ಕಾಂಬೋಡಿಯಾದಲ್ಲಿ ಕ್ರಿಫ್ಟೋ ಕರೆನ್ಸಿ ಕಂಪನಿ ಉದ್ಯೋಗಿಯಾಗಿರುವ ಚಾಮರಾಜಪೇಟೆಯ ಯುವಕನಿಗೆ ಕಿರುಕುಳ: ತಿನ್ನೋಕೆ ಗೋಮಾಂಸ, ಹಂದಿ ಮಾಂಸ ಕೊಡ್ತಿದಾರಂತೆ

| Updated By: ಸಾಧು ಶ್ರೀನಾಥ್​

Updated on: May 09, 2022 | 3:00 PM

ಇಲ್ಲಿ ಫೇಸ್​ ಬುಕ್​​ ನಲ್ಲಿ ಫೇಕ್ ಆಕೌಂಟ್ ಕ್ರಿಯೆಟ್ ಮಾಡಿ, ಹುಡುಗಿಯರ ಸ್ನೇಹ ಸಂಪಾದಿಸಬೇಕು. ವೆಬ್‌ಸೈಟ್‌ ಐಪಾಕ್ಸ್‌ನಲ್ಲಿ ಹಣ ಡಿಪಾಸಿಟ್ ಮಾಡಿಸಬೇಕು. ಡಿಪಾಸಿಟ್ ಹಣವನ್ನ ಕಂಪನಿಯವರು ಉಪಯೋಗಿಸಿಕೊಳ್ತಾರೆ. ಕೆಲಸದ ನೆಪದಲ್ಲಿ ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ ಮೋಹನ್ ರಾಜ್ ಟಿವಿ9 ಗೆ ತಿಳಿಸಿದ್ದಾರೆ.

ಕಾಂಬೋಡಿಯಾದಲ್ಲಿ ಕ್ರಿಫ್ಟೋ ಕರೆನ್ಸಿ ಕಂಪನಿ ಉದ್ಯೋಗಿಯಾಗಿರುವ ಚಾಮರಾಜಪೇಟೆಯ ಯುವಕನಿಗೆ ಕಿರುಕುಳ: ತಿನ್ನೋಕೆ ಗೋಮಾಂಸ, ಹಂದಿ ಮಾಂಸ ಕೊಡ್ತಿದಾರಂತೆ
ಕಾಂಬೋಡಿಯಾದಲ್ಲಿ ಕ್ರಿಫ್ಟೋ ಕರೆನ್ಸಿ ಕಂಪನಿ ಉದ್ಯೋಗಿಯಾಗಿರುವ ಚಾಮರಾಜಪೇಟೆಯ ಯುವಕನಿಗೆ ಕಿರುಕುಳ: ತಿನ್ನೋಕೆ ಗೋಮಾಂಸ, ಹಂದಿ ಮಾಂಸ ಕೊಡ್ತಿದಾರಂತೆ
Follow us on

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ ಮೋಹನ್ ರಾಜ್ ಎಂಬುವವರು (Bangalore Chamrajpet Mohan Raj) ದೂರದ ಕಾಂಬೋಡಿಯಾದಲ್ಲಿ ಉದ್ಯೋಗದಲ್ಲಿದ್ದು ಭಾರೀ ಪಡಿಪಾಟಲು ಅನುಭವಿಸುತ್ತಿದ್ದಾರೆ. ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗನ ಆಳಲು ಹೇಳತೀರದಾಗಿದೆ. ಇದಕ್ಕೂ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜಪೇಟೆಯ ಮೋಹನ್ ರಾಜ್ ಎರಡು ತಿಂಗಳ ಹಿಂದೆ ಕಾಂಬೋಡಿಯಾಗೆ (Cambodia) ತೆರಳಿದ್ದರು. ಆದರೆ ಕಾಂಬೋಡಿಯಾದಲ್ಲಿ ಇವರ ಪಾಸಪೋರ್ಟ್‌ ಪಡೆದುಕೊಂಡು ಹಿಂಸೆ ಕೊಡುತ್ತಿದ್ದಾರಂತೆ. ತಾನೀಗ ಕ್ರಿಫ್ಟೋ ಕರೆನ್ಸಿ ಕಂಪನಿಯಲ್ಲಿ (Crypto Currency) ಕೆಲಸ ಮಾಡುತ್ತಿದ್ದು ತನಗೆ ಕಿರುಕುಳ ಕೊಡುತ್ತಿದ್ದಾರೆ. ಅಲ್ಲದೆ ಊಟ ಕೇಳಿದ್ರೆ ಬೀಫ್ ಮತ್ತು ಹಂದಿ ಮಾಂಸ ಕೊಡುತ್ತಿದ್ದಾರೆ. ತನ್ನನ್ನು ತವರಿಗೆ ಕರೆಯಿಸಿಕೊಳ್ಳೀ ಎಂದು ಟಿವಿ9 ಜೊತೆ ಮಾತನಾಡುತ್ತಾ ಚಾಮರಾಜಪೇಟೆಯ ಮೋಹನ್ ರಾಜ್ ತಮ್ಮ ಆಳಲು ತೊಡಿಕೊಂಡಿದ್ದಾರೆ. ಅಂದಹಾಗೆ ಚಾಮರಾಜಪೇಟೆಯ ಮೋಹನ್ ಪ್ರಸ್ತುತ ಕಾಂಬೋಡಿಯಾದ ಸಿಹಾನೌಕ್ವಿಲ್ಲೆ ನಗರದಲ್ಲಿ ವಾಸವಾಗಿದ್ದಾರೆ. ಮೋಹನ್ ದೂರಿರುವಂತೆ ಭಾರತದ ಎಂಬಿಸಿಯವರು ಅವರಿಗೆ ಸಹಾಯ ಮಾಡುತ್ತಿಲ್ಲವಂತೆ.

ಇಲ್ಲಿ ಫೇಸ್​ ಬುಕ್​​ ನಲ್ಲಿ ಫೇಕ್ ಆಕೌಂಟ್ ಕ್ರಿಯೆಟ್ ಮಾಡಿ, ಹುಡುಗಿಯರ ಸ್ನೇಹ ಸಂಪಾದಿಸಬೇಕು. ವೆಬ್‌ಸೈಟ್‌ ಐಪಾಕ್ಸ್‌ನಲ್ಲಿ ಹಣ ಡಿಪಾಸಿಟ್ ಮಾಡಿಸಬೇಕು. ಡಿಪಾಸಿಟ್ ಹಣವನ್ನ ಕಂಪನಿಯವರು ಉಪಯೋಗಿಸಿಕೊಳ್ತಾರೆ. ಕೆಲಸದ ನೆಪದಲ್ಲಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು. ಸರಿಯಾಗಿ ಸ್ಯಾಲರಿ ಸಹ ಕೊಡುತ್ತಿಲ್ಲ. ಹೇಗಾದರೂ ಮಾಡಿ ನನ್ನನ್ನು ಬೆಂಗಳೂರಿಗೆ ಕರೆಸಿಕೊಳ್ಳಿ ಎಂದು ಆತ ಅಲವತ್ತುಕೊಂಡಿದ್ದಾನೆ.

ಪ್ರಕರಣದ ಬಗ್ಗೆ ಟಿವಿ9 ಗೆ ಮಾಹಿತಿ ನೀಡಿರುವ ಮೋಹನ್ ರಾಜ್ ಹಾಗೂ ಅವರ ತಂದೆ ಲಕ್ಷ್ಮಣ್ ಅವರುಗಳು ನಿತ್ಯ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ, ಜನ್ರಿಗೆ ಹಣ ಹೂಡಿಕೆ ಮಾಡಲು ಒತ್ತಾಯ ಮಾಡ್ತಿದ್ದಾರಂತೆ. ಫೇಕ್ ಫೇಸ್ ಬುಕ್ ಅಕೌಂಟ್ ಮಾಡಿಕೊಂಡು, ಬೇರೆ ಬೇರೆ ದೇಶದವರ ಜೊತೆಗೆ ಪರಿಚಯ ಮಾಡಲು ಒತ್ತಡ ಹಾಕ್ತಿದಾರೆ. ನಂತರ ಹಣ ಹೂಡಿಕೆ ಮಾಡಿಸಿಕೊಳ್ತಿದ್ದಾರೆ, ಇದೊಂದು ಸ್ಕ್ಯಾಮ್. ಕೆಲಸ ಮಾಡಲ್ಲ ಎಂದು ಹೇಳಿದಕ್ಕೆ ನಮ್ಮನ್ನು ಕೂಡಿ ಹಾಕಿದ್ದಾರೆ. ಪಾಸ್ ಪೋರ್ಟ್ ನೀಡ್ತಿಲ್ಲ, ಊಟ ಸರಿಯಾಗಿಲ್ಲ, ಹೊರಗಡೆ ಬಿಡ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಚಾಮರಾಜಪೇಟೆಯ ಮೋಹನ್.

ತಮ್ಮ ಮಗನಿಂದ ಬಿಟ್ ಕಾಯಿನ್ ಸ್ಕ್ಯಾಮ್ ಮಾಡಿಸುತ್ತಾ ಇದ್ದಾರೆ ಎಂದು ಗುರುತರ ಆರೋಪ ಮಾಡಿರುವ ಮೋಹನ್ ತಂದೆ ಲಕ್ಷ್ಮಣ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗ್ಯಾರೇಜ್ ಹಾಕಿಕೊಂಡಿದ್ದಾರೆ. ಮಗನನ್ನ ಕರೆತರಲು ಭಾರತ ಸರ್ಕಾರದ ನೆರವು ಯಾಚಿಸುತ್ತಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ