ಬೆಂಗಳೂರು ಸಿಟಿ ಪೊಲೀಸರ ಹೆಸರಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡ್ತಿದ್ದ ಆರೋಪಿಗಳ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 23, 2024 | 6:49 PM

ಸಿಲಿಕಾನ್​ ಸಿಟಿಯಲ್ಲಿ ಕಳ್ಳರ ಹಾವಳಿ ಮೀತಿಮೀರಿದೆ. ಈ ಕುರಿತು ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರು ಖದೀಮರ ಕೈಚಳಕಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ​ಮೃತ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಖತರ್ನಾಕ್​ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಸಿಟಿ ಪೊಲೀಸರ ಹೆಸರಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡ್ತಿದ್ದ ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
Follow us on

ಬೆಂಗಳೂರು, ಮೇ.23: ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇದೀಗ ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಟ್ರಾಫಿಕ್ ಫೈನ್(Traffic Fine) ವಸೂಲಿ ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇವರು ವ್ಯಾಟ್ಸಪ್ ಮೂಲಕ ಮೆಸೇಜ್ ಕಳಿಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಈ ಹಿನ್ನಲೆ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಂಧಿತರು.

ಮೃತ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಐಡಿ ಕಾರ್ಡ್ ಬಳಸಿ ವಂಚನೆ

ಈ ಆರೋಪಿಗಳ ಖತರ್ನಾಕ್​ ಪ್ಲ್ಯಾನ್​ಗೆ ಪೊಲೀಸರೆ ದಂಗಾಗಿದ್ದಾರೆ. ಹೌದು, ಮೃತ ಹೆಡ್​ ಕಾನ್ಸ್​ಟೇಬಲ್​ವೊಬ್ಬರ ಐಡಿ ಕಾರ್ಡ್ ಬಳಸಿ ಟ್ರಾಫಿಕ್ ಫೈನ್ ಆ್ಯಪ್, ಸಾರಿಗೆ ಇಲಾಖೆ ವೆಬ್ ಸೈಟ್​ಗಳಿಂದ ಸವಾರರ ಮಾಹಿತಿ ಪಡೆದು, ಬಳಿಕ ತಾವು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಎಂದು ಸವಾರರಿಗೆ ನಕಲಿ ಐಡಿ ಕಾರ್ಡ್ ಕಳಿಸಿ, ಬಳಿಕ ಯುಪಿಐ ಐಡಿ ಕಳಿಸಿ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಖರೀದಿ ನೆಪದಲ್ಲಿ ಶಾಪ್‌ಗೆ ಬಂದು 15 ಕೆ.ಜಿ ತುಪ್ಪ ಕದ್ದ ಕಳ್ಳರು; ವಿಡಿಯೋ ವೈರಲ್​

ಅಂಗನವಾಡಿ ಕಟ್ಟಡ ಬಿದ್ದು ಹಸು ಸಾವು

ಕೋಲಾರ: ಮುಳಬಾಗಿಲು ತಾಲೂಕಿನ ಮರವೇಮನೆ ಗ್ರಾಮದಲ್ಲಿ ಮಳೆಗೆ ನಿನ್ನೆ(ಮೇ.22) ರಾತ್ರಿ ಅಂಗನವಾಡಿ ಕಟ್ಟಡ ಬಿದ್ದು ಹಸುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ನಾರಾಯಣಪ್ಪ ಎಂಬುವರಿಗೆ ಸೇರಿದ 80 ಸಾವಿರ ‌ಮೌಲ್ಯದ ಸೀಮೆ ಹಸು ಇದಾಗಿದ್ದು, ಅದೃಷ್ಟವಶಾತ್ ರಾತ್ರಿ ವೇಳೆ ಕಟ್ಟಡ ಕುಸಿದು ಬಿದ್ದಿದ್ದರಿಂದ ಅನಾಹುತ ತಪ್ಪಿದೆ. ಈ ಕುರಿತು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Thu, 23 May 24