ಪೊಲೀಸರು ಮೊಬೈಲ್ ಫೋನ್ ಕೇಳುವಂತಿಲ್ಲ: ಜನಾಕ್ರೋಶಕ್ಕೆ ಪೊಲೀಸ್ ಆಯುಕ್ತ ಕಮಲ್​ ಪಂತ್ ಉತ್ತರ

ಮೊಬೈಲ್ ಫೋನ್​ಗಳಲ್ಲಿರುವ ಗ್ಯಾಲರಿಗೆ ಕೆಲ ಪೊಲೀಸ್ ಸಿಬ್ಬಂದಿ ಇಣುಕಿ ಖಾಸಗಿ ಚಿತ್ರ, ವಿಡಿಯೊಗಳನ್ನೂ ನೋಡುತ್ತಿರುವ ಬಗ್ಗೆ ಜನರು ದೂರಿದ್ದರು.

ಪೊಲೀಸರು ಮೊಬೈಲ್ ಫೋನ್ ಕೇಳುವಂತಿಲ್ಲ: ಜನಾಕ್ರೋಶಕ್ಕೆ ಪೊಲೀಸ್ ಆಯುಕ್ತ ಕಮಲ್​ ಪಂತ್ ಉತ್ತರ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 05, 2022 | 10:19 AM

ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಸೇವನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು (Bengaluru City Police) ಜನಸಾಮಾನ್ಯರ ಮೊಬೈಲ್ ಫೋನ್ ಕಸಿದುಕೊಂಡು, ವಾಟ್ಸ್ಯಾಪ್ ಚಾಟ್​ಗಳನ್ನು ಪರಿಶೀಲಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಪೊಲೀಸ್ ಸಿಬ್ಬಂದಿ ಮೊಬೈಲ್ ಫೋನ್​ಗಳಲ್ಲಿರುವ ಗ್ಯಾಲರಿಗೆ ಇಣುಕಿ ಖಾಸಗಿ ಚಿತ್ರ, ವಿಡಿಯೊಗಳನ್ನೂ ನೋಡುತ್ತಿರುವ ಬಗ್ಗೆ ಜನರು ದೂರಿದ್ದರು. ಇದೀಗ ಇಂಥ ಪ್ರಕರಣಗಳನ್ನು ತಡೆಯಲು ಸ್ವತಃ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದಾಗಿದ್ದಾರೆ.

ಈ ಕುರಿತು ಒಂದು ಥ್ರೆಡ್​ ಟ್ವೀಟ್ ಮಾಡಿರುವ ಅವರು, ‘ಯಾವುದೇ ಸಂದರ್ಭದಲ್ಲಿ ಯಾರೊಬ್ಬರ ಫೋನ್ ಕಸಿದುಕೊಳ್ಳಲು ಅನುಮತಿ ಇಲ್ಲ. ಇಂಥ ಕಾರ್ಯಗಳನ್ನು ನಾನು ಒಪ್ಪುವುದಿಲ್ಲ. ನಿಮಗೆ ಇಂಥ ಅನುಭವವಾದರೆ ತಕ್ಷಣ ವಿವರಗಳನ್ನು ಡೈರೆಕ್ಟ್ ಮೆಸೇಜ್ ಮೂಲಕ ಶೇರ್ ಮಾಡಿ’ ಎಂದು ಹೇಳಿದ್ದಾರೆ. ಯಾವುದೇ ಪೊಲೀಸ್ ಸಿಬ್ಬಂದಿ ನಿಮ್ಮ ಮೊಬೈಲ್ ಕಸಿದುಕೊಂಡರೆ 112 ಅಥವಾ 080 2294 2215 ಸಂಖ್ಯೆಗೆ ಕರೆ ಮಾಡಿ ಆಯುಕ್ತರಿಗೆ ದೂರು ಕೊಡಿ ಎಂದು ಸೂಚಿಸಿದ್ದಾರೆ. ದೂರು ಕೊಡುವವರ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು. ದೂರು ಕೊಡುವಾಗ ಸ್ಥಳ ಮತ್ತು ಸಮಯದ ವಿವರವನ್ನು ತಪ್ಪದೇ ನಮೂದಿಸಿ ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ? ಬೆಂಗಳೂರಿನಲ್ಲಿ ಗಸ್ತು ತಿರುಗುವ ಪೊಲೀಸರು ಜನರನ್ನು ಬೆದರಿಸಿ, ಅವರಿಂದ ಮೊಬೈಲ್​ಗಳನ್ನು ಕಸಿದುಕೊಂಡು ವಾಟ್ಸ್ಯಾಪ್​ ಚಾಟ್ ಪರಿಶೀಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೂರಿದ್ದರು. ರೆಡಿಡ್ ಜಾಲತಾಣದಲ್ಲಿಯೂ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾಹಿತಿ ಹಂಚಿಕೊಂಡವರನ್ನು ಸಂಪರ್ಕಿಸಿದ್ದ ನ್ಯೂಸ್​ಲಾಂಡ್ರಿ ಜಾಲತಾಣದ ಲಾಸ್ಯಾ ಶೇಖರ್ ಮಾರ್ಚ್ 29ರಂದು ವಿಶೇಷ ವರದಿಯೊಂದನ್ನು ಪ್ರಕಟಿಸಿದ್ದರು.

‘ಪೊಲೀಸರು ಮೊಬೈಲ್ ಕಸಿದುಕೊಂಡು ಅನ್​ಲಾಕ್ ಮಾಡಿಸಿಕೊಳ್ಳುತ್ತಿದ್ದರು. ನಂತರ ವಾಟ್ಸ್ಯಾಪ್​ಗೆ ಹೋಗಿ WEED ಹಾಗೂ POT ಪದಗಳನ್ನು ಹುಡುಕುತ್ತಿದ್ದರು. ಈ ವೇಳೆ ಇತರ ಮೆಸೇಜ್​ಗಳನ್ನೂ ಓದಿಕೊಂಡು, ‘ಗರ್ಲ್​ ಫ್ರೆಂಡ್ ಜೊತೆ ಯಾಕಷ್ಟು ಹೊತ್ತು ಚಾಟ್ ಮಾಡ್ತೀಯಾ? ನೀನು ಡ್ರಗ್ಸ್​ ತಗೊಳ್ಳೋನಾ? ಸಂಬಳ ಎಷ್ಟು ಬರುತ್ತೆ? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ?’ ಇತ್ಯಾದಿ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದರು’ ಎಂದು ಹಲವರು ಹೇಳಿದ್ದಾಗಿ ನ್ಯೂಸ್​ಲಾಂಡ್ರಿ ವರದಿ ಉಲ್ಲೇಖಿಸಿದೆ.

ಹೀಗೆ ದೌರ್ಜನ್ಯಕ್ಕೆ ಒಳಗಾದವರು ಕೈಲಿದ್ದಷ್ಟು ದುಡ್ಡುಕೊಟ್ಟು ಪೊಲೀಸರಿಂದ ಬಚಾವಾಗಲು ನೋಡುತ್ತಿದ್ದರೇ ವಿನಃ ಯಾರೊಬ್ಬರೂ ದೂರು ಕೊಟ್ಟಿರಲಿಲ್ಲ. ‘ಪೊಲೀಸರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೆ ಏನು ಪ್ರಯೋಜನ? ಅವರ ಕೈಲಿ ಒಂದು ಸಲ ಅನುಭವಿಸಿದ್ದೇ ಸಾಕು’ ಎನ್ನುವ ನಿಲುವಿಗೆ ಬಹುತೇಕರು ಬಂದಿದ್ದರು. ಈ ವರದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ‘ಪೊಲೀಸರು ಮೊಬೈಲ್ ಕಸಿದುಕೊಂಡರೆ ದೂರು ಕೊಡಿ’ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಕಾನೂನು ಏನು ಹೇಳುತ್ತೆ? ಸರಿಯಾದ ವಾರಂಟ್ ಇಲ್ಲದೆ ಪೊಲೀಸರು ಜನರ ಮೊಬೈಲ್​ಗಳನ್ನು ಜಪ್ತಿ ಮಾಡುವಂತಿಲ್ಲ ಎನ್ನುವುದು ಕಾನೂನು ಪರಿಣಿತರ ಮಾತು. ‘ಸಂವಿಧಾನದ 21ನೇ ವಿಧಿಯು ಎಲ್ಲ ಭಾರತೀಯರಿಗೆ ಖಾಸಗಿತನದ ಹಕ್ಕು ನೀಡುತ್ತದೆ. ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಆಗುತ್ತದೆ ಎಂದು ವಕೀಲರಾದ ಸಂಕೇತ್ ಏಣಗಿ ವಿಶ್ಲೇಷಿಸುತ್ತಾರೆ. ಮೊಬೈಲ್​ಗಳಲ್ಲಿ ಸಂಗ್ರಹವಾಗುವ ದತ್ತಾಂಶಗಳು, ಚಿತ್ರ, ವಿಡಿಯೊ, ಸಂಭಾಷಣೆಗಳು ಸಹ ಈ ಹಕ್ಕಿನ ವ್ಯಾಪ್ತಿಗೆ ಬರುತ್ತವೆ.

ಪೊಲೀಸರು ಯಾವಾಗ ಫೋನ್ ಪರಿಶೀಲಿಸಬಹುದು? ಯಾವುದೇ ಅಪರಾಧದ ತನಿಖೆ ಸಂದರ್ಭದಲ್ಲಿ ಮತ್ತು ಗಂಭೀರ ಅಪರಾಧವೊಂದನ್ನು ತಡೆಯುವ ಉದ್ದೇಶದಿಂದ ತಪಾಸಣೆ ನಡೆಸಲು ಪೊಲೀಸರಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ಅವಕಾಶ ನೀಡುತ್ತದೆ. ಆದರೆ ಇದು ಸಾಮಾನ್ಯ ಸಂದರ್ಭಗಳಲ್ಲಿ ಅನ್ವಯವಾಗುವುದಿಲ್ಲ. ಈ ಕಾರ್ಯಾಚರಣೆ ಬಳಿಕ ಪೊಲೀಸರು ತಮ್ಮ ನಡವಳಿಕೆಗೆ ಏನು ಕಾರಣ ಎಂದು ವಿವರಣೆ ಕೊಡಬೇಕಾಗುತ್ತದೆ. ಉಳಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ಲಿಖಿತ ಆದೇಶ ಪಡೆದುಕೊಂಡ ನಂತರವೇ ಪೊಲೀಸರು ಜಪ್ತಿ, ತಪಾಸಣೆಯಂಥ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಕ್ರಿಮಿನಲ್ ಲಾಯರ್​ಗಳಾದ ಜವಾಹರ್ ರಾಜ ಮತ್ತು ಶ್ರೇಯಾ ಮುನ್ನೋತ್ ಹೇಳುತ್ತಾರೆ.

ಈ ಮೊದಲು ಹೈದರಾಬಾದ್ ಪೊಲೀಸರು ಸಹ ಮಾದಕ ವಸ್ತು ಸೇವನೆ ಹೆಚ್ಚಾಗಿದೆ ಎಂದು ಇಂಥದ್ದೇ ಕಾರ್ಯಾಚರಣೆ ನಡೆಸಿದ್ದರು. ಆಗ ದೇಶವ್ಯಾಪಿ ಖಂಡನೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಚೀನಾ ಲೋನ್ ಆ್ಯಪ್​ಗಳ ಕಾರ್ಯವೈಖರಿ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೇಂದ್ರ ಸರ್ಕಾರ ಸೂಚನೆ

ಇದನ್ನೂ ಓದಿ: ಕಮಲ್ ಪಂತ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ ಅರೆಸ್ಟ್! 14 ದಿನಗಳ ಕಾಲ ನ್ಯಾಯಾಂಗ ಬಂಧನ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್