ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ; ಕೊಪ್ಪಳದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಅಮಿತ್ ಶಾ ಇವತ್ತು ರಾತ್ರಿ ಬರುತ್ತಾರೆ. ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಇದೆ. ವಿಶೇಷ ಮೀಟಿಂಗ್ ಏನೂ ಇಲ್ಲ. ಅವಧಿಗೆ ಮುನ್ನ ಚುನಾವಣೆ ಕುಮಾರಸ್ವಾಮಿ ಹೇಗೆ ಭವಿಷ್ಯ ನುಡಿದರೋ ಗೊತ್ತಿಲ್ಲ.
ಕೊಪ್ಪಳ: ಸಿದ್ದರಾಮಯ್ಯ (Siddaramaiah) ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಎಂದು ಕೊಪ್ಪಳ ಜಿಲ್ಲೆ ಮುನಿರಾಬಾದ್ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಎತ್ತಿಕಟ್ಟಿ ರಾಜಕಾರಣ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಅಪಾಯಕಾರಿ ಎಂದು ಜನ ದೂರ ಇಟ್ಟಿದ್ದಾರೆ. ನಾನು ಕಣ್ಣಲ್ಲಿ ಕಣ್ಣಿಟ್ಟು ಪೊಲೀಸ್ ಇಲಾಖೆಯನ್ನ ಕಾಯುತ್ತಿದ್ದೇನೆ. ನಾನು ಅಧಿಕಾರಕ್ಕೆ ಬಂದ ಬಳಿಕ ಪೋಸ್ಟಿಂಗ್ಗೆ ಹಣ ಕೊಟ್ಟಿಲ್ಲ. ಬಿ.ಕೆ.ಹರಿಪ್ರಸಾದ್ ಚಿಲ್ಲರೆ ರಾಜಕಾರಣ ಮಾಡುತ್ತಾರೆ. ಅವರ ಬಗ್ಗೆ ಮಾತಾಡಿದರೆ ದೊಡ್ಡವಾರಾಗುತ್ತಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಮಿತ್ ಶಾ ಇವತ್ತು ರಾತ್ರಿ ಬರುತ್ತಾರೆ. ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಇದೆ. ವಿಶೇಷ ಮೀಟಿಂಗ್ ಏನೂ ಇಲ್ಲ. ಅವಧಿಗೆ ಮುನ್ನ ಚುನಾವಣೆ ಕುಮಾರಸ್ವಾಮಿ ಹೇಗೆ ಭವಿಷ್ಯ ನುಡಿದರೋ ಗೊತ್ತಿಲ್ಲ. ಚುನಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಬಗ್ಗೆ ನಾನು ಏನೂ ಹೇಳೋದಿಲ್ಲ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಿಜಾಬ್ ಬಗ್ಗೆ ಬುದ್ಧಿಜೀವಿಗಳು ಏನಾದ್ರು ಹೇಳಿದ್ದಾರಾ? ಎಂದು ಪ್ರಶ್ನಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು ದೇಶದ ಬಗ್ಗೆ ಯೋಚಿಸುವಷ್ಟು ಬುದ್ಧಿವಂತರಲ್ಲ. ಬ್ರಿಟಿಷರ ಕಾಲದಿಂದಲೂ ಸಮವಸ್ತ್ರ ಇದೆ. ಬಿಜೆಪಿ ಸರ್ಕಾರ ಬಂದ ಬಳಿಕ ಸಮವಸ್ತ್ರ ತಂದಿರುವುದಲ್ಲ. ಶಾಲೆಯಲ್ಲಿ ಮತೀಯ ಭಾವನೆ ತುಂಬಿಕೊಳ್ಳೋದಾದ್ರೆ, ಈ ಬಗ್ಗೆ ಬುದ್ಧಿಜೀವಿಗಳು ಯೋಚನೆ ಮಾಡಬೇಕಲ್ವಾ? ಎಂದು ಕೇಳಿದ್ದಾರೆ.
ಹಲಾಲ್, ಜಟ್ಕಾ ಕಟ್ ಧಾರ್ಮಿಕ ಭಾವನೆಯ ತೆವಲು. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಕೆಲಸ ಏನೂ ಇಲ್ಲ. ಇದು ಆದಷ್ಟು ಬೇಗ ಸರಿಯಾಗುತ್ತೆ. ಜಾತ್ಯತೀತತೆ ನಮ್ಮ ರಕ್ತದಲ್ಲಿಯೇ ಇದೆ. ಸಂವಿಧಾನ ಒಪ್ಪಲ್ಲ ಅನ್ನೋರಿಗೆ ಪಾಠ ಮಾಡಬೇಕಾಗಿದೆ. ರಾಜಕಾರಣಿಗಳು ವೋಟ್‌ಗಾಗಿ ಈ ಬಗ್ಗೆ ಮಾತಾಡುತ್ತಾರೆ. ಉಳಿದವರು ಮಾತಾಡೋಕೆ ಏನು ತೆವಲಿದೆ ಎಂದು ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ
‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೂ ಮುನ್ನವೇ ಅನಾವರಣ ಆಗಲಿದೆ ರಾಕಿ ಭಾಯ್ ಮೆಟಾವರ್ಸ್ ಜಗತ್ತು
viral video: ಕೊಳದಲ್ಲಿ ಮೊಸಳೆಯನ್ನು ತಬ್ಬಿಕೊಂಡು ಡ್ಯಾನ್ಸ್ ಮಾಡಿದ ಭೂಪ; ಶಾಕಿಂಗ್ ವಿಡಿಯೋ ವೈರಲ್
Published On - 12:35 pm, Thu, 31 March 22