ಬೆಂಗಳೂರು: ಆಜಾನ್ಗೆ (Azaan) ಮಾತ್ರ ಶಬ್ದ ಮಿತಿ ಎಂಬುದು ಇಲ್ಲ. ಬಸ್ಗೂ ಒಂದೂ ಶಬ್ದ ಮಿತಿಯ ಆದೇಶವಿದೆ ಅಂತ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ಕೋರ್ಟ್ ಆದೇಶ ಪಾಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಶಬ್ದ ಮಿತಿ ಬಗ್ಗೆ, ಮೈಕ್ಗಳ ಬಳಕೆ ಬಗ್ಗೆ ಮಸೀದಿ, ದೇವಸ್ಥಾನ ಮಂಡಳಿಗಳಿಗೆ ತಿಳಿಸಲು ಹೇಳಲಾಗಿದೆ. ಹೈಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. ಕೋರ್ಟ್ ಆದೇಶ ಪಾಲಿಸಿದರೆ ಎಲ್ಲವೂ ಸರಿಯಾಗುತ್ತೆ ಎಂದರು.
ಕಾಂಗ್ರೆಸ್ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ವೋಟ್ ಬ್ಯಾಂಕ್ ರಾಜಕಾರಣ. ವೋಟ್ ಬ್ಯಾಂಕ್ನಿಂದ ‘ಕೈ’ ಸಿಂಹಾಸನದ ಮೇಲೆ ಕೂತಿದ್ದಾರೆ. ಡಿಕೆ ಶಿವಕುಮಾರ್ ಇದರ ಬಗ್ಗೆ ಮಾತಾಡಬೇಡಿ ಅಂತಾರೆ. ಕಾಂಗ್ರೆಸ್ಗೆ ವೋಟ್ ಬ್ಯಾಂಕ್ ಸ್ವಲ್ಪ ಅಲುಗಾಡಿದರೂ ಒತ್ತಡ ಆಗಿಬಿಡುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ:
ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆಂದು ಅನ್ನಿಸುತ್ತಿದೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ ಎಂದು ಅನಿಸುತ್ತಿದೆ. ಧಮ್ ಇಲ್ಲದ ಸರ್ಕಾರ ಕೆಲಸಕ್ಕೆ ಬಾರದ ವಿಚಾರ ತಂದಿಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೂತ್ರದ ಗೊಂಬೆಯಾಗಿಬಿಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಮೂಕ ಬಸವ ಆಗಿದ್ದಾರೆ. ಸೌಂಡ್ ಕಂಟ್ರೋಲ್ ಅನ್ನೋದು ಎಲ್ಲಾ ಧರ್ಮಕ್ಕೂ ಅನ್ವಯಿಸುತ್ತೆ ಎಂದು ಹೇಳಿದರು.
ಖುರಾನ್ ಬರೆದಾಗ ಮೈಕ್ ಇತ್ತಾ? ರೇಣುಕಾಚಾರ್ಯ ಪ್ರಶ್ನೆ:
ಖುರಾನ್ ಬರೆದಾಗ ಮೈಕ್ ಇತ್ತಾ ಎಂದು ರೇಣುಕಾಚಾರ್ಯ ದೆಹಲಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ದಿನಕ್ಕೆ 5 ಬಾರಿ ಆಜಾನ್ ಕೂಗಿದರೆ ತೊಂದರೆಯಾಗುತ್ತೆ. ಎಲ್ಲರಿಗೂ ಅವರವರ ಧರ್ಮವೇ ದೊಡ್ಡದಾಗಿರುತ್ತದೆ. ಪ್ರಾರ್ಥನೆ ಮಾಡುವುದನ್ನು ಯಾರೂ ಬೇಡ ಅನ್ನೋದಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದರು.
ಬೆಳಗ್ಗೆ ಸುಪ್ರಭಾತವನ್ನು ಹಾಕುತ್ತಾರೆ- ರೇವಣ್ಣ:
ಹಿಂದೂಗಳು ಬೆಳಗ್ಗೆ ಸುಪ್ರಭಾತವನ್ನು ಹಾಕುತ್ತಾರೆ. ಅದೇ ರೀತಿ ಮುಸ್ಲಿಮರು ಆಜಾನ್ ಹಾಕುತ್ತಾರೆ. ಇದರಲ್ಲೇಕೆ ದ್ವೇಷ ಭಾವನೆಯನ್ನು ಮೂಡಿಸುತ್ತಿದ್ದಾರೆ ಎಂದು ದೆಹಲಿಯಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಗೆ ಜನರ ಜೀವ ಹೋದರೂ ಚಿಂತೆ ಇಲ್ಲ- ಶಾಸಕ ಡಾ.ಅಜಯ್ ಸಿಂಗ್:
ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಅವರಿಗೆ ತೋರಿಸಲು ಅಭಿವೃದ್ಧಿ ಕೆಲಸಗಳೇ ಇಲ್ಲ. ಹೀಗಾಗಿ ಹಿಂದೂ-ಮುಸ್ಲಿಮರ ಮಧ್ಯೆ ಗಲಭೆ ಸೃಷ್ಟಿಸುತ್ತಿದ್ದಾರೆ. ಬಿಜೆಪಿಗೆ ಜನರ ಜೀವ ಹೋದರೂ ಚಿಂತೆ ಇಲ್ಲ. ಬಿಜೆಪಿಗೆ ಮನುಷ್ಯನ ಜೀವಕ್ಕಿಂತಾ ಚುನಾವಣೆಯೇ ಮುಖ್ಯ ಎಂದು ಕಲಬುರಗಿಯಲ್ಲಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.
ಹಲಾಲ್, ಜಟ್ಕಾ ಕಟ್ ವಿಚಾರದಲ್ಲಿ ಸರ್ಕಾರ ಎಲ್ಲಿಯು ಪರ ವಿರೋಧ ಮಾಡಿಲ್ಲ:
ಈ ವಿವಾದದಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಎಲ್ಲಿ ಬೇಕೊ ಅಲ್ಲಿ ಖರೀದಿಗೆ ಸ್ವತಂತ್ರ ಎಲ್ಲರಿಗೂ ಇದೆ. ಜನರು ಅವರ ಭಾವನೆಗೆ ಏನು ಬೇಕು ಅದನ್ನ ಮಾಡ್ಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಏನು ಬೇಕೊ ಅದನ್ನ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಪಕ್ಷದ ಅಭಿಪ್ರಾಯವೇ ನಮ್ಮೆಲ್ಲರ ಅಭಿಪ್ರಾಯ. ಸರ್ಕಾರದ ನಿಲುವು ಕೂಡ ಅದೇ ಆಗಿದೆ. ಹಲಾಲ್, ಜಟ್ಕಾ ಕಟ್ ವಿಚಾರದಲ್ಲಿ ಸರ್ಕಾರ ಎಲ್ಲಿಯು ಪರ ವಿರೋಧ ಮಾಡಿಲ್ಲ. ಕೆಲವು ಸಂಘಟನೆಗಳು ವಯಕ್ತಿಕವಾಗಿ ತೀರ್ಮಾನ ಮಾಡುತ್ತಿವೆ. ಭಾನುವಾರ ಎರಡು ಕಡೆಯೂ ಮಾಂಸ ಖರೀದಿಸಿದ್ದಾರೆ ಮಂಡ್ಯದಲ್ಲಿ ಸಚಿವ ಗೋಪಾಲಯ್ಯ ಅಭಿಪ್ರಾಯಪಟ್ಟರು.
ಇದನ್ನೂ ಓದಿ
Umran Malik: ಅತ್ಯಂತ ವೇಗವಾಗಿ ಬೌಲ್ ಮಾಡಿ ಐಪಿಎಲ್ 2022 ರಲ್ಲಿ ದಾಖಲೆ ಬರೆದ ಉಮ್ರಾನ್ ಮಲಿಕ್
Published On - 11:51 am, Tue, 5 April 22