ಬೆಂಗಳೂರಿನ ಬಿನ್ನಿಮಿಲ್​ ಪೊಲೀಸ್​ ವಸತಿ ಸಂಕೀರ್ಣದಲ್ಲಿ​ ಮೂರು ವರ್ಷದ ಹಿಂದಷ್ಟೇ ನಿರ್ಮಾಣವಾಗಿದ್ದ ಬಹುಮಹಡಿ ಕಟ್ಟಡ ಬೀಳುವ ಆತಂಕ!

ಬೆಂಗಳೂರಿನ ಬಿನ್ನಿಮಿಲ್​ ಪೊಲೀಸ್​ ವಸತಿ ಸಂಕೀರ್ಣದಲ್ಲಿ​ ಮೂರು ವರ್ಷದ ಹಿಂದಷ್ಟೇ ನಿರ್ಮಾಣವಾಗಿದ್ದ ಬಹುಮಹಡಿ ಕಟ್ಟಡ ಬೀಳುವ ಆತಂಕ!
ಕುಸಿಯುವ ಹಂತದಲ್ಲಿರುವ ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್

ವಾಲಿದ ಏಳು ಅಂಸ್ತಿನ ಕಟ್ಟಡ ಕೇವಲ ಮೂರು ವರ್ಷದ ಹಿಂದಷ್ಟೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಒಂದು ವರ್ಷದ ಹಿಂದೆ ಪೊಲೀಸ್ ಕುಟುಂಬಗಳು ಈ ಕ್ವಾರ್ಟಸ್​ಗೆ ಬಂದಿದ್ದವು.

TV9kannada Web Team

| Edited By: sandhya thejappa

Oct 16, 2021 | 1:26 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ವಾಲಿದೆ. ಏಳು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿದೆ. ಬಿನ್ನಿಮಿಲ್ ವೃತ್ತದ ಬಳಿಯ ಪೊಲೀಸ್ ಕ್ವಾರ್ಟಸ್​ನನ ಕಟ್ಟಡ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಆತಂಕ ಶುರುವಾಗಿದೆ. ಪೊಲೀಸ್ ಕ್ವಾರ್ಟಸ್​ನ 32 ಕುಟುಂಬಗಳು ವಾಸವಾಗಿವೆ. ಕಟ್ಟಡ ವಾಲಿದ್ದರೂ ಆತಂಕದಲ್ಲೇ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಕಟ್ಟಡ ನಿನ್ನೆ ಕುಸಿಯುವ ಹಂತಕ್ಕೆ ವಾಲಿದೆ. ಒಂದೂವರೆ ಅಡಿಯಷ್ಟು ಕಟ್ಟಡ ಎಡಕ್ಕೆ ವಾಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ವಾಲಿದ ಏಳು ಅಂಸ್ತಿನ ಕಟ್ಟಡ ಕೇವಲ ಮೂರು ವರ್ಷದ ಹಿಂದಷ್ಟೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಒಂದು ವರ್ಷದ ಹಿಂದೆ ಪೊಲೀಸ್ ಕುಟುಂಬಗಳು ಈ ಕ್ವಾರ್ಟಸ್​ಗೆ ಬಂದಿದ್ದವು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕ್ವಾರ್ಟಸ್ ನಿವಾಸಿ ಲಕ್ಷ್ಮಿ ಕಿಟ್ಟಿಮನಿ, ಕಳೆದ ವಾರ ಕಮಲ್ ಪಂತ್ ಭೇಟಿ ನೀಡಿದ್ದರು. ಇಲ್ಲಿನ ಬಿ ಬ್ಲಾಕ್ ನಿವಾಸಿಗಳನ್ನ ಶಿಫ್ಟ್ ಮಾಡಲು ಹೇಳಿದ್ದಾರೆ. ಬಿಲ್ಡಿಂಗ್ ಡೆಮಾಲಿಷ್ ಮಾಡುತ್ತಾರೋ ಅಥವಾ ಏನಾದರೂ ಸಪೋರ್ಟ್ ಕೊಡುತ್ತಾರೋ ಗೊತ್ತಿಲ್ಲ. ಇಲ್ಲಿಂದ ಅನ್ನಪೂರ್ಣೇಶ್ವರಿ ನಗರದ ಕ್ವಾರ್ಟಸ್​ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಮೇಲ್ನೋಟಕ್ಕೆ ಕಟ್ಟಡ ವಾಲಿರುವುದು ಕಂಡುಬಂದಿದೆ. ಜಪಾನ್ ಟೆಕ್ನಾಲಜಿ ಬಳಸಿ ನಿರ್ಮಿಸಿರುವ ಕಟ್ಟಡವಿದು. ಬರೀ ಸಿಮೆಂಟ್​ ಬ್ಲ್ಯಾಕ್​ಗಳಿಂದ ಕಟ್ಟಡ ನಿರ್ಮಿಸಲಾಗಿದೆ. 1 ಬ್ಲ್ಯಾಕ್​ನಿಂದ ಇನ್ನೊಂದು ಬ್ಲ್ಯಾಕ್​ಗೆ ಬೀಮ್​ ಹಾಕಿಲ್ಲ. ಬೀಮ್ ಹಾಕಿಲ್ಲ ಸಪೋರ್ಟ್​ ಕೊಟ್ಟಿಲ್ಲ. ಕಟ್ಟಡ ನಿರ್ಮಾಣವಾಗಿ 3 ವರ್ಷವಾಗಿದೆ ಎಂದು ಮಾಹಿತಿಯಿದೆ. ಆರೂವರೆ ಇಂಚು ಬಿರುಕು ಬಿಟ್ಟಿದೆ. ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಕೊಡಲಾಗಿದೆ ಅಂತ ತಿಳಿಸಿದ್ದಾರೆ.

ಬಿರುಕು ಬಿಟ್ಟಿರುವ ಗೋಡೆ

ಇದನ್ನೂ ಓದಿ

ಭದ್ರತಾ ಪಡೆ ಬಳಿ ಸಿಕ್ಕಿಬಿದ್ದ ಲಷ್ಕರ್​ ಇ ತೊಯ್ಬಾ ಕಮಾಂಡರ್​; ಇಬ್ಬರು ಪೊಲೀಸರ ಹತ್ಯೆ ಮಾಡಿದ್ದ ಉಗ್ರ

ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!

Follow us on

Related Stories

Most Read Stories

Click on your DTH Provider to Add TV9 Kannada