Chhattisgarh Blast: ರಾಯ್ಪುರ ರೈಲ್ವೆ ಸ್ಟೇಶನ್​​ನಲ್ಲಿ ಸ್ಫೋಟ; ಸಿಆರ್​ಪಿಎಫ್​​ನ ಆರು ಯೋಧರಿಗೆ ತೀವ್ರ ಗಾಯ

Chhattisgarh Blast: ರಾಯ್ಪುರ ರೈಲ್ವೆ ಸ್ಟೇಶನ್​​ನಲ್ಲಿ ಸ್ಫೋಟ; ಸಿಆರ್​ಪಿಎಫ್​​ನ ಆರು ಯೋಧರಿಗೆ ತೀವ್ರ ಗಾಯ
ಸಾಂಕೇತಿಕ ಚಿತ್ರ

ಮುಂಜಾನೆ 6.30ರ ಹೊತ್ತಲ್ಲಿ ಈ ಇಗ್ನಿಟೆರ್​ ಸೆಟ್​​ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ.

TV9kannada Web Team

| Edited By: Lakshmi Hegde

Oct 16, 2021 | 10:20 AM

ರಾಯ್ಪುರ: ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೆ ಸ್ಟೇಶನ್​​​ನಲ್ಲಿ ಸ್ಫೋಟವುಂಟಾಗಿ ಸಿಆರ್​ಪಿಎಫ್​​ನ ಆರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್​ ಹೇಳಿದ್ದಾರೆ.  ಈ ರೈಲು ಪ್ಲಾಟ್​ಫಾರ್ಮ್​ ನಂಬರ್​ 2ರಲ್ಲಿ ನಿಂತಿತ್ತು, ಮುಂಜಾನೆ 6.30ರ ಹೊತ್ತಲ್ಲಿ ಈ ಇಗ್ನಿಟೆರ್​ ಸೆಟ್​​ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸಲಾಗುತ್ತಿತ್ತು.ಆಗ ಅದು ಕೆಳಗೆ ನೆಲದ ಮೇಲೆ ಬಿದ್ದಿದ್ದಾಗಿ ವರದಿಯಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Karnataka Dams Water Level: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ?

Follow us on

Related Stories

Most Read Stories

Click on your DTH Provider to Add TV9 Kannada