ಪ್ರೀತಿ ನಿರಾಕರಿಸಿದಕ್ಕೆ ಹೆಗ್ಗನಹಳ್ಳಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗನಿಗೆ ವಿಧಿ ಶಿಕ್ಷೆ: ಕಾಲಲ್ಲಿ ಗ್ಯಾಂಗ್ರೀನ್​ ಲಕ್ಷಣ

ಆರೋಪಿ ಪತ್ತೆ ವೇಳೆ ಪೊಲೀಸರು ಕಾಲಿಗೆ ಗುಂಡು ಹಾಕಿಸಿದ್ದರು. ಆದ್ರೆ ಈಗ ಆರೋಪಿ ನಾಗೇಶ್ ಗುಂಡೇಟು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ರೂ ನೋವು ಹೆಚ್ಚಾಗಿದೆ. ಚಿಕಿತ್ಸೆ ಕೊಡಿಸುತ್ತಿದ್ದರೂ ಌಸಿಡ್ ನಾಗನ ಗಾಯದ ತೀವ್ರತೆ ಕಡಿಮೆಯಾಗಿಲ್ಲ.

ಪ್ರೀತಿ ನಿರಾಕರಿಸಿದಕ್ಕೆ ಹೆಗ್ಗನಹಳ್ಳಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗನಿಗೆ ವಿಧಿ ಶಿಕ್ಷೆ: ಕಾಲಲ್ಲಿ ಗ್ಯಾಂಗ್ರೀನ್​ ಲಕ್ಷಣ
ಆ್ಯಸಿಡ್ ದಾಳಿ ಆರೋಪಿ ನಾಗೇಶ್
Follow us
TV9 Web
| Updated By: ಆಯೇಷಾ ಬಾನು

Updated on:Nov 06, 2022 | 8:24 AM

ಬೆಂಗಳೂರು: ನಗರದ ಹೆಗ್ಗನಹಳ್ಳಿಯಲ್ಲಿ ಯುವತಿ ಮೇಲೆ ಆ್ಯಸಿಡ್(Acid Attack) ಹಾಕಿದ್ದ ಆರೋಪಿ ನಾಗೇಶ್​ನಿಗೆ ವಿಧಿಯೇ ಶಿಕ್ಷೆ ಕೊಟ್ಟಿದೆ. ನಾಗೇಶ್ ಅಲಿಯಾಸ್ ನಾಗ ಕಳೆದ 6 ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು ಗ್ಯಾಂಗ್ರೀನ್​ ಲಕ್ಷಣಗಳು(Gangrene Disease Symptoms) ಕಂಡು ಬಂದಿವೆ.

ಆರೋಪಿ ನಾಗೇಶ್ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂದು ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಇದಾದ ಬಳಿಕ ಸನ್ಯಾಸಿ ವೇಶ ಧರಿಸಿ ಆಶ್ರಮದಲ್ಲಿ ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆ ವೇಳೆ ಪೊಲೀಸರು ಕಾಲಿಗೆ ಗುಂಡು ಹಾಕಿಸಿದ್ದರು. ಆದ್ರೆ ಈಗ ಆರೋಪಿ ನಾಗೇಶ್ ಗುಂಡೇಟು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ರೂ ನೋವು ಹೆಚ್ಚಾಗಿದೆ. ಚಿಕಿತ್ಸೆ ಕೊಡಿಸುತ್ತಿದ್ದರೂ ಌಸಿಡ್ ನಾಗನ ಗಾಯದ ತೀವ್ರತೆ ಕಡಿಮೆಯಾಗಿಲ್ಲ. ನಡೆದಾಡಲು ಆಗದೆ ವಿಕ್ಟೋರಿಯಾ ಆಸ್ಪತ್ರೆಗೆ ಜೈಲಿನ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದೆ. ಸದ್ಯ ನಾಗನ ಕಾಲಲ್ಲಿ ಗ್ಯಾಂಗ್ರಿನ್ ಲಕ್ಷಣ ಕಾಣ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಿದ್ದತೆ ನಡೆದಿದೆ.

ಇದೇ ವರ್ಷ ಏಪ್ರಿಲ್ 28ರಂದು ಮುತ್ತೂಟ್​ ಫೈನಾನ್ಸ್​ ಕಚೇರಿ ಬಳಿ ಯುವತಿ ಮೇಲೆ ಌಸಿಡ್​ ಹಾಕಿ ನಾಗೇಶ್ ಪರಾರಿಯಾಗಿದ್ದ. ಬಳಿಕ ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿ ಕರೆತಂದಿದ್ದರು. ಌಸಿಡ್ ನಾಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುಂತೆ ಪರಪ್ಪನ ಅಗ್ರಹ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಘನಘೋರ ತಪ್ಪನ್ನು ಒಪ್ಪಿಕೊಂಡ ಆ್ಯಸಿಡ್ ನಾಗೇಶ, ಆಸ್ಪತ್ರೆಯಲ್ಲಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ಭಯಾನಕ ಕಥನ 

ಬೆಂಗಳೂರಿನಲ್ಲಿ ತಡರಾತ್ರಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿದ ಬಿಲ್ಡರ್

ಬೆಂಗಳೂರಿನಲ್ಲಿ ತಡರಾತ್ರಿ ಪಿಸ್ತೂಲ್ ಹಿಡಿದು ಬಿಲ್ಡರೊಬ್ಬರು ಬೆದರಿಸಿ ಅಟ್ಟಹಾಸ ಮೆರೆದಿದ್ದಾರೆ. ಅಕ್ಟೋಬರ್ 28 ರ ತಡರಾತ್ರಿ 1:30 ರ ವೇಳೆಗೆ ಕೆ.ಆರ್.ಪುರಂನ ಚಿಕ್ಕಬಸವನಪುರದಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಕಾರಿನಿಂದ ಗುದ್ದಿ ಜಖಂ ಮಾಡಿ ಬಳಿಕ ಕೆ.ಆರ್.ಪುರಂ ಚಿಕ್ಕಬಸವನಪುರ ನಿವಾಸಿ ನಾರಾಯಣ್ ಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬಿಲ್ಡರ್ ಕಾರ್ತೀಕ್‌ ರೆಡ್ಡಿ ಅಂಡ್ ಗ್ಯಾಂಗ್ ನಾರಾಯಣ್ ಅವರ ಮನೆ ಮುಂದೆ ಬಿಯರ್ ಬಾಟಲ್ ಹೊಡೆದು ದಾಂದಲೇ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆ ಮುಂಭಾಗದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಈ ಆರೋಪಿಗಳು ಪ್ರಭಾವಿ ರಾಜಾಕಾರಣಿಯ ಜೊತೆ ಗುರುತಿಸಿಕೊಂಡಿದ್ದಾರೆ. ಸರ್ಕಾರಿ ಜಮೀನು ಮಾರಾಟಕ್ಕೆ ಯತ್ನಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ದೂರುದಾರ ನಾರಾಯಣ ಮನೆ ಸಮೀಪ ಇರುವ ಜಮೀನು ಮಾರಾಟಕ್ಕೆ ಬಿಲ್ಡರ್ ಕಾರ್ತೀಕ್‌ ರೆಡ್ಡಿ ಯತ್ನಿಸಿದ್ದ. ಈ ವೇಳೆ ನಾರಾಯಣ್, ಕಾರ್ತೀಕ್‌ ರೆಡ್ಡಿ ಮಾರಾಟಕ್ಕೆ ಯತ್ನಿಸಿದ್ದ ಜಮೀನನಲ್ಲಿ ಒಂದು ಎಕರೆ ಸರ್ಕಾರಿ ಜಮೀನಿನ ಮಾಹಿತಿ ನೀಡಿದ್ದರು. ಹೀಗಾಗಿ ಕಾರ್ತೀಕ್ ರೆಡ್ಡಿ ಅಂಡ್ ಗ್ಯಾಂಗ್ ಅವರ ಮನೆಯ ಮುಂದೆ ದಾಂದಲೆ ನಡೆಸಿದ್ದಾರೆ. ಕಾರ್ತೀಕ್ ರೆಡ್ಡಿ ಅಂಡ್ ಗ್ಯಾಂಗ್ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 8:22 am, Sun, 6 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ