ಬೆಂಗಳೂರು: ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಇನ್ನಿತರ ಕ್ವಾರ್ಟರ್ಸ್ನಲ್ಲಿ ಹೊಸದಾಗಿ ವಾಸಕ್ಕೆ ಅಲಾಟ್ ಮಾಡಿದ್ದೇವೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್ಗಳು, ಇಂಡಿಯನ್ ಇನ್ಸ್ಟಿಟಿಟ್ಯೂಟ್ ಆಫ್ ಸೈನ್ಸ್ನಿಂದ ಪರಿಶೀಲನೆ ನಡೆಸಲಾಗಿದೆ. ಕ್ವಾರ್ಟರ್ಸ್ ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ಅವರು ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಟ್ಟಡದಲ್ಲಿ ತಾಂತ್ರಿಕ ಕೊರತೆ ಇದೆ. ಕಟ್ಟಡದಲ್ಲಿ ಎರಡು ವರ್ಷದಿಂದ ಜನರು ವಾಸವಿದ್ದಾರೆ. ನೆನ್ನೆ (ಅಕ್ಟೋಬರ್ 16) ಈ ಘಟನೆ ಬಗ್ಗೆ ವರದಿ ಕೊಟ್ಟಿದ್ದಾರೆ. ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ವರದಿಗೆ ಕಳುಹಿಸಲಾಗಿದೆ. ಜೊತೆಗೆ ಪರಿಹಾರ ಸಹ ಹುಡುಕಬೇಕಾಗಿದೆ. ಸದ್ಯಕ್ಕೆ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
10 ಸಾವಿರ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣ ಮಾಡ್ತಿದ್ದೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಆ ಕಟ್ಟಡದ ಪರಿಸ್ಥಿತಿ ಗಮನಕ್ಕೆ ಬಂದಿದೆ. ಪೊಲೀಸ್ ಕ್ವಾರ್ಟರ್ಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ ಎಂದು ಹೇಳಿದ್ದಾರೆ.
ಗೃಹ-2025 ಯೋಜನೆಯಡಿ 10 ಸಾವಿರ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸುತ್ತಿದ್ದೇವೆ. ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು ಟೆಂಡರ್ ಸಹ ಮುಗಿದಿದೆ. ಹೊಸ ಕಟ್ಟಡ ನಿರ್ಮಿಸಿದರೆ ಕ್ವಾರ್ಟರ್ಸ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಬೆಂಗಳೂರಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬಿ-ಬ್ಲಾಕ್ನಲ್ಲಿರುವ 32 ಕುಟುಂಬ ಸ್ಥಳಾಂತರಕ್ಕೆ ಸೂಚನೆ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿ-ಬ್ಲಾಕ್ನಲ್ಲಿರುವ 32 ಕುಟುಂಬ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ನಾಗರಬಾವಿಯ ಹೊಸ ಕ್ವಾರ್ಟರ್ಸ್ಗೆ ಕೂಡಲೇ ಸ್ಥಳಾಂತರ ಆಗುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ