ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿ ಕುಸಿತ; ಇದು ಕಳಪೆ ಕಾಮಗಾರಿಗೆ ಸಾಕ್ಷಿ ಎಂದ ಆಪ್ ಪಕ್ಷ

| Updated By: ಆಯೇಷಾ ಬಾನು

Updated on: May 09, 2022 | 5:06 PM

ಎಚ್ಎಸ್ಆರ್ ಲೇಔಟ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿಯ ಮೇಲ್ಛಾವಣಿ ಕುಸಿದುಬಿದ್ದಿದೆ.

ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿ ಕುಸಿತ; ಇದು ಕಳಪೆ ಕಾಮಗಾರಿಗೆ ಸಾಕ್ಷಿ ಎಂದ ಆಪ್ ಪಕ್ಷ
ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿ ಕುಸಿತ
Follow us on

ಬೆಂಗಳೂರು: ನಿನ್ನೆ(ಏಪ್ರಿಲ್ 08) ಸುರಿದ ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಕುಸಿದುಬಿದ್ದಿದೆ. ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್ಎಸ್ಆರ್ ಲೇಔಟ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿಯ ಮೇಲ್ಛಾವಣಿ ಕುಸಿದುಬಿದ್ದಿದೆ. ಹೀಗಾಗಿ ಆಪ್ ಕಾರ್ಯಕರ್ತರು ಸ್ಟೇಡಿಯಂ ಪರಿಸ್ಥಿತಿ ನೋಡಲು ಸ್ಥಳಕ್ಕೆ ಬಂದಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಕಟ್ಟುವಾಗ ಕಳಪೆ ಕಾಮಗಾರಿ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸ್ಟೇಡಿಯಂ ಕಟ್ಟಿ ಮೂರು ತಿಂಗಳು ಕಳೆದಿಲ್ಲ ಆಗಲೇ ಈ ರೀತಿಯಾಗಿ ಗಾಳಿಗೆ ಕುಸಿದು ಬಿದ್ದಿದೆ ಎಂದು ಆಪ್ ಪಕ್ಷ ಆರೋಪ ಮಾಡಿದೆ. ಆಗ ಅಲ್ಲಿದ್ದ ಸ್ಥಳೀಯರು ನೋಡಿ ಆಪ್ ಕಾರ್ಯಕರ್ತರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಎರಡು ಗ್ಯಾಂಗ್ ನಡುವೆ ನೀನಾ ನಾನಾ ಎನ್ನುವ ಮಟ್ಟಿಗೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕವಷ್ಟೇ ಪರಿಸ್ಥಿತಿ ಕಂಟ್ರೋಲ್ಗೆ ಬಂದಿದೆ.

ಸುಮಾರು 50 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 3.5 ಕೋಟಿ ರು ವೆಚ್ಚದ ಕಾಮಗಾರಿಯನ್ನು ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಆದ್ರೆ ನಿನ್ನೆ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕ್ರೀಡಾಂಗಣದ ಗ್ಯಾಲರಿ ಒಂದು ಭಾಗ ಧರೆಗುರುಳಿದ್ದರೆ, ಇನ್ನೊಂದು ಭಾಗ ಮುರಿದು ಬಿದ್ದಿದೆ. ಈ ಸ್ಟೇಡಿಯಂನ ವ್ಯಾಪ್ತಿಯಲ್ಲಿರುವ ಒಳಾಂಗಣ ಸ್ಟೇಡಿಯಂ ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣ ಮಳೆಗೆ ಹಾನಿಗೊಂಡಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ಮಳೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Mon, 9 May 22