ಪ್ರಯಾಣಿಕರಿಗೆ ಸಿಹಿ ಸುದ್ದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ

ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರಿಗಾಗಿ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್‌ಗಳನ್ನು ಆರಂಭಿಸಿದೆ. ಮೆಜೆಸ್ಟಿಕ್, ಚಿಕ್ಕಪೇಟೆ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ಲಭ್ಯವಿರುವ ಈ ಲಾಕರ್‌ಗಳಲ್ಲಿ, 2 ರಿಂದ 5 ಬ್ಯಾಗ್‌ಗಳನ್ನು ಇಡಲು ಅವಕಾಶ ನೀಡಿದೆ. ಸ್ಮಾರ್ಟ್​ ಡಿಜಿಟಲ್​ ಲಗೇಜ್​ ಲಾಕರ್ ಕಾರ್ಯ, ಇದನ್ನು ಉಯೋಗಿಸುವುದು ಹೇಗೆ? ಲಗೇಜ್​ ಇಡಲು ಎಷ್ಟು ಹಣ ನೀಡಬೇಕು ಎಂಬ ಮಾಹಿತಿ ಇಲ್ಲಿದೆ.

ಪ್ರಯಾಣಿಕರಿಗೆ ಸಿಹಿ ಸುದ್ದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ
ಸ್ಮಾರ್ಟ್​ ಡಿಜಿಟಲ್​ ​ಲಾಕರ್
Follow us
ವಿವೇಕ ಬಿರಾದಾರ
|

Updated on:Nov 14, 2024 | 8:39 AM

ಬೆಂಗಳೂರು, ನವೆಂಬರ್​ 14: ನಮ್ಮ ಮೆಟ್ರೋ (Namma Metro) ವೇಗದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುಕೂಲಕಾರಿಯಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್​ ಮುಕ್ತ ಸಂಚಾರ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿ (BMRCL) ​​ಸ್ಮಾರ್ಟ್​ ಡಿಜಿಟಲ್​ ಲಗೇಜ್​ ಲಾಕರ್​ ಅನ್ನು ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್​ ಡಿಜಿಟಲ್​ ​ಲಾಕರ್​ನಲ್ಲಿ ತಮ್ಮ ಲಗೇಜ್​ ಇಟ್ಟು ಬೇರಡೆ ಹೋಗಬೇಕಿದ್ದ ಸ್ಥಳಕ್ಕೆ ತೆರಳಿ ವಾಪಸ್​ ಬರಬಹುದು. ಸ್ಮಾರ್ಟ್​ ಡಿಜಿಟಲ್​ ಲಗೇಜ್​ ಲಾಕರ್ ಕಾರ್ಯ, ಇದನ್ನು ಉಯೋಗಿಸುವುದು ಹೇಗೆ? ಲಗೇಜ್​ ಇಡಲು ಎಷ್ಟು ಹಣ ನೀಡಬೇಕು ಎಂಬ ಮಾಹಿತಿ ಇಲ್ಲಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​)ನಲ್ಲಿ ಬುಧವಾರ ಸ್ಮಾರ್ಟ್​ ಡಿಜಿಟಲ್​ ಲಾಕರ್​ ಆರಂಭಗೊಂಡಿದೆ. ಮೆಜೆಸ್ಟಿಕ್​ ನಿಲ್ದಾಣದ ‘ಡಿ’ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್​ ಡಿಜಿಟಲ್​ ಲಾಕರ್​ಗೆ ಬಿಎಂಆರ್​ಸಿಎಲ್​ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು. ಪ್ರಯಾಣಿಕರು 2 ರಿಂದ 5 ಬ್ಯಾಗ್‌ಗಳನ್ನು ಸ್ಮಾರ್ಟ್ ಡಿಜಿಟಲ್‌ ಲಾಕರ್‌ನಲ್ಲಿ ಇಡಬಹುದಾಗಿದೆ.

ಟ್ವಿಟರ್​ ಪೋಸ್ಟ್​

ಡಿಜಿಟಲ್​ ಲಾಕರ್​ ಉಪಯೋಗ

ಸ್ಮಾರ್ಟ್ ಡಿಜಿಟಲ್ ಲಾಕರ್‌ನಲ್ಲಿನ ಕಿಯೋಸ್ಟ್‌ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ಕಿಯೋಸ್ಟ್‌ನಲ್ಲಿ ಹಾಕಿದರೆ ಬ್ಯಾಗ್‌ಗಳನ್ನು ಇಡಲು ಲಾಕ‌ರ್ ದೊರೆಯಲಿದೆ. ನಂತರ, ಲಾಕರ್​ನಲ್ಲಿ ಬ್ಯಾಗ್​ ಇಟ್ಟು ಲಾಕ್​ ಮಾಡಬೇಕು. ಅನಂತರ ತೆರೆಯಬೇಕಿದ್ದರೆ ಬ್ಯಾಗ್​ ಮಾಲೀಕರೇ ಬಂದು ಒಟಿಪಿ ಹಾಕಬೇಕು. ಆಗ ಲಾಕರ್​ ತೆರೆಯುತ್ತದೆ. ಹೀಗಾಗಿ, ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಲಾಲ್​ ಬಾಗ್​ ಆಯ್ತು, ಬಾಲ ಭವನ ಪ್ರವೇಶ ಶುಲ್ಕ ಏರಿಸಲು ಚಿಂತನೆ

ಎಷ್ಟು ಹಣ ಪಾವತಿಸಬೇಕು?

2 ರಿಂದ 3 ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಇಡಲು 70 ರೂ. ಹಾಗೂ 4 ರಿಂದ 5 ಬ್ಯಾಗ್‌ಗಳನ್ನು ಇಡಲು 100 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ 12 ಗಂಟೆಗಳ ಕಾಲ ಬ್ಯಾಗ್‌ಗಳನ್ನು ಇಟ್ಟರೆ ಕ್ರಮವಾಗಿ 120 ಮತ್ತು 160 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಶ್ರೀಘ್ರದಲ್ಲೇ ಎಲ್ಲ ನಿಲ್ದಾಣಗಳಿಗೂ ವಿಸ್ತರಣೆ

ನೂತನ ಸೇವೆಯು ಸದ್ಯ ಮೆಜೆಸ್ಟಿಕ್ ಕೆಂಪೇಗೌಡ, ಚಿಕ್ಕಪೇಟೆ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಇತರ ನಿಲ್ದಾಣಗಳಿಗೂ ವಿಸ್ತರಿಸಲು ಸೇಫ್ ಕ್ಲಾಕ್ ಸಂಸ್ಥೆ ಯೋಜಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:07 am, Thu, 14 November 24

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ