ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿತ್ತು. ಅಬ್ಬರದ ನಡುವೆಯೂ ವಿಮರ್ಶೆ ವಿಚಾರದಲ್ಲಿ ರಾಧೆ  ಸೋತಿತ್ತು.

ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?
ರಾಧೆ ಪೋಸ್ಟರ್​ ಮತ್ತು ಫೇಕ್​ ಟ್ವೀಟ್​
Edited By:

Updated on: May 18, 2021 | 9:46 AM

ರಾಧೆ ಸಿನಿಮಾ ಉತ್ತಮ ವಿಮರ್ಶೆ ಪಡೆಯುವಲ್ಲಿ ಸೋತಿದೆ. ಈ ವಿಚಾರ ಇಟ್ಟುಕೊಂಡು ಸಾಕಷ್ಟು ಜನರು ಟ್ರೋಲ್​ ಮಾಡುತ್ತಿದ್ದರು. ಈಗ ಬೆಂಗಳೂರು ಸಿಟಿ ಪೊಲೀಸರು ಕೂಡ ಇದೇ ವಿಚಾರ ಇಟ್ಟುಕೊಂಡು ಟ್ರೋಲ್​ ಮಾಡಿದ್ದಾರೆ ಎನ್ನುವ ರೀತಿಯ ಟ್ವೀಟ್​ ಒಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಇದು ಫೇಕ್​ ಎನ್ನುವ ವಿಚಾರ ಬಯಲಾಗಿದೆ.

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿತ್ತು. ಮೊದಲ ದಿನ ಸಿನಿಮಾ ನೋಡೋಕೆ ಸಿನಿಪ್ರಿಯರು ಮುಗಿಬಿದ್ದಿದ್ದರಿಂದ ಜೀ5 ಸರ್ವರ್​​ ಕ್ರ್ಯಾಶ್​ ಆಗಿತ್ತು. ಇಷ್ಟೆಲ್ಲ ಅಬ್ಬರದ ನಡುವೆಯೂ ವಿಮರ್ಶೆ ವಿಚಾರದಲ್ಲಿ ರಾಧೆ  ಸೋತಿತ್ತು. ರಾಧೆ ಚಿತ್ರಕ್ಕೆ ಐಎಂಡಿಬಿ 10 ಅಂಕಕ್ಕೆ ಕೇವಲ 2.4 ರೇಟಿಂಗ್​ ನೀಡಿತ್ತು.

ಇನ್ನು ಸಿನಿಮಾ ನೋಡಿದ ಅನೇಕರು ಸಲ್ಮಾನ್​ ಖಾನ್​ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಸಲ್ಲುಗೆ ಸಿನಿಮಾವನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂಬಿತ್ಯಾದಿ ಕಮೆಂಟ್​ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಮೀಮ್​ಗಳು ಕೂಡ ಹರಿದಾಡಿದ್ದವು. ಅದೇ ರೀತಿ ಬೆಂಗಳೂರು ಸಿಟಿ ಪೊಲೀಸರು ಮಾಡಿದ ಟ್ವೀಟ್​ ಕೂಡ ಎಲ್ಲರ ಗಮನ ಸೆಳೆದಿತ್ತು.

‘ಲಾಕ್​ಡೌನ್​ ನಿಯಮ ಉಲ್ಲಂಘಿಸಿದರೆ ಪದೇಪದೇ ರಾಧೆ ಸಿನಿಮಾ ತೋರಿಸಲಾಗುತ್ತದೆ- ಬೆಂಗಳೂರು ಸಿಟಿ ಪೊಲೀಸ್​ ಕಮಿಷನರ್’​ ಎಂದಿತ್ತು. ಈ ಟ್ವೀಟ್​ಅನ್ನು ಸಿಟಿ ಪೊಲೀಸ್​ ಖಾತೆಯಿಂದಲೇ ಮಾಡಲಾಗಿದೆಯೆಂದು ಬಿಂಬಿಸಾಗಿತ್ತು. ಇದನ್ನು ಅನೇಕರು ನಂಬಿದ್ದರು ಕೂಡ. ಆದರೆ, ಇದು ಫೇಕ್​ ಟ್ವೀಟ್​.

ಟ್ವೀಟ್​ ಮಾಡಲಾದ ಡೇಟ್​ ಜನವರಿ 15, 2021 ಎಂದಿದೆ. ಆದರೆ,​ ಸಿನಿಮಾ ರಿಲೀಸ್​ ಆಗಿದ್ದು ಮೇ 13ಕ್ಕೆ. ಮೀಮ್​ ಮಾಡುವ ಉದ್ದೇಶದಿಂದ ಯಾರೋ ಈ ಟ್ವೀಟ್​ ಎಡಿಟ್​ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: Salman Khan: ನೆಲಕಚ್ಚಿದ ರಾಧೆ; ಸಲ್ಮಾನ್​ ವೃತ್ತಿಜೀವನದಲ್ಲೇ ಅತ್ಯಂತ ಕಳಪೆ ಸಿನಿಮಾ

Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ರೆಕಾರ್ಡ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us