
ಬೆಂಗಳೂರು, ಜ.19: ಮ್ಯಾಟ್ರಿಮೋನಿದಂತಹ ಆ್ಯಪ್‌ಗಳನ್ನು (Matrimonial scam )ಬಳಸುವ ಮುನ್ನ ಎಚ್ಚರವಾಗಿರಬೇಕು. ಇಂತಹ ಆ್ಯಪ್ಗಳಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಆಗ್ಗಾಗೆ ಬಹಿರಂಗ ಆಗುತ್ತಿದೆ. ಇದೀಗ ಬೆಂಗಳೂರಿನ ನವ್ಯಾ ಎಂಬ ಯುವತಿಯಿಂದ ಈ ಆ್ಯಪ್ ಮೂಲಕ ಉದ್ಯಮಿ ಎಂದು ಹೇಳಿಕೊಂಡ ಲಕ್ಷ ಲಕ್ಷ ಹಣವನ್ನು ದೋಚಿದ್ದಾನೆ. ಬೆಂಗಳೂರಿನ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನವ್ಯಾ ಅವರನ್ನು ಉದ್ಯಮಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಇತ ಮಾತ್ರವಲ್ಲದೆ ಮನೆಯವರು ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು NDTV ವರದಿ ಮಾಡಿದೆ.
ಮಾರ್ಚ್ 2024 ರಲ್ಲಿ, ನವ್ಯಾ ಶ್ರೀ ಅವರು ಒಕ್ಕಲಿಗ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್ ಮೂಲಕ ವಿಜಯ್ ಎನ್ನುವ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದಾರೆ. ವಿಜಯ್ ತಾನು VRG ಎಂಟರ್‌ಪ್ರೈಸಸ್‌ನ ಮಾಲೀಕ ಎಂದು ಹೇಳಿಕೊಂಡಿದ್ದಾನೆ. ರಾಜಾಜಿನಗರ ಮತ್ತು ಸದಾಶಿವನಗರದಲ್ಲಿ ಕ್ರಷರ್‌ಗಳು, ಲಾರಿಗಳು, ಭೂಮಿ ಮತ್ತು ಪ್ರೀಮಿಯಂ ವಸತಿ ಆಸ್ತಿಗಳನ್ನು ಹೊಂದಿರುವುದಾಗಿ ಸುಳ್ಳು ಹೇಳಿದ್ದಾನೆ. ಇದನ್ನು ನವ್ಯಾ ಕೂಡ ನಂಬಿದ್ದರು. ತಾನು ದೊಡ್ಡ ಬಿಸಿನೆಸ್ ಮ್ಯಾನ್ ಎಂದು ಬಿಂಬಿಸಲು 2019ರ ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾನೆ. ನನ್ನ ಬಳಿ 715 ಕೋಟಿ ರೂ. ಮೌಲ್ಯ ಆಸ್ತಿ ಇದೆ. ಅದರ ಬಗ್ಗೆಯೂ ಸುಳ್ಳು ದಾಖಲೆಗಳನ್ನು ಕೂಡ ಹಂಚಿಕೊಂಡಿದ್ದಾನೆ.
NDTV ವರದಿಯ ಪ್ರಕಾರ ನವ್ಯಾ ಅವರಿಂದ ವಿಜಯ್ ತಕ್ಷಣಕ್ಕೆ 15 ಸಾವಿರ ರೂ. ಬೇಕು, ನನ್ನ ಫೋನ್ ಪೇ ವರ್ಕ್ ಆಗುತ್ತಿಲ್ಲ ಎಂದು ಪಡೆದಿದ್ದಾನೆ. ನಂತರ ಒಂದೇ ದಿನದಲ್ಲಿ ತನ್ನ ಸ್ನೇಹಿತರಿಂದ ಹಣ ಪಡೆದು ಅದನ್ನು ನವ್ಯಾಗೆ ವಾಪಸ್ ನೀಡಿದ್ದಾನೆ. ಇದು ನವ್ಯಾನನ್ನು ನಂಬಿಸಲು ಈ ರೀತಿ ಮಾಡಿದ್ದಾನೆ. ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ನವ್ಯಾಗೆ ವಿಜಯ್ ತಮ್ಮ ಕುಟುಂಬ ಸದಸ್ಯರನ್ನು ಪರಿಚಯಿಸಿದ್ದಾನೆ. ತಂದೆ ಕೃಷ್ಣಪ್ಪ ಬಿ ಗೌಡ ಅವರು ನಿವೃತ್ತ ತಹಶೀಲ್ದಾರ್ ಎಂದು ಹೇಳಿದ್ದಾನೆ. ಜತೆಗೆ ತನ್ನ ಎಂಟರ್ಪ್ರೈಸಸ್ಗೆ ಸೇರಿಕೊಳ್ಳುವಂತೆ ಹೇಳಿದ್ದಾನೆ. ಇದರ ನವ್ಯಾ ಅಪ್ಪ-ಅಮ್ಮ, ಆಕೆ ಸ್ನೇಹಿತರಿಗೆ ಕೂಡ ಹೇಳಿದ್ದಾನೆ. ಅವರು 66 ಲಕ್ಷ ಮತ್ತು 23 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಈ ಹಣವನ್ನು ವಾಪಸು ನೀಡಲು ಸಾಧ್ಯವಾಗದಿದ್ದಾಗ, ತನ್ನ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಈ ಬಗ್ಗೆಯೂ ಸುಳ್ಳು ದಾಖಲೆಗಳನ್ನು ನೀಡಿದ್ದಾನೆ. ನಾನು ಇದರಿಂದ ತುಂಬಾ ಕಷ್ಟಕ್ಕೆ ಸಿಲುಕಿಕೊಂಡಿದದ್ದೇನೆ ಎಂದು ನವ್ಯಾ ಮನೆಯವರ ಮುಂದೆ ಸುಳ್ಳು ಹೇಳಿದ್ದಾನೆ. ನಂತರ ನವ್ಯಾ ಅವರ ತಂದೆ 0.5 ಲಕ್ಷ ರೂ.ಗಳನ್ನು ನೀಡಿದ್ದರೆ, ಆಕೆಯ ತಾಯಿ 18 ಲಕ್ಷ ರೂ.ಗಳನ್ನು ನೀಡಿದ್ದಾರೆ. ನವ್ಯಾ ತಂದೆ ಮತ್ತು ತಾಯಿ ತಮ್ಮ ನಿವೃತ್ತಿ ಬಂದ ಹಣವನ್ನು ಆತನಿಗೆ ನೀಡಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೊನೆಗೂ ಈ ರಸ್ತೆ ನಿರ್ಮಾಣಕ್ಕೆ NHAI ಒಪ್ಪಿಗೆ
ನವ್ಯಾಳ ಆಭರಣಗಳು ಮತ್ತು ಆಕೆ ಅಕ್ಕನಿಂದಲ್ಲೂ ಕೂಡ ಹಣವನ್ನು ಪಡೆದಿದ್ದಾನೆ. ಸ್ವಲ್ಪ ಸಮಯದ ನಂತರ ನವ್ಯಾ ಈ ಹಣವನ್ನು ಕೇಳಲು ಆತನ ಮನೆ ಮುಂದೆ ಹೋದಾಗ ಸತ್ಯ ತಿಳಿದಿದೆ. ಅವನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಅವನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದನು. ಇಡೀ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ಹಣ ನೀಡುವಂತೆ ಕೇಳಿದ್ರೆ ವಿಜಯ್ ಬೆದರಿಕೆ ಹಾಕಿದ್ದಾನೆ. ಪೊಲೀಸ್ ದಾಖಲೆಗಳ ಪ್ರಕಾರ ವಿಜಯ್ ಹಲವು ಬ್ಯಾಂಕ್ ಖಾತೆಗಳ ಮೂಲಕ 1,75,66,890 ರೂ. ಸಂಗ್ರಹಿಸಿ, ಕೇವಲ 22,51,800 ರೂ.ಗಳನ್ನು ಹಿಂದಿರುಗಿಸಿದ್ದಾನೆ. ವಿಜಯ್, ಆತನ ತಂದೆ ಮತ್ತು ತಾಯಿ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ