ಬೆಂಗಳೂರು, ಸೆಪ್ಟೆಂಬರ್ 16: ಭಕ್ತಾದಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಆನ್ ಲೈನ್ ವ್ಯವಸ್ಥೆ ಮಾಡುತ್ತೇವೆ. ಆನ್ ಲೈನ್ನಲ್ಲೆ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡಿಕೊಳ್ಳುವ ರೀತಿ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ಹೇಳಿದ್ದಾರೆ. ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಎಲ್ಲ ದೇವಾಲಯದ ಆವರಣಗಳನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಮಾಸ್ಟರ್ ಪ್ಲಾನ್ ರೆಡಿ ಮಾಡಲು ಸಹ ಹೇಳಿದ್ದೇನೆ. A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಕಡ್ಡಾಯ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.
ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿಸಿ ತೆರವು ಮಾಡಿಸಿ, ದೇವಸ್ಥಾನ ಸುಪರ್ದಿಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಾಶಿ, ಯಾತ್ರೆ, ಮಾನಸ ಸರೋವರ, ಚಾರ್ ಧಾಮ್ ಮತ್ತು ಭಾರತ್ ಗೌರವ್ ಕಾಶಿ ಯಾತ್ರೆಗೆ ಸಹಾಯ ಆಗಲು ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: TV9 Karnataka Summit 2023; ಕೆಎಸ್ಆರ್ಟಿಸಿ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ತರುತ್ತೇವೆ: ರಾಮಲಿಂಗಾರೆಡ್ಡಿ
ದೇವಸ್ಥಾನದಲ್ಲಿ ಮಹಿಳಾ ಅರ್ಚಕರನ್ನ ನೇಮಕ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಯಾರಾದರೂ ಅರ್ಜಿ ಹಾಕಿದರೆ ನೇಮಕ ಮಾಡುವುದಾಗಿ ತಿಳಿಸಿದರು.
ಗೌರಿ ಗಣೇಶ ಹಬ್ಬಕ್ಕೆ ಬಸ್ಗಳು ರಶ್ ಫುಲ್ ನಿಯಮ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ದುಪ್ಪಟ್ಟು ದರ ನಿಗದಿ ಮಾಡಿರುವುದಕ್ಕೆ ಎರಡೇ ದಿನಕ್ಕೆ 742 ಕೇಸ್ಗಳನ್ನ ಹಾಕಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ
ಹಳೇ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮದಂತೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗುವುದು. ಕೋರ್ಟ್ನಲ್ಲಿ ಕೇಸ್ ಹಾಕಿಕೊಂಡಿದ್ದಾರೆ, ಏನಾಗುತ್ತೋ ನೋಡೋಣ. ಖಾಸಗಿ ಬಸ್ಗಳ ಮಾಲೀಕರಿಂದ ಕಳೆದ 2 ದಿನಗಳಲ್ಲಿ 92,04,288 ರೂ. ದಂಡ ವಸೂಲಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:25 pm, Sat, 16 September 23