AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Bandh: ಜುಲೈ 27ರಂದು ಆಟೋ, ಟ್ಯಾಕ್ಸಿ, ಓಲಾ, ಊಬರ್ ಜತೆ ಖಾಸಗಿ ಬಸ್​ ಸೇವೆ ಸ್ಥಗಿತ

ಬೆಂಗಳೂರು ಬಂದ್​: ಶಕ್ತಿ ಯೋಜನೆ ವಿರೋಧಿಸಿ ಜುಲೈ 27 ರಂದು ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್​ಗಳು ಸಂಚಾರ ನಿಲ್ಲಿಸಲಿವೆ. ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್​ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ.

Bangalore Bandh: ಜುಲೈ 27ರಂದು ಆಟೋ, ಟ್ಯಾಕ್ಸಿ, ಓಲಾ, ಊಬರ್ ಜತೆ ಖಾಸಗಿ ಬಸ್​ ಸೇವೆ ಸ್ಥಗಿತ
ಪ್ರಾತಿನಿಧಿಕ ಚಿತ್ರ
Kiran Surya
| Updated By: Digi Tech Desk|

Updated on:Jul 20, 2023 | 3:11 PM

Share

ಬೆಂಗಳೂರು: ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲೊಂದಾದ ಶಕ್ತಿಯೋಜನೆ(Shakti scheme)ಯನ್ನ ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗವನ್ನ ಪಡೆಯುತ್ತಿದ್ದಾರೆ. ಆದರೆ, ಇದರಿಂದ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್​ಗಳಿಗೂ ದೊಡ್ಡ ಮಟ್ಟದ ತೊಂದರೆ ಉಂಟಾಗಿದ್ದು, ಖಾಸಗಿ ಸಾರಿಗೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆ ಇದೇ ಜುಲೈ 26ರ ಮಧ್ಯರಾತ್ರಿಯಿಂದ ಜುಲೈ 27ರ ಮಧ್ಯರಾತ್ರಿವರೆಗೆ ಶಕ್ತಿ ಯೋಜನೆ ವಿರೋಧಿಸಿ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇವೆ ಜೊತೆಗೆ ಖಾಸಗಿ ಬಸ್​​ಗಳು ಕೂಡ ಸೇವೆ​ ನಿಲ್ಲಿಸಲಿವೆ.​ ಈ ಕುರಿತು ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್​ಗೆ ಕರೆ ನೀಡಲಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಸಾರಿಗೆಯ ಮಾಲೀಕರು

ಇನ್ನು ಬಂದ್​ ಕುರಿತು ಮಾತನಾಡಿದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ‘ ಜುಲೈ 26 ನೇ ತಾರೀಖು ಮಧ್ಯರಾತ್ರಿ 12 ಗಂಟೆಯಿಂದ 27 ನೇ ತಾರೀಖು ರಾತ್ರಿ 12 ಗಂಟೆಯವರೆಗೂ ಆಟೋ, ಟ್ಯಾಕ್ಸಿ, ಓಲಾ, ಊಬರ್ ಯಾವುದೇ ವೆಹಿಕಲ್ ಓಡಾಟ ಮಾಡಲ್ಲ. ಇವತ್ತು ಖಾಸಗಿ ಸಾರಿಗೆಯ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯುತ್ತೆವೆ. ಇನ್ನು ಅಂದು ಖಾಸಗಿ ಬಸ್​ಗಳು ಕೂಡ ಓಡಾಟ ಮಾಡಲ್ಲ ಎಂದರು.

ಇದನ್ನೂ ಓದಿ:ಶಕ್ತಿ ಯೋಜನೆ ಎಫೆಕ್ಟ್: ಜು.27ರಂದು ಖಾಸಗಿ ಬಸ್, ಟ್ಯಾಕ್ಸಿ, ಆಟೋ ಸಂಘಟನೆಗಳಿಂದ ಬಂದ್‌ಗೆ ಕರೆ

ಶಕ್ತಿಯೋಜನೆಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿ

ಬೆಂಗಳೂರಿನಲ್ಲಿ ಇರುವ ಖಾಸಗಿ ಮಾಲೀಕರಿಗೆ ಮನವಿ ಮಾಡುತ್ತೇವೆ. ಶಕ್ತಿ ಯೋಜನೆಯಿಂದ ತುಂಬಾ ಹೊಡೆತ ಬಿದ್ದಿದೆ‌. ಶಕ್ತಿಯೋಜನೆಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿ, ಒಂದೂ ಮಾರ್ಗಸೂಚಿ ಇಲ್ಲದೇ ಇರುವುದರಿಂದ ನಮ್ಮ ಖಾಸಗಿ ಬಸ್​ಗಳಿಗೆ ನಷ್ಟ ಆಗುತ್ತಿದೆ. ಅದರ ಬದಲು ಬಸ್​ಗಳಲ್ಲಿ ಎಷ್ಟು ಸೀಟ್ ಇರುತ್ತದೆಯೋ ಅಷ್ಟೇ ಸೀಟ್ ಹಾಕಬೇಕು ಎಂದು ಮಾಡಿ. ಸರ್ಕಾರಿ ಬಸ್​ಗಳಂತೆ ಖಾಸಗಿ ಬಸ್​ಗಳನ್ನ ಕೂಡ ಶಕ್ತಿ ಯೋಜ‌ನೆಗೆ ಕಿಮೀ ಮಿತಿಯಲ್ಲಿ ಬಳಸಿಕೊಳ್ಳಿ ಎಂದರು.

ಸಾರಿಗೆ ಸಂಘಟನೆಗಳ ಬಂದ್​ಗೆ ಕನ್ನಡ ಸಂಘಟನೆಗಳಿಂದ ಬೆಂಬಲ

ಇನ್ನು ಸರ್ಕಾರದ ಶಕ್ತಿ ಯೋಜನೆ ವಿರುದ್ದ ಬಂದ್​ಗೆ ಕರೆ ನೀಡಿರುವ ಖಾಸಗಿ ವಾಹನಗಳ ಮಾಲೀಕರ ಬೆಂಬಲಕ್ಕೆ ಕನ್ನಡ ಸಂಘಟನೆಗಳು ಬೆಂಬಲ ಕೊಡಲು ಒಪ್ಪಿದ್ದಾರೆ. ಅವರು ಕೂಡ ಹೋರಾಟದಲ್ಲಿ ಪಾಲ್ಗೋಳ್ಳುತ್ತಾರೆ. ಜೊತೆಗೆ ನಾವು ಬೇರೆ ಬೇರೆ ಸಂಘಟನೆಗಳ ಬೆಂಬಲವನ್ನ ಕೋರಿದ್ದೆವೆ. ಬೇರೆ ಸಂಘಟನೆಗಳು ಕೂಡ ಬೆಂಬಲ ಕೊಡುತ್ತಾರೆ ಎಂದು ಆದರ್ಶ್ ಆಟೋ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Thu, 20 July 23