ಬೆಂಗಳೂರು: ಐಟಿ ಜಪ್ತಿ ಮಾಡಿದ BMW, ರೇಂಜ್ ರೋವರ್, ಜಾಗ್ವರ್ ಸೇರಿದಂತೆ ಐಷಾರಾಮಿ ಕಾರುಗಳ ಹರಾಜು
ವಂಚನೆ ಪ್ರಕರಣ ಸಂಬಂಧ ಸಕೇಶ್ ಚಂದ್ರಶೇಖರ್ ಅವರನ್ನು ಐಟಿ ಅಧಿಕಾರಿಗಳು ಬಂಧಿಸಿದ್ದರು. ಇವರಿಂದ ಬಿಎಂಡಬ್ಲ್ಯು, ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ಹವಲು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಸದ್ಯ, ಈ ಎಲ್ಲಾ ಕಾರುಗಳನ್ನು ಐಟಿ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ.
ಬೆಂಗಳೂರು, ನ.23: ನೂರಾರು ಕೋಟಿ ತೆರಿಗೆ ವಂಚನೆ ಪ್ರಕರಣ ಸಂಬಂಧ ಐಟಿ (Income Tax) ಅಧಿಕಾರಿಗಳು ಜಪ್ತಿ ಮಾಡಿದ್ದ ಸಕೇಶ್ ಚಂದ್ರಶೇಖರ್ ಎಂಬವರಿಗೆ ಸೇರಿದ ಬಿಎಂಡಬ್ಲ್ಯು, ಜಾಗ್ವಾರ್, ರೇಂಜ್ ರೋವರ್ ಸೇರಿದಂತೆ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹರಾಜಿಗೆ ಇಡಲಾಗುತ್ತಿದೆ. ಈ ಹರಾಜು ಪ್ರಕ್ರಿಯೆ ನವೆಂಬರ್ 28 ರಂದು ನಡೆಯಲಿದೆ.
ಹಲವು ಸಂಸ್ಥೆಗಳಿಗೆ ಕಟ್ಟಬೇಕಿದ್ದ 308 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಸುಕೇಶ್ ಚಂದ್ರಶೇಖರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ ಸುಕೇಶ್ ಅವರನ್ನು ಬಂಧಿಸಿದ್ದ ಐಟಿ ಅಧಿಕಾರಿಗಳು, ಹತ್ತಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ: IT Raids In Bengaluru: ಲೋಕಾಯುಕ್ತ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಟಿ ದಾಳಿ
ಸದ್ಯ ಆರೋಪಿ ಸುಕೇಶ್ ಚಂದ್ರಶೇಖರ್ ದೆಹಲಿ ಕಾರಾಗೃಹದಲ್ಲಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ವಶಕ್ಕೆ ಪಡೆದಿರುವ BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ರೋಲ್ಸ್ ರಾಯ್ಸ್, ಬೆಂಟ್ಲಿ, ಲ್ಯಾಂಬೋರ್ಗಿನಿ, ಡುಕಾಟಿ ಸೇರಿದಂತೆ 12 ಐಷಾರಾಮಿ ಕಾರುಗಳನ್ನು 28 ರಂದು ಹರಾಜು ಹಾಕಲು ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಅಂತ ಹೇಳಿಕೊಂಡು ವಿವಿಧ ಸಂಸ್ಥೆಗಳಿಗೆ ಸುಕೇಶ್ ನೂರಾರು ಕೋಟಿ ರೂ. ತೆರಿಗೆ ವಂಚನೆ ಎಸಗಿದ್ದರು. ಔಷಧಾ ಕಂಪನಿಯೊಂದರ ಪ್ರವರ್ತಕರಿಗೆ ಜಾಮೀನು ಕೊಡಿಸುವುದಾಗಿ ವಂಚನೆ ಎಸಗಿದ್ದರು.
ಸುಕೇಶ್ ವಿರುದ್ಧ ಐಟಿ ಮಾತ್ರವಲ್ಲದೆ, ಇ.ಡಿ. (ಜಾರಿ ನಿರ್ದೇಶನಾಲಯ) ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಸದ್ಯ ಇವರ ಆಸ್ತಿ ಪಾಸ್ತಿ ಜೊತೆಗೆ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದ ಐಟಿ ಅಧಿಕಾರಿಗಳು, 12 ಐಷಾರಾಮಿ ಕಾರುಗಳನ್ನು ಹರಾಜು ಮಾಡಿ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ