ಪ್ರಯಾಣಿಕರೇ ಗಮನಿಸಿ: ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಈ ರೈಲುಗಳು ಬರೋದಿಲ್ಲ, ಕೆಲ ರೈಲುಗಳು ರದ್ದು
IRCTC: ಕ್ರಾಸಿಂಗ್, ಹಳಿಗಳ ನಿರ್ವಹಣೆ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೇ 25ರಿಂದ 27ರ ವರೆಗೆ ಅನೇಕ ರೈಲುಗಳು ರದ್ದಾಗಿವೆ.

ಬೆಂಗಳೂರು: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ(Indian Railway) ಕಹಿ ಸುದ್ದಿ ನೀಡಿದೆ. ರೈಲ್ವೆ ಹಳಿ ಮತ್ತು ಬ್ರಿಡ್ಜ್ ಸೇರಿದಂತೆ ಇನ್ನಿತರ ಕಾಮಗಾರಿಗಳ ಕಾರಣದಿಂದಾಗಿ ವಿವಿಧ ಮಾರ್ಗಗಳಿಗೆ ಹೊರಡುವ ರೈಲುಗಳ ಸಂಚಾರವನ್ನು ಮೇ 25 ರಿಂದ ಮೇ 27ರವರೆಗೆ ರದ್ದು ಮಾಡಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.
ಕ್ರಾಸಿಂಗ್, ಹಳಿಗಳ ನಿರ್ವಹಣೆ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಮಾರ್ಗವಾಗಿ ತೆರಳುವ ರೈಲುಗಳ ಪ್ರಮಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ರದ್ದಾದ ರೈಲುಗಳು
-
- ಚಿಕ್ಕಮಗಳೂರುನಿಂದ ಯಶವಂತಪುರಕ್ಕೆ ಹೊರಡುವ 16239 ಸಂಖ್ಯೆಯ ರೈಲನ್ನು ಮೇ 25 ಮತ್ತು ಮೇ 27ರಂದು ರದ್ದು ಮಾಡಲಾಗಿದೆ.
- ಯಶವಂಪುರದಿಂದ ಚಿಕ್ಕಮಗಳೂರು ಗಾಡಿ ಸಂಖ್ಯೆ -16240 ಸಂಖ್ಯೆಯ ರೈಲು ಮೇ 25 ಮತ್ತು ಮೇ 27ರಂದು ಸಂಚಾರ ರದ್ದು ಮಾಡಲಾಗಿದೆ.
- ಕೆಎಸ್‌ಆರ್-ಬೆಂಗಳೂರಿನ ರೈಲು ಸಂಖ್ಯೆ 12614 ಸಂಖ್ಯೆಯ ರೈಲು ಮೇ 25 ಮತ್ತು ಮೇ 27ರಂದು ಸಂಚಾರ ಸ್ಥಗಿತಗೊಳಿಸಲಾಗಿದೆ.
Kindy note the changes in the pattern of train services.#SWRupdates pic.twitter.com/EbP9NJSPgd
— South Western Railway (@SWRRLY) May 24, 2023
ಸಂಗೊಳ್ಳಿ ರೈಲು ನಿಲ್ದಾಣಕ್ಕೆ ಬರದ ಲೈಲುಗಳ ಪಟ್ಟಿ
- ಮೇ 24ರಂದು ಮಾತ್ರ ವಾಸ್ಕೋಡಿಗಾಮ ಯಶವಂತಪುರ ರೈಲು 17310 ಸಂಖ್ಯೆಯ ರೈಲು ಕೊನೆಯ ನಿಲ್ದಾಣ ಅರಸಿಕೆರೆಯಾಗಿರಲಿದೆ.
- ಮೇ 25 ರಂದು ಮಾತ್ರ ಯಶವಂತಪುರ- ವಾಸ್ಕೋ 17309 ಸಂಖ್ಯೆಯ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
- ಮೇ 25 ಮತ್ತು 27ರಂದು ಬೆಂಗಳೂರು ಕೆಎಸ್‌ಆರ್‌ನಿಂದ ತುಮಕೂರು ತೆರಳುವ 06571 ಸಂಖ್ಯೆಯ ರೈಲು ಸಂಚಾರ ಬಂದ್ ಆಗಿದೆ.
- ಮೇ 25 ಮತ್ತು 27ರಂದು ತುಮಕೂರು-ಬೆಂಗಳೂರು – ರೈಲು ಸಂಖ್ಯೆ 06576 ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
- ಮೇ 25 ಮತ್ತು 27ರಂದು ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ 20652 ಸಂಖ್ಯೆಯ ರೈಲು ಸ್ಥಿಗಿತ.
- ಮೇ 25 ಮತ್ತು 27ರಂದು ಕೆಎಸ್‌ಆರ್-ಧಾರವಾಡ (12725) ಸಂಚಾರ ಬಂದ್.
- ಮೇ 25 ಮತ್ತು 27ರಂದು ಧಾರವಾಡ- ಬೆಂಗಳೂರು (12726) ಬಂದ್.
- ಮೇ 25 ಮತ್ತು 27ರಂದು ಯಶವಂತಪುರ- ಶಿವಮೊಗ್ಗ ನಗರ (16579) ಮಾರ್ಗದ ರೈಲು ಸೇವೆ ವ್ಯತ್ಯಯ.
ಈ ರೈಲುಗಳು ಮಾರ್ಗ ಬದಲಾವಣೆ
- ಮೇ 25 ರಂದು ಮೈಸೂರು- ವಾರಣಾಸಿ (22687) ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸಿಕೆರೆ ಮೂಲಕ ಸಂಚಾರ ನಡೆಸಲಿದೆ.
- ಮೇ 25 ರಂದು ಮೈಸೂರು-ಬೆಳಗಾವಿ (17326) ರೈಲು ಮೈಸೂರು, ಕೃಷ್ಣರಾಜ ನಗರ, ಹಾಸನ, ಅರಸಿಕೆರೆ ಕಡೆಯಿಂದ ಸಂಚರಿಸಲಿದೆ.
ಈ ರೈಲುಗಳ ಸಮಯ ಬದಲಾವಣೆ
- ಮೇ 27ರಂದು ಯಶವಂತಪುರ-ವಾಸ್ಕೋ (17309) ರೈಲನ್ನು 60 ನಿಮಿಷ ಮರು ನಿಗಧಿ ಮಾಡಲಾಗಿದೆ.
- ಮೇ 25 ಮತ್ತು 27ರಂದು ತುಮಕೂರು-ಚಾಮರಾಜನಗರ ರೈಲು (07346) ರೈಲನ್ನು 90 ಮತ್ತು 45 ನಿಮಿಷ ಮರು ನಿಗಧಿ ಮಾಡಲಾಗಿದೆ.
- ಮೇ 25ರಂದು ಯಶವಂತಪುರ-ಜೈಪುರ(82653) ರೈಲನ್ನು 120 ನಿಮಿಷ ಮರು ನಿಗಧಿ ಮಾಡಲಾಗಿದೆ.
- ಮೇ 27ರಂದು ಹುಬ್ಬಳ್ಳಿ-ರಾಮೇಶ್ವರಂ (07355) ಸಂಖ್ಯೆಯ ರೈಲನ್ನು ಮರು ನಿಗಧಿ ಮಾಡಲಾಗಿದೆ.
- ಮೇ 26 ವಾಸ್ಕೋ- ಬೆಂಗಳೂರು ಯಶವಂತಪುರ (17310) 100 ನಿಮಿಷ ಮರು ನಿಗಧಿ ಮಾಡಲಾಗಿದೆ.
ಈ ರೀತಿ ರೈಲುಗಳ ಸೇವೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




