ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೊನೆಗೂ ಈ ರಸ್ತೆ ನಿರ್ಮಾಣಕ್ಕೆ NHAI ಒಪ್ಪಿಗೆ
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಾದಹಳ್ಳಿ ಜಂಕ್ಷನ್‌ನಲ್ಲಿನ ಟ್ರಾಫಿಕ್ ಸಮಸ್ಯೆಗೆ ಎನ್‌ಎಚ್‌ಎಐ ಮುಕ್ತಿ ನೀಡುತ್ತಿದೆ. 35 ಕೋಟಿ ರೂ. ವೆಚ್ಚದಲ್ಲಿ 750 ಮೀಟರ್ ಉದ್ದದ ಆರು ಪಥಗಳ ಅಂಡರ್‌ಪಾಸ್ ನಿರ್ಮಾಣವಾಗಲಿದ್ದು, ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಇದು ವಿಮಾನ ನಿಲ್ದಾಣಕ್ಕೆ ಸಿಗ್ನಲ್-ಮುಕ್ತ ಮತ್ತು ವೇಗದ ಸಂಚಾರವನ್ನು ಖಚಿತಪಡಿಸುತ್ತದೆ, ದೀರ್ಘಕಾಲದ ಪ್ರಯಾಣಿಕರ ಗೋಳಿಗೆ ಪರಿಹಾರ ನೀಡುತ್ತದೆ. ಈ ಯೋಜನೆಯು ಬೆಂಗಳೂರು ವಿಮಾನ ನಿಲ್ದಾಣದ ರಸ್ತೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಬೆಂಗಳೂರು, ಜ.19: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ಈ ರಸ್ತೆಯಲ್ಲಿ ಯಾವಗಲೂ ಟ್ರಾಪಿಕ್, ಇದೊಂದು ಪ್ರಯಾಣಿಕರಿಗೆ ದಿನನಿತ್ಯದ ಗೋಳಾಗಿತ್ತು. ಇದೀಗ ಇದಕ್ಕೆ ಮುಕ್ತಿ ಸಿಗಲಿದೆ. ಬಳ್ಳಾರಿ ರಸ್ತೆಯನ್ನು ಬೆಂಗಳೂರಿನ ಅತ್ಯಂತ ವೇಗದ ಹೆದ್ದಾರಿಯನ್ನಾಗಿ ಬದಲಾವಣೆ ಮಾಡಲಾಗತ್ತಿದೆ. ಎತ್ತರದ ಕಾರಿಡಾರ್‌ಗಳು, ಫ್ಲೈಓವರ್‌ಗಳು ಮತ್ತು ಸಿಗ್ನಲ್-ಮುಕ್ತ ಮಾರ್ಗಗಳು ನಿರ್ಮಾಣ ಮಾಡಲಾಗುತ್ತಿದೆ. ಇದರ ತೆಗೆ ಹೆಬ್ಬಾಳದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಹೋಗಲು ಸಾದಹಳ್ಳಿ ಜಂಕ್ಷನ್‌ನಲ್ಲಿ ಇರುವ ಟ್ರಾಫಿಕ್ ಸಿಗ್ನಲ್ಗೆ ಬ್ರೇಕ್ ಹಾಕಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗಲು ಇರುವ ಸಾದಹಳ್ಳಿ ಜಂಕ್ಷನ್ ಸಿಗ್ನಲ್ನ್ನ್ನು ತೆಗೆದು, ಸಾದಹಳ್ಳಿ ಜಂಕ್ಷನ್‌ನಲ್ಲಿ 750 ಮೀಟರ್ ಉದ್ದದ, ಆರು ಪಥಗಳ ಅಂಡರ್‌ಪಾಸ್ ನಿರ್ಮಿಸುವ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪುನರುಜ್ಜೀವನಗೊಳಿಸಿದೆ. ಈ ಅಂಡರ್‌ಪಾಸ್ ಪೂರ್ಣಗೊಂಡ ನಂತರ, ವಿಮಾನ ನಿಲ್ದಾಣಕ್ಕೆ ಯಾವುದೇ ತಡೆ ಇಲ್ಲದೆ ಸಂಚಾರ ಮಾಡಬಹುದು.
ಇದು ನಗರದ ಅತ್ಯಂತ ನಿರ್ಣಾಯಕ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಹೆಬ್ಬಾಳ ಮತ್ತು ಟ್ರಂಪೆಟ್ ಇಂಟರ್ಚೇಂಜ್ ನಡುವಿನ ಸಿಗ್ನಲ್ ಮುಕ್ತ ಪ್ರದೇಶದಲ್ಲಿ ಈ ಸಾದಹಳ್ಳಿ ಜಂಕ್ಷನ್ ಸಿಗ್ನಲ ದೊಡ್ಡ ತಲೆನೋವಾಗಿತ್ತು. ಜಕ್ಕೂರು, ಯಲಹಂಕ ಮತ್ತು ಇತರ ಜಂಕ್ಷನ್‌ಗಳಲ್ಲಿ ವಿಮಾನ ನಿಲ್ದಾಣದ ಸಂಚಾರ ಫ್ಲೈಓವರ್‌ಗಳ ಮೇಲೆ ಹಾದು ಹೋಗುತ್ತದೆ. ಸ್ಥಳೀಯ ಸಂಚಾರಕ್ಕೆ ಮಾತ್ರ ಸ್ವಲ್ಪ ತಡೆಯಲಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳು, ಅಂತರರಾಷ್ಟ್ರೀಯ ವಿಮಾನ ನಿರ್ಗಮನದ ಸಮಯದಲ್ಲಿ ಈ ಹಿಂದೆ ಸಮಸ್ಯೆಯಾಗುತ್ತಿತ್ತು. ಇದೀಗ ಇದನ್ನು ಪರಿಹಾರ ಮಾಡಲಾಗಿದೆ.
35 ಕೋಟಿ ರೂ.ಗಳ ಯೋಜನೆಗೆ NHAI ಪ್ರಧಾನ ಕಚೇರಿಯಿಂದ ಅನುಮೋದನೆ ದೊರೆತಿದ್ದು, ಅಧಿಕೃತ ಚಾಲನೆ ನೀಡಲಾಗಿದೆ. ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ. ಸುಮಾರು ಒಂದು ದಶಕದ ಹಿಂದೆ, NHAI ಮೊದಲು ಸಾದಹಳ್ಳಿ ಸಿಗ್ನಲ್ ಅನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಡಿತ್ತು. ಈ ಯೋಜನೆಯು ಆರಂಭದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಲು ಯೋಜನೆಯನ್ನು ಹಾಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಯೋಜನೆಯ ಒಪ್ಪಿಗೆ ವಿಳಂಬವಾಗಿತ್ತು. ಆದರೆ ಸಂಚಾರ ಬದಲಾವಣೆಗಳೊಂದಿಗೆ ಕೆಲಸವು ಅಂತಿಮವಾಗಿ 2019 ರಲ್ಲಿ ಪ್ರಾರಂಭವಾಯಿತು. ಆದರೆ ಅಧಿಕಾರಿಗಳು ಈ ರಸ್ತೆಯ ಮ್ಯಾಪಿಂಗ್ ಹಾಗೂ ಡಿಸೈನ್ನಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು ಎಂದು ಮತ್ತೆ ಈ ಯೋಜನೆ ವಿಳಂಬವಾಗಿತ್ತು. ಇದರಿಂದ ಸಾರ್ವಜನಿಕರಿಗೆ ನಿರಾಸೆ ಕೂಡ ಆಗಿತ್ತು. ಆದರೆ ಇದೀಗ ಇದಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದ್ದು, ಕೆಲಸ ಆರಂಭವಾಗಿದೆ.
ಮುಖ್ಯ ರಸ್ತೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ಸಾದಹಳ್ಳಿ ಜಂಕ್ಷನ್‌ನಲ್ಲಿ ಸುಮಾರು ಎರಡು ವರ್ಷಗಳ ಕಾಲ ಸಂಚಾರ ಮಾಡಲ ಅವಕಾಶ ಇರುವುದಿಲ್ಲ ಜತೆಗೆ ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ದ್ವಿಪಥ ಸರ್ವಿಸ್ ರಸ್ತೆಗಳನ್ನು ವಿಸ್ತರಿಸಲು NHAI ಯೋಜಿಸಿದೆ. ಸಾದಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು ಅನುಕೂಲಕ್ಕೆ ಹಾಗೂ ಸಂಚಾರವನ್ನು ವೇಗಗೊಳಿಸಲು ಕಾಂಕ್ರೀಟ್ ಸ್ಲ್ಯಾಬ್ ಅನ್ನು ಸಹ ನಿರ್ಮಾಣ ಮಾಡಲಾಗುವುದು ಎಂದು ಇಲಾಖೆ ಹೇಳಿದೆ. ವಿಮಾನ ನಿಲ್ದಾಣದ ಪ್ರಯಾಣಿಕರು ಸುಗಮ ಸಂಚಾರಕ್ಕಾಗಿ ಕಾಯುತ್ತಿದ್ದು, ಸಾದಹಳ್ಳಿ, ಚೌಡೇನಹಳ್ಳಿ, ಚನ್ನಹಳ್ಳಿ, ಗಡೇನಹಳ್ಳಿ ಮತ್ತು ಹತ್ತಿರದ ಹಳ್ಳಿಗಳಿಗೂ ಇದು ತುಂಬಾ ಅನುಕೂಲ ಆಗಲಿದೆ. ದೈನಂದಿನ ಪ್ರಯಾಣ, ಶಾಲಾಗೆ ಹೋಗುವವರಿಗೆ, ಕೃಷಿ ಸಾರಿಗೆ ಮತ್ತು ದೇವನಹಳ್ಳಿ ಮತ್ತು ನಗರಕ್ಕೆ ಪ್ರವೇಶಕ್ಕಾಗಿ ಈ ಜಂಕ್ಷನ್ ಒಂದು ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆಗಿದೆ.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ
ಎನ್‌ಎಚ್‌ಎಐ ಯಲಹಂಕ ವಾಯುಪಡೆ ನಿಲ್ದಾಣದ ಬಳಿ ಕಟ್-ಅಂಡ್-ಕವರ್ ವಿಧಾನವನ್ನು ಬಳಸಿಕೊಂಡು 70 ಕೋಟಿ ರೂ. ಅಂದಾಜು ವೆಚ್ಚದಲ್ಲಿ 1 ಕಿಮೀ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುತ್ತಿದೆ. ಹೆಬ್ಬಾಳ ಮತ್ತು ಟ್ರಂಪೆಟ್ ಇಂಟರ್ಚೇಂಜ್ ನಡುವಿನ ಏಕೈಕ ಸರ್ವಿಸ್ ರಸ್ತೆ ಇದಾಗಿದೆ. ಅಧಿಕಾರಿಗಳ ಪ್ರಕಾರ, ಹೆಬ್ಬಾಳ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆಗಳನ್ನು ಅಗಲಗೊಳಿಸುವುದು ಮತ್ತು ಜಕ್ಕೂರು ಏರೋಡ್ರೋಮ್ ಬಳಿ ಡಾಂಬರೀಕರಣ ಸೇರಿದಂತೆ ನವೀಕರಣ ಮಾಡಿದ್ರೆ ಖಂಡಿತ ವಿಮಾನ ನಿಲ್ದಾಣಕ್ಕೆ ವೇಗವಾಗಿ ತಲುಪಬಹುದು. ಸಾದಹಳ್ಳಿ ಮತ್ತು ಯಲಹಂಕ ವಾಯುಪಡೆ ನಿಲ್ದಾಣದಲ್ಲಿನ ಯೋಜನೆಗಳು ಪೂರ್ಣಗೊಂಡ ನಂತರ, ಕೆಐಎ ರಸ್ತೆಯಲ್ಲಿ ಸಂಚಾರ ಯಾವುದೇ ಅಡೆತಡೆಯಿಲ್ಲದೆ ಹೋಗಬಹುದು ಎಂದು ರಾಷ್ಟ್ರೀಯ ರಸ್ತೆ ಸಾರಿಗೆ ಇಲಾಖೆ ಹೇಳಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಮ್ ಮಾಡಿ
