ಬೆಂಗಳೂರು, ಜೂನ್.30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಅಪಹರಣ (Kidnap) ಪ್ರಕರಣ ಬೆಳಕಿಗೆ ಬಂದಿದೆ. ಈ ಅಪಹರಣ ಪ್ರಕರಣದಲ್ಲಿ ಲೇಡಿ ಗ್ಯಾಂಗ್ ಜೊತೆ ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಹೆಸರು ಸಹ ಕೇಳಿ ಬಂದಿದೆ. ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ (Shankarapura Police Station) ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್ & ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್ ಅವರನ್ನು ಪ್ರಕಾಶ್ & ಗ್ಯಾಂಗ್ ಅಪಹರಿಸಿತ್ತು. ಕಿಡ್ನಾಪ್ ಮಾಡಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕನ್ನಡ ಪ್ರಕಾಶ್ಗೆ ಸೇರಿದ ಕಚೇರಿಯಲ್ಲಿ ಮಂಜುನಾಥ್ ಅವರನ್ನು ಕರೆದುಕೊಂಡು ಬಂದು ಥಳಿಸಲಾಗಿತ್ತು. ಅಪಹರಿಸಿ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡ ಆರೋಪ ಕೇಳಿ ಬಂದಿದೆ.
ಇನ್ನು ಮತ್ತೊಂದೆಡೆ ಅಪಹರಣಕ್ಕೊಳಗಾದ ಮಂಜುನಾಥ್ ಅವರು ಮಂಜುಳಾ ಎಂಬುವರ ಬಳಿ 8 ಲಕ್ಷ ಸಾಲ ಪಡೆದಿದ್ದರು. ಆದರೆ ಸಾಲ ಪಡೆದಿದ್ದ ಹಣ ವಾಪಸ್ ನೀಡದೆ ಮಂಜುನಾಥ್ ಸತಾಯಿಸಿದ್ದರು. ಹೀಗಾಗಿ ಮಂಜುಳಾ ಅವರು ಕನ್ನಡ ಪ್ರಕಾಶ್ ಜೊತೆ ಸೇರಿ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದರು. ಮಂಜುನಾಥ್ನನ್ನು ಕಿಡ್ನ್ಯಾಪ್ ಮಾಡಿ ದಾಖಲೆ ಕಿತ್ತುಕೊಂಡಿದ್ದರು. ಸದ್ಯ ಮಂಜುಳಾ, ಪ್ರಕಾಶ್, ಚಲಪತಿ ಸೇರಿ 6 ಆರೋಪಿಗಳ ವಿರುದ್ಧ FIR ದಾಖಲಾಗಿದೆ.
ಇದನ್ನೂ ಓದಿ: New Criminal Laws: ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ
ಚಿತ್ರದುರ್ಗದಲ್ಲಿ ಬಿಗ್ ಬಾಸ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಜೂಜಾಟದಲ್ಲಿ ತೊಡಗಿದ್ದ 22 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು 85 ಸಾವಿರ ರೂ. ಮೌಲ್ಯದ ಟೋಕನ್ ವಶಕ್ಕೆ ಪಡೆದಿದ್ದಾರೆ. ಬಿಗ್ ಬಾಸ್ ಹೋಟೆಲ್‌ನ 4ನೇ ಮಹಡಿಯಲ್ಲಿರುವ ಫೋರ್ಟ್ ಸಿಟಿ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಜೂರಾಟ ನಡೆಯುತ್ತಿತ್ತು. ಡಿವೈಎಸ್ಪಿ ದಿನಕರ್, ಸಿಪಿಐ ದೊಡ್ಡಣ್ಣ ನೇತೃತ್ವದಲ್ಲಿ ದಾಳಿ ನಡೆದಿದ್ದು 22 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ