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ.

ಬಿನ್ನಿಮಿಲ್ ವೃತ್ತದ ಬಳಿಯ ಪೊಲೀಸ್ ಕ್ವಾರ್ಟಸ್​ನನ ಕಟ್ಟಡ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಆತಂಕ ಶುರುವಾಗಿದೆ. ಪೊಲೀಸ್ ಕ್ವಾರ್ಟಸ್​ನ 32 ಕುಟುಂಬಗಳು ವಾಸವಾಗಿವೆ. ಕಟ್ಟಡ ವಾಲಿದ್ದರೂ ಆತಂಕದಲ್ಲೇ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಕಟ್ಟಡ ನಿನ್ನೆ ಕುಸಿಯುವ ಹಂತಕ್ಕೆ ವಾಲಿದೆ. ಒಂದೂವರೆ ಅಡಿಯಷ್ಟು ಕಟ್ಟಡ ಎಡಕ್ಕೆ ವಾಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ವಾಲಿದ ಏಳು ಅಂಸ್ತಿನ ಕಟ್ಟಡ ಕೇವಲ ಮೂರು ವರ್ಷದ ಹಿಂದಷ್ಟೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಒಂದು ವರ್ಷದ ಹಿಂದೆ ಪೊಲೀಸ್ ಕುಟುಂಬಗಳು ಈ ಕ್ವಾರ್ಟಸ್​ಗೆ ಬಂದಿದ್ದವು.

ಇದನ್ನೂ ಓದಿ:  ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ಕಟ್ಟಡದಲ್ಲಿ ತಾಂತ್ರಿಕ ಕೊರತೆ ಇದೆ: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

Click on your DTH Provider to Add TV9 Kannada