ಭದ್ರತಾ ಪಡೆ ಬಳಿ ಸಿಕ್ಕಿಬಿದ್ದ ಲಷ್ಕರ್​ ಇ ತೊಯ್ಬಾ ಕಮಾಂಡರ್​; ಇಬ್ಬರು ಪೊಲೀಸರ ಹತ್ಯೆ ಮಾಡಿದ್ದ ಉಗ್ರ

ಭದ್ರತಾ ಪಡೆ ಬಳಿ ಸಿಕ್ಕಿಬಿದ್ದ ಲಷ್ಕರ್​ ಇ ತೊಯ್ಬಾ ಕಮಾಂಡರ್​; ಇಬ್ಬರು ಪೊಲೀಸರ ಹತ್ಯೆ ಮಾಡಿದ್ದ ಉಗ್ರ
ಸೇನಾ ಕಾರ್ಯಾಚರಣೆ

ಪೂಂಚ್​ ಮತ್ತು ರಾಜೌರಿ ಜಿಲ್ಲೆಗಳಲ್ಲೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿ ಎನ್​ಕೌಂಟರ್​ 5ನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯ ಸೇನೆಯಲ್ಲಿ ಪ್ಯಾರಾ ಕಮಾಂಡರ್​​ಗಳನ್ನು ನಿಯೋಜಿಸಲಾಗಿದೆ.

TV9kannada Web Team

| Edited By: Lakshmi Hegde

Oct 16, 2021 | 11:31 AM

ಶ್ರೀನಗರದಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿಯ ಹತ್ಯೆಯಲ್ಲಿ ಭಾಗವಹಿಸಿದ್ದ ಲಷ್ಕರ್​ ಇ ತೊಯ್ಬಾದ ಕಮಾಂಡರ್ ಉಮರ್ ಮುಸ್ತಾಕ್ ಖಾಂಡೇ (​​​ ಇದೀಗ ಭಾರತೀಯ ಭದ್ರತಾ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಜಮ್ಮು-ಕಾಶ್ಮಿರದ ಪುಲ್ವಾಮಾ ಜಿಲ್ಲೆಯ ಪಾಂಪೋರ್​​ನ ಡ್ರಾಂಗ್ಬಾಲ್​ ಎಂಬಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್​​ಕೌಂಟರ್​ ನಡೆಯುತ್ತಿದೆ. ಇಂದು ಬೆಳಗ್ಗೆ ಕಮಾಂಡರ್​​ನನ್ನು ಹಿಡಿಯಲಾಗಿದೆ ಎಂದು ಕಾಶ್ಮಿರ ವಲಯದ ಪೊಲೀಸರು ಟ್ವೀಟ್​ ಮಾಡಿದ್ದಾರೆ. 

ಡ್ರಾಂಗ್ಬಾಲ್​​ನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಸೇನಾ ಸಿಬ್ಬಂತಿ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಆ ಪ್ರದೇಶವನ್ನು ಸುತ್ತುವರಿದಿದ್ದರು. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಉಗ್ರರು ಸಿಕ್ಕಾಪಟೆ ಗುಂಡಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ರಕ್ಷಣಾ ಸಿಬ್ಬಂದಿಯೂ ಗುಂಡಿನ ದಾಳಿ ನಡೆಸಿದರು.

ಈ ಮಧ್ಯೆ ಪೂಂಚ್​ ಮತ್ತು ರಾಜೌರಿ ಜಿಲ್ಲೆಗಳಲ್ಲೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿ ಎನ್​ಕೌಂಟರ್​ 5ನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯ ಸೇನೆಯಲ್ಲಿ ಪ್ಯಾರಾ ಕಮಾಂಡರ್​​ಗಳನ್ನು ನಿಯೋಜಿಸಲಾಗಿದೆ. ಆದರೆ ಎಷ್ಟು ಉಗ್ರರ ಹತ್ಯೆಯಾಗಿದೆ? ಎಷ್ಟು ಮಂದಿಯ ಬಂಧನವಾಗಿದೆ ಎಂಬುದರ ನಿಖರ ಸಂಖ್ಯೆ ಇನ್ನೂ ಗೊತ್ತಾಗಿಲ್ಲ. ಅಂದಹಾಗೆ ಭಿಂಬರ್​ ಗಲಿ ಪ್ರದೇಶದಲ್ಲಿ ಪೂಂಚ್​​-ರಾಜೌರಿ ಹೆದ್ದಾರಿ  ಬಂದ್​ ಆಗಿ ಮೂರು ದಿನ ಆಗಿದ್ದು, ಇಂದೂ ಕೂಡ ಅದೇ ಸ್ಥಿತಿ ಇರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಇನ್ನು ಉಗ್ರರ ದಾಳಿಯಲ್ಲಿ ಮಂಗಳವಾರ ಕಿರಿಯ ಕಮಾಂಡರ್​ ಸೇರಿ ಐವರು ಯೋಧರು ಮೃತಪಟ್ಟಿದ್ದರೆ, ಶುಕ್ರವಾರ ಇಬ್ಬರು ಹುತಾತ್ಮರಾಗಿದ್ದಾರೆ.  ಇಲ್ಲಿನ ಕಾರ್ಯಾಚರಣೆ ಸಂಪೂರ್ಣ ಮುಕ್ತಾಯವಾದ ಮೇಲೆ, ಎಲ್ಲ ಮಾಹಿತಿಗಳನ್ನೂ ಹಂಚಿಕೊಳ್ಳಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.

ಇದನ್ನೂ ಓದಿ: ‘ಎರಡೂ ಡೋಸ್​ ಲಸಿಕೆ ಪಡೆದ ಭಾರತೀಯರು ಯುಎಸ್​ಗೆ ಪ್ರಯಾಣ ಮಾಡಬಹುದು’ -ಶ್ವೇತ ಭವನದಿಂದ ಹೊಸ ಮಾರ್ಗಸೂಚಿ ಘೋಷಣೆ

ದಾವಣಗೆರೆಯಲ್ಲಿ ಮಗುವಿನ ಮೇಲೆ ಹರಿದ ಕಾರು! ಮಗು ಸಾವು, ಗರ್ಭಿಣಿಗೆ ಗಾಯ

Follow us on

Related Stories

Most Read Stories

Click on your DTH Provider to Add TV9 Kannada