ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ

| Updated By: Ganapathi Sharma

Updated on: Oct 04, 2024 | 8:16 AM

ಬೆಂಗಳೂರಿನ ಆ ರಸ್ತೆಯಲ್ಲಿ ವಾಹನ ಸವಾರರಿಗೆ ಕಂಟಕ ಕಾದು ಕುಳಿತಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಸೀದಾ ಆಸ್ಪತ್ರೆಗೆ ಸೇರಬೇಕಾಗಬಹುದು. ಇದು ಗೊತ್ತಿದ್ದರೂ ಡೆಡ್ಲಿ ರಸ್ತೆಯ ಬಗ್ಗೆ ಗಮನಹರಿಸಬೇಕಿದ್ದ ಪಾಲಿಕೆ ಮೌನವಾಗಿದೆ. ರಸ್ತೆ ಗುಂಡಿಗಳ ಮುಚ್ಚುವ ಕೆಲಸವೂ ಕುಂಠಿತವಾಗಿದೆ.

ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ
ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ
Follow us on

ಬೆಂಗಳೂರು, ಅಕ್ಟೋಬರ್ 4: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಇನ್ನೂ ತಾಂಡವವಾಡುತ್ತಿದ್ದು, 14 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎನ್ನುತ್ತಿದ್ದ ಪಾಲಿಕೆ ಆಯುಕ್ತರು, ಇದೀಗ ಇನ್ನೂ ಗುಂಡಿಗಳು ಇವೆ. ಮುಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದು ಮತ್ತೆ ಅದೇ ರಾಗ, ಅದೇ ಹಾಡು ಹಾಡುತ್ತಿದ್ದಾರೆ. ರಾಜ್ಯ ರಾಜಧಾನಿಯ ರಸ್ತೆಗಳನ್ನ ಸುಸ್ಥಿತಿಯಲ್ಲಿಡಬೇಕಿದ್ದ ಪಾಲಿಕೆ ಒಂದಷ್ಟು ದಿನ ಗುಂಡಿ ಮುಚ್ಚುವ ಕೆಲಸ ಮಾಡಿ ಮೌನವಾಗಿದೆ. ಇತ್ತ ರಸ್ತೆಗುಂಡಿಗಳ ಕಾಟ ಇನ್ನೂ ಜೀವಂತವಾಗಿದ್ದರೆ, ಮತ್ತೊಂದೆಡೆ ಮುಖ್ಯರಸ್ತೆಯಲ್ಲೇ ಇರುವ ಕಬ್ಬಿಣದ ರಾಡ್ ಬಳಿ ಬಿದ್ದ ಗುಂಡಿ ವಾಹನ ಸವಾರರ ಬಲಿಗಾಗಿ ಕಾದುಕುಳಿತಿದೆ.

ವಸಂತನಗರದ ಕಾರ್ಯಪ್ಪ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಬಳಿ ಒಳಚರಂಡಿ ಮೇಲೆ ಅಳವಡಿಸಿರುವ ಕಬ್ಬಿಣದ ರಾಡ್ ಕಿತ್ತುಬಂದಿದೆ. ಇತ್ತ ಕಬ್ಬಿಣ ಮೇಲೆದ್ದಿರುವ ಜಾಗದಲ್ಲೇ ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಸಂಚಕಾರ ತಂದಿಡುತ್ತಿದೆ.

ನಿತ್ಯ ನೂರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಗುಂಡಿ ಬಿದ್ದಿರೋದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರ ಮಧ್ಯೆ ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಇತ್ತ ಅಪಾಯ ಇದ್ದರೂ ಕೂಡ ಪಾಲಿಕೆ ಮಾತ್ರ ಸೈಲೆಂಟ್ ಆಗಿದೆ. ಇನ್ನು ಇದೇ ರಸ್ತೆಯಲ್ಲಿ ಚರಂಡಿ ಮೇಲಿರುವ ಸಿಮೆಂಟ್ ಸ್ಲಾಬ್ ಕೂಡ ಮೇಲೆದ್ದಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದಿಟ್ಟಿದೆ.

ಇತ್ತ ರಾಜಧಾನಿಯ ರಸ್ತೆಗುಂಡಿಗಳನ್ನ ಮುಚ್ಚುತ್ತೇವೆ ಎಂದು ಡೆಡ್ ಲೈನ್ ಜೊತೆಗೆ ಫೀಲ್ಡ್​​ಗಿಳಿದಿದ್ದ ಪಾಲಿಕೆ, ಇದೀಗ ಆ ಕೆಲಸದಲ್ಲಿ ವಿಫಲವಾಗಿದೆ. ಇತ್ತ 14 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಅಂತಿದ್ದ ಪಾಲಿಕೆ, ಇದೀಗ ಇನ್ನೂ ನೂರಾರು ಗುಂಡಿಗಳಿವೆ ಅದನ್ನೆಲ್ಲ ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಹಳೆ ಕತೆ ಹೇಳುತ್ತಿದೆ.

ಮುಚ್ಚಿದ್ದ ಗುಂಡಿಗಳು ಮತ್ತೆ ಓಪನ್!

ಗುಂಡಿ ಮುಚ್ಚುವ ಡೆಡ್​​ಲೈನ್ ವೇಳೆ ಮುಚ್ಚಿದ್ದ ಗುಂಡಿಗಳು ಮತ್ತೆ ಓಪನ್ ಆಗಿರುವುದನ್ನು ಒಪ್ಪಿಕೊಂಡಿರೋ ಕಮಿಷನರ್ ತುಷಾರ್ ಗಿರಿನಾಥ್, ಯಾಕೆ ತಪ್ಪಾಗಿದೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಹುತೇಕ ಖಚಿತ: ಜನರ ಅಭಿಪ್ರಾಯ ಕೋರಿದ ಬಿಎಂಆರ್​ಸಿಎಲ್

ಒಟ್ಟಿನಲ್ಲಿ ರಾಜಧಾನಿಯ ಜನರಿಗೆ ಗುಂಡಿ ಕಂಟಕದ ಜೊತೆಗೆ ಕಿತ್ತುಹೋದ ರಸ್ತೆಗಳಿಂದ ಆಗುತ್ತಿರುವ ಸಂಕಷ್ಟ ಇನ್ನೂ ತಪ್ಪದಂತಾಗಿದೆ. ಸದ್ಯ ರಾಜಧಾನಿಯ ರಸ್ತೆಗಳ ದುಸ್ಥಿತಿ ಇನ್ನೂ ಮುಂದುವರಿದಿದ್ದು ಪಾಲಿಕೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ