Power Cut: ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ಬೆಂಗಳೂರಿನ ನಗರದ ಹಲವು ಬಡಾವಣೆಗಳಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಸಂಜೆವರೆಗೂ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 28: ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ (KPTCL) ಇಂದು (ಆ.28) ತುರ್ತು ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ಬಡವಾಣೆಗಳಲ್ಲಿ, ಎಷ್ಟರಿಂದ ಎಷ್ಟು ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಇಲ್ಲಿದೆ ಮಾಹಿತಿ.
ಗಂಗಾನಗರ, ಆರ್.ಟಿ.ನಗರ, ಸಿಬಿಐ ಮುಖ್ಯರಸ್ತೆ,ವೇಣುಗೋಪಾಲ ಬಡಾವಣೆ, ಸಂಜಯನಗರ, ಯೋಗೇಶ್ವರ ನಗರ, ಗಂಗಾನಗರ ಮಾರುಕಟ್ಟೆ, ಚೋಳನಾಯಕನಹಳ್ಳಿ, ಗುಡ್ಡದಹಳ್ಳಿರಸ್ತೆ, ಅಶ್ವಥ್ ನಾಗರಸನ್ ಜಯನಗರ, ಮೊಹಮ್ಮದ್ ಬಡಾವಣೆ, ಅಮರಜ್ಯೋತಿ ಬಡಾವಣೆ, ಗುಂಡಪ್ಪರೆಡ್ಡಿ ಬಡಾವಣೆ, ಕೆಂಪಣ್ಣ ಬಡಾವಣೆ, ನೇತಾಜಿನಗರ, ಚಿನ್ನಮ್ಮ ಬಡಾವಣೆ, ಸೀತಪ್ಪ ಬಡಾವಣೆ, ಸಿಐಎಲ್ ಬಡಾವಣೆ, ಮೈತ್ರಿ ಬಜಾರ್. ತಿಮ್ಮಕ್ಕ ಬಡಾವಣೆ. ಅಕ್ಕಯ್ಯಮ್ಮ ಬಡಾವಣೆ, ಗುಡ್ಡದಹಳ್ಳಿ ವೃತ್ತ, ಗುಂಜೂರು ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಸೌರ ವಿದ್ಯುತ್ ಚಾಲಿತ ಇವಿ ಚಾರ್ಜಿಂಗ್ ಹಬ್
ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಮಲ್ಲತ್ತಹಳ್ಳಿ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೆಗಾರಪಾಳ್ಯ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಕುವೆಂಪು ರಸ್ತೆ, ವಿಜ್ಞಾನನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಪವರ್ ಕಟ್ ಆಗಲಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrljOB ಸಂಪರ್ಕಿಸಿ. pic.twitter.com/Q7UcZKaaJM
— Namma BESCOM | ನಮ್ಮ ಬೆಸ್ಕಾಂ (@NammaBESCOM) August 26, 2024
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ