ಬೆಂಗಳೂರು: ಆಟೋ ಚಾಲಕ ದಯಾಮರಣ(Euthanasia) ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ(Bengaluru Police Commissioner) ಪತ್ರ ಬರೆದಿರುವ ಘಟನೆ ಸಂಭವಿಸಿದೆ. ಪೊಲೀಸರು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿ ಸೂಕ್ತವಾಗಿ ತನಿಖೆ ಮಾಡದೇ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುವುದಕ್ಕೆ ಸಾಕ್ಷಿ ಇದೆ. ನನ್ನ ಮೇಲಿನ ದೂರಿಗೆ ಮರು ತನಿಖೆ ಮಾಡಲು ಆದೇಶ ಮಾಡಿ, ಇಲ್ಲವಾದ್ರೆ ದಯಾಮರಣ ನೀಡುವಂತೆ ಪೊಲೀಸ್ ಆಯುಕ್ತರಿಗೆ ಆಟೋ ಚಾಲಕ ಪತ್ರ ಬರೆದಿದ್ದಾರೆ.
ಆಟೋ ಚಾಲಕ ಹರ್ಷ ಎಂಬುವವರು ಪೊಲೀಸರ ಕೃತ್ಯಕ್ಕೆ ಬೇಸತ್ತು ಟ್ವಿಟರ್ನಲ್ಲಿ ನಗರ ಪೊಲೀಸ್ ಆಯುಕ್ತರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಕಳೆದ ವರ್ಷ ಬಸವನಗುಡಿ ಮಹಿಳಾ ಠಾಣೆಯಲ್ಲಿ ಹರ್ಷ ಅವರ ಪತ್ನಿ ದೂರು ದಾಖಲಿಸಿದ್ದರು. ವರದಕ್ಷಿಣೆ ಕಿರುಕುಳ ಕೇಸ್ನಡಿ ಹರ್ಷ ಹಾಗೂ ತಾಯಿಯ ವಿರುದ್ಧ ದೂರು ನೀಡಿದ್ದರು. ಮಹಿಳಾ ಠಾಣೆ ಇನ್ಸ್ಪೆಕ್ಟರ್, ಸಿಬ್ಬಂದಿ ಸರಿಯಾಗಿ ತನಿಖೆ ಕೈಗೊಂಡಿಲ್ಲ. ಬಡ್ಡಿಗೆ ಸಾಲ ಪಡೆದು ಪೊಲೀಸ್ ಕಚೇರಿಗೆ ಅಲೆದಾಡ್ತಿದ್ದೇವೆ. ಸೂಕ್ತವಾಗಿ ತನಿಖೆ ಮಾಡದೇ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುವುದಕ್ಕೆ ಸಾಕ್ಷಿ ಇದೆ. ನನ್ನ ಮೇಲಿನ ದೂರಿಗೆ ಮರು ತನಿಖೆ ಮಾಡಲು ಆದೇಶ ಮಾಡಿ, ಇಲ್ಲದಿದ್ರೆ ದಯಾಮರಣ ನೀಡಿ ಎಂದು ಪೊಲೀಸ್ ಆಯುಕ್ತರಿಗೆ ಆಟೋ ಚಾಲಕ ಹರ್ಷ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ, ಆದೇಶ ಪತ್ರ ನೀಡಿ, ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದ KPSC ಅಭ್ಯರ್ಥಿಗಳು
ಘೋರ ನೋವಿನಿಂದ ನರಳುತ್ತಿರುವ ವ್ಯಕ್ತಿಯ ಇಚ್ಛೆಯ ಅನುಸಾರ ನೀಡಲಾಗುವ ‘ಸಾವು’. ಅಂದರೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಸಲ್ಲಿಸುತ್ತಾರೆ. ಕಾನೂನಿನ ಅಡಿಯಲ್ಲಿಯೇ ಅವರಿಗೆ ಸಾವನ್ನು ‘ಕರುಣಿಸಲಾಗುತ್ತದೆ’. ಆದರೆ, ಭಾರತ ಸಹಿತ ಹಲವು ದೇಶಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ಇದಕ್ಕೆ ಯುಥೆನೇಸಿಯಾ ಎಂಬ ಗ್ರೀಕ್ ಪದವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರ ಅರ್ಥ ಒಳ್ಳೆಯ ಸಾವು ಎಂದು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ