ಬೆಂಗಳೂರು: ನೀವೂ ದಿನಾ ನಡೆದಾಡುವ ಪಾರ್ಕ್, ಬಸ್ ಸ್ಟಾಂಡ್, ಶಾಲೆ- ಕಾಲೇಜು ಸಮೀಪ, ಫುಟ್ಪಾತ್ಗಳಲ್ಲಿ ನಿಂತು ಧಮ್ ಮಾರೋ ಧಮ್ ಅಂತ ಸಿಗರೇಟ್ ಸೇದ್ತಾ ಹೊಗೆ ಬಿಡೋ ವ್ಯಸನಿಗಳನ್ನು ನೋಡಿರುತ್ತೀರ. ಒಮ್ಮೊಮ್ಮೆ ಅವರ ಈ ವ್ಯಸನದಿಂದ ಕಿರಿ-ಕಿರಿಯನ್ನು ಅನುಭವಿಸಿರುತ್ತೀರ. ಇವರ ಈ ಉಪಟಳ ಅದೊಂದು ಏರಿಯಾದಲ್ಲಿ ಜಾಸ್ತಿಯಾಗಿತ್ತಂತೆ. ಅದಕ್ಕೆ ನಗರದ ಅದೊಂದು ಠಾಣೆ ಪೋಲಿಸರು ಸ್ಮೋಕರ್ಸ್ ವಿರುದ್ಧ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿ ಸ್ಪೆಷಲ್ ಡ್ರೈವ್ ಮಾಡಿ ಒಂದೇ ತಿಂಗಳ ಆಸುಪಾಸಿನಲ್ಲಿ ಲಕ್ಷ-ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ 40 ದಿನಗಳಲ್ಲಿ ಬೆಂಗಳೂರಿನ ಬಂಡೇ ಪಾಳ್ಯ ಠಾಣಾ ಪೊಲೀಸರು ಬರೋಬ್ಬರಿ 2 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಂಡೇಪಾಳ್ಯ ಪೊಲೀಸರಿಂದ 40 ದಿನಗಳಲ್ಲಿ 1 ಸಾವಿರ ಕೇಸ್ ದಾಖಲಾಗಿದೆ. ಸಿಗರೇಟ್ ಮತ್ತು ಟೊಬ್ಯಾಕೋ ಆ್ಯಕ್ಟ್ ಅಡಿ ಕೇಸ್ ಹಾಕಿ ಧೂಮಪಾನಿಗಳಿಂದ ದಂಡ ವಸೂಲಿ ಮಾಡಲಾಗಿದೆ. ಓರ್ವ ಧೂಮಪಾನಿಯಿಂದ 200 ರೂ. ದಂಡ ವಸೂಲಿ ಮಾಡಲಾಗಿದೆ. ಶಾಲಾ ಕಾಲೇಜು ಸುತ್ತ-ಮುತ್ತ ಬಸ್ ನಿಲ್ದಾಣ, ದೇವಸ್ಥಾನ, ರಸ್ತೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಂಡ ವಸೂಲಿ ಮಾಡಲಾಗಿದೆ.
ಬಂಡೇಪಾಳ್ಯ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ಜನ ಸಂಪರ್ಕ ಸಭೆಯಲ್ಲಿ ಈ ಕುರಿತು ದೂರುಗಳು ಕೇಳಿ ಬಂದಿದ್ದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಸೂಚನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಂಡೇಪಾಳ್ಯ ಇನ್ಸ್ಪೆಕ್ಟರ್ ಎಲ್.ವೈ. ರಾಜೇಶ್ಗೆ ಡಿಸಿಪಿ ಸೂಚನೆ ನೀಡಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕರ್ಸ್ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ನಗರದ ಆಗ್ನೇಯ ವಿಭಾಗದಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಈ ಕುರಿತು ದೂರುಗಳು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಬಂಡೇ ಪಾಳ್ಯ ಇನ್ಸ್ ಪೆಕ್ಟರ್ ಎಲ್ ವೈ ರಾಜೇಶ್ ಗೆ ಸೂಚನೆ ನೀಡಿ ಕಾನೂನು ರೀತ್ಯಾ ಕ್ರಮಕ್ಕೆ ಸೂಚಿಸಿದ್ದರು.
ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರಿನಲ್ಲಿ ಬಂಡೇಪಾಳ್ಯ ಪೊಲೀಸರಿಂದ ಸ್ಮೋಕರ್ಸ್ ವಿರುದ್ದ ಸ್ಪೆಷಲ್ ಡ್ರೈವ್ ನಡೆಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ 40 ದಿನಗಳಲ್ಲಿ 1 ಸಾವಿರ ಕೇಸ್ ದಾಖಲು ಮಾಡಿದ್ದು, ಸಿಗರೇಟ್ ಮತ್ತು ಟೊಬಾಕೋ ಆಕ್ಟ್ ಅಡಿ ಕೇಸ್ ಹಾಕಿ, ಧೂಮಪಾನಿಗಳಿಂದ ದಂಡ ವಸೂಲಿ ಮಾಡಿದ್ದಾರೆ.
ಓರ್ವ ಧೂಮಪಾನಿಯಿಂದ 200 ರೂ. ದಂಡದ ಮೊತ್ತ ವಸೂಲಿ ಮಾಡಿರುವ ಬಂಡೇಪಾಳ್ಯ ಪೊಲೀಸರು, ಶಾಲಾ ಕಾಲೇಜು ಸುತ್ತಮುತ್ತ, ಬಸ್ ನಿಲ್ದಾಣ, ದೇವಸ್ಥಾನ, ರಸ್ತೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ್ದು, ಬಂಡೇ ಪಾಳ್ಯ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಧಮ್ ಎಳಿತಾ ಸಾರ್ವಜನಿಕರಿಗೆ ಕ್ವಾಟ್ಲೆ ಕೊಡ್ತಿದ್ದವರ ವಿರುದ್ದ ದಂಡಾಸ್ತ್ರ ಪ್ರಯೋಗಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದೇ ರೀತಿ ಉಳಿದ ಠಾಣೆಗಳ ಪೋಲಿಸರು ಸ್ಟಿಕ್ಟ್ ರೂಲ್ಸ್ ಜಾರಿ ಮಾಡಿದರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಯಾಸಿವ್ ಸ್ಮೋಕರ್ಸ್ ಗಳಿಗೆ ಇನ್ನಾದರೂ ಕಿರಿಕಿರಿ ತಪ್ಪಲಿದ್ದು, ಸ್ಮೋಕರ್ಸ್ ಹಾವಳಿಗೆ ಬ್ರೇಕ್ ಹಾಕಬಹುದಾಗಿದೆ. ಈ ಮೂಲಕ ಮಾರಕ ಕ್ಯಾನ್ಸರ್ ನಿಯಂತ್ರಕ್ಕೆ ಕ್ರಮ ಕೈಗೊಂಡಂತಾಗುತ್ತದೆ.
(ವರದಿ: ಶಿವಪ್ರಸಾದ್)
ಇದನ್ನೂ ಓದಿ: Health Tips: ಧೂಮಪಾನ ಒಮ್ಮೆಲೆ ಬಿಡಲು ಪ್ರಯತ್ನಿಸುತ್ತಿದ್ದೀರಾ? ವೈದ್ಯರ ಸಲಹೆ ಏನು ತಿಳಿಯಿರಿ
World No Tobacco Day 2021: ಕೊರೊನಾ ಸೋಂಕಿನಿಂದ ಧೂಮಪಾನಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆಯೇ?
Published On - 7:40 pm, Thu, 16 December 21