Bengaluru Air Quality: ಶಿವಮೊಗ್ಗ ಏರ್ ಕ್ವಾಲಿಟಿ ದಿಢೀರ್ ಕುಸಿತ!

ಕಳೆದ ಎರಡು ದಿನಗಳಿಂದ ಅಂತೂ ಬೆಂಗಳೂರಿನ ವಾಯು ಗುಣಮಟ್ಟ ಸುಧಾರಿಸಿತು ಎಂದುಕೊಂಡರೆ, ಇಂದು ಮತ್ತೊಮ್ಮೆ ಯಥಾಸ್ಥಿತಿ ತಲುಪಿದೆ. ಬೆಂಗಳೂರಿನೊಂದಿಗೆ ಶಿವಮೊಗ್ಗದಲ್ಲಿಯೂ AQI ಹದಗೆಟ್ಟಿದ್ದು, ಆತಂಕ ಮೂಡಿಸಿದೆ. ಇನ್ನೂ ಹಲವು ನಗರಗಳ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ. ಇದರಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಬರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸುರಕ್ಷಿತವಾಗಿರುವಂತೆ ಸಲಹೆ ನೀಡಿದ್ದಾರೆ.

Bengaluru Air Quality: ಶಿವಮೊಗ್ಗ ಏರ್ ಕ್ವಾಲಿಟಿ ದಿಢೀರ್ ಕುಸಿತ!
ಶಿವಮೊಗ್ಗ ಏರ್ ಕ್ವಾಲಿಟಿ ದಿಢೀರ್ ಕುಸಿತ!

Updated on: Feb 09, 2026 | 8:42 AM

ಬೆಂಗಳೂರು, ಫೆಬ್ರುವರಿ 09: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಶಿವಮೊಗ್ಗದ AQI (Bengaluru Air Quality) ಇಂದು ಹಠಾತ್ತನೆ ಕಳಪೆ ಮಟ್ಟ ತಲುಪಿದೆ. ನಿನ್ನೆ ತಕ್ಕ ಮಟ್ಟಿಗೆ ಸುಧಾರಿಸಿತೆಂದು ಎಂದುಕೊಂಡ ಬೆಂಗಳೂರಿನ ವಾಯು ಗುಣಮಟ್ಟವೀಗ ಮತ್ತೊಮ್ಮೆ ಕುಸಿತ ಕಂಡಿದೆ. ಅದರೊಂದಿಗೆ ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲೂ ಸಹ ಗಾಳಿಯ ಗುಣಮಟ್ಟ 170ಕ್ಕಿಂತ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಈ ನಗರಗಳ AQI ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 177ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 196 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಮೂರು ನಾಲ್ಕು ದಿನಗಳ ಹಿಂದೆ 100ರ ಆಸು ಪಾಸಿದ್ದ ಮಂಗಳೂರಿನ AQI, ಇಂದು 174ಕ್ಕೆ ತಲುಪಿದ್ದು ಆಶ್ಚರ್ಯ ಉಂಟು ಮಾಡಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –177
  • ಮಂಗಳೂರು-175
  • ಮೈಸೂರು –171
  • ಬೆಳಗಾವಿ – 166
  • ಕಲಬುರ್ಗಿ-141
  • ಶಿವಮೊಗ್ಗ – 196
  • ಬಳ್ಳಾರಿ – 162
  • ಹುಬ್ಬಳ್ಳಿ- 144
  • ಉಡುಪಿ –160
  • ವಿಜಯಪುರ –149

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.