ದಾವಣಗೆರೆಯಲ್ಲಿ ಮಗುವಿನ ಮೇಲೆ ಹರಿದ ಕಾರು! ಮಗು ಸಾವು, ಗರ್ಭಿಣಿಗೆ ಗಾಯ
ಅಜಾಗರೂಕತೆಯಿಂದ ಸರಕಾರಿ ಆಸ್ಪತ್ರೆಯ ನೌಕರ ರವಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.

ದಾವಣಗೆರೆ: ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಕಾರು ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗು ಸಾವನ್ನಪ್ಪಿದೆ. ಜೊತೆಗೆ ಗರ್ಭಿಣಿಗೆ ಗಾಯವಾಗಿದೆ. ನಾಲ್ಕು ವರ್ಷದ ಹನುಮಂತ ಎಂಬ ಮಗು ಮೃತಪಟ್ಟಿದೆ. ಈ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಮೃತ ಮಗು ಕುಂಚೂರು ಗ್ರಾಮದ ಕೋಟೆಪ್ಪ ಮತ್ತು ರೂಪ ದಂಪತಿಗಳಿಗೆ ಸೇರಿದ್ದಾಗಿದೆ. ಅಜಾಗರೂಕತೆಯಿಂದ ಸರಕಾರಿ ಆಸ್ಪತ್ರೆಯ ನೌಕರ ರವಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತರೆದುರೇ ಹೃದಯಾಘಾತದಿಂದ ಒದ್ದಾಡಿದ ವ್ಯಕ್ತಿ ಸಾವು ರಾಯಚೂರು: ಸ್ನೇಹಿತರ ಎದುರೇ ವ್ಯಕ್ತಿಯೊಬ್ಬರು ಹೃದಯಘಾತದಿಂದ ಒದ್ದಾಡಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಕಾರ್ಮಿಕ ಸೋಹಾನ್ ಸಾನೆ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕ ಉತ್ತರ ಪ್ರದೇಶದಿಂದ ಕೂಲಿಗಾಗಿ ಬಂದಿದ್ದರು. ಕೆಲಸಕ್ಕೆ ತೆರಳುವ ವೇಳೆ ಸೋಹಾನ್ಗೆ ಎದೆನೋವು ಕಾಣಿಸಿಕೊಂಡಿದೆ. ಏಕಾಏಕಿ ಕುಸಿದು ಬಿದ್ದ ಕಾರ್ಮಿಕ ಸೋಹಾನ್ ಸಾನೆ, ಹೃದಯಾಘಾತದಿಂದ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಸೊಹಾನ್ ಸಾನೆ ಪೇಂಟಿಂಗ್ ಕೆಲಸಕ್ಕೆಂದು ಜಾಲಹಳ್ಳಿಗೆ ಬಂದಿದ್ದರು. ನಿನ್ನೆ ಕೆಲಸಕ್ಕೆ ಹೋಗುವಾಗ ಮಾರ್ಗ ಮಧ್ಯೆ ಎದೆನೋವು ಕಾಣಿಸಿಕೊಳ್ಳುತ್ತದೆ. ತಕ್ಷಣ ಕುಸಿದು ಬೀಳುತ್ತಾರೆ. ಜೊತೆಗಿದ್ದವರು ಎಷ್ಟೇ ಪ್ರಯತ್ನಪಟ್ಟರೂ ಬದುಕುಳಿಸಲು ಸಾಧ್ಯವಾಗಲಿಲ್ಲ. ಸ್ನೇಹಿತನನ್ನ ಉಳಿಸಿಕೊಳ್ಳಲು ಹರಸಾಹಸ ಪಟ್ಟ ದೃಶ್ಯ ಮನಕುಲುಕುವಂತಿದೆ. ಕಾರ್ಮಿಕನ ಅಂತ್ಯಕ್ರಿಯೆಗೆ ಸಹಾಯ ಮಾಡಿ ಜಾಲಹಳ್ಳಿಯ ಕಟ್ಟಡ ಕಾರ್ಮಿಕರು ಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶಕ್ಕೆ ಮೃತ ದೇಹ ಕೊಂಡೋಯ್ಯಲು ಸಾಧ್ಯವಾಗದ ಹಿನ್ನೆಲೆ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿ, ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ
Meghana Raj: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಗುಡ್ ನ್ಯೂಸ್; ಕೈ ಜೋಡಿಸಿದ ವಾಸುಕಿ, ಪನ್ನಗ ಭರಣ
ಕಾಂಗ್ರೆಸ್‌ನ ‘ರಾಜಕೀಯ ನರಮೇಧ’ಕ್ಕೆ ಕಾರಣ ಯಾರು? ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್
Published On - 10:35 am, Sat, 16 October 21