Bengaluru News: ಮೊಬೈಲ್​​ ಶೋರೂಂ ಟಾಯ್ಲೆಟ್​ನಲ್ಲಿ ರಾತ್ರಿಯಿಡಿ ಕೂತು ಲವ್ವರ್​ಗಾಗಿ ಮೊಬೈಲ್​ ಕದ್ದ ಪ್ರಿಯಕರ ಅಂದರ್​

ಟಾಟಾ ಕ್ರೋಮಾ ಸ್ಟೋರ್ (ಜೆ.ಪಿ.ನಗರ)ದಲ್ಲಿ 5 ಲಕ್ಷ ಮೌಲ್ಯದ 6 ಮೊಬೈಲ್​ನ್ನು ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದು, ಮೊಬೈಲ್​ಗಳನ್ನು ವಶಕ್ಕೆ ಪಡೆದು ಟಾಟಾ ಕ್ರೋಮಾ ಸ್ಟೋರ್‌ಗೆ ಹಸ್ತಾಂತರಿಸಲಾಗಿದೆ.

Bengaluru News: ಮೊಬೈಲ್​​ ಶೋರೂಂ ಟಾಯ್ಲೆಟ್​ನಲ್ಲಿ ರಾತ್ರಿಯಿಡಿ ಕೂತು ಲವ್ವರ್​ಗಾಗಿ ಮೊಬೈಲ್​ ಕದ್ದ ಪ್ರಿಯಕರ ಅಂದರ್​
ಪ್ರಾತಿನಿಧಿಕ ಚಿತ್ರ
Edited By:

Updated on: Jul 30, 2022 | 2:46 PM

ಬೆಂಗಳೂರು: ಲವ್ವರ್​ಗಾಗಿ ಹುಡುಗರು ಏನೇನೋ ಸಾಹಸಗಳನ್ನು ಮಾಡಿರುವುದುನ್ನು ನಾವು ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಲವ್ವರ್​​ ತನ್ನ ಪ್ರೇಯಸಿಗಾಗಿ ಮೊಬೈಲ್​​ (mobile) ಕದಿಯಲು ಬಂದು, ಮೊಬೈಲ್​ ಶೋರೂಂನಲ್ಲಿ ಸಿಕ್ಕಿಬಿದ್ದಿರುವಂತಹ ಘಟನೆ ನಡೆದಿದೆ. ಲವ್ವರ್​​ಗಾಗಿ ಮೊಬೈಲ್ ಶಾಪ್​​ನ ಟಾಯ್ಲೆಟ್​ನಲ್ಲೇ ಕೂತು ಮೊಬೈಲ್ ಕಳ್ಳತನ ಮಾಡಿದ್ದ ಆಸಾಮಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಮುನಾಫ್ ಕಳ್ಳತನ ಮಾಡಿರುವ ಆರೋಪಿ ಎನ್ನಲಾಗುತ್ತಿದೆ. ನಗರದ ಜೆ.ಪಿ.ನಗರದಲ್ಲಿರುವ ಮೊಬೈಲ್‌ ಶೋರೂಂನಲ್ಲಿ ಘಟನೆ ನಡೆದಿದ್ದು, ಕಳ್ಳನೊಬ್ಬ ಗ್ರಾಹಕನಂತೆ ಮೊಬೈಲ್​ ಶೋರೂಂಗೆ ಎಂಟ್ರಿ ಕೊಟ್ಟಿದ್ದಾನೆ.

ಇದನ್ನೂ ಓದಿ: Crime News: ಪ್ರತ್ಯೇಕ ಮೂರು ಕೊಲೆ ಪ್ರಕರಣಗಳ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ರಾತ್ರೋರಾತ್ರಿ ಮೊಬೈಲ್​​ ಶೋರೂಂನಲ್ಲಿ ಅಡಗಿ ಕುಳಿತಿದ್ದಾನೆ. ಇತ್ತ ಶೋರೂಂ ಕ್ಲೋಸ್​ ಆಗುತ್ತಿದ್ದಂತೆ ತನ್ನ ಕೈಚಳಕ ತೋರಿದ್ದು, ಲಕ್ಷ ಲಕ್ಷ ಬೆಲೆಬಾಳು ಮೊಬೈಲ್​ಗಳು ಎಗರಿಸಿದ್ದಾನೆ. ಆದರೆ, ಮರುದಿನ ಬೆಳಗ್ಗೆ ಸ್ವಚ್ಛತಾ ಸಿಬ್ಬಂದಿ ಬಂದು ಅಂಗಡಿ ತೆರೆದಾಗ ಆತ ಪರಾರಿಯಾಗಲು ಯತ್ನಿಸಿದನಾದರೂ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಎಲ್ಲಾ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Crime News: ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್, ಆರೋಪಿಗಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಕದ್ದ ಮೊಬೈಲ್‌ಗಳನ್ನು ಮೊಬೈಲ್​ ಶೋರೂಂಗೆ ಒಪ್ಪಿಸಿದ ಪೊಲೀಸ್​​  

ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಪಿ. ಕೃಷ್ಣಕಾಂತ್ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಕಳ್ಳನೊಬ್ಬ ಟಾಟಾ ಕ್ರೋಮಾ ಸ್ಟೋರ್ (ಜೆ.ಪಿ.ನಗರ)ದಲ್ಲಿ 5 ಲಕ್ಷ ಮೌಲ್ಯದ 6 ಮೊಬೈಲ್​ನ್ನು ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದು, ಮೊಬೈಲ್​ಗಳನ್ನು ವಶಕ್ಕೆ ಪಡೆದು ಟಾಟಾ ಕ್ರೋಮಾ ಸ್ಟೋರ್‌ಗೆ ಹಸ್ತಾಂತರಿಸಲಾಗಿದೆ. ಆರೋಪಿ ರಾತ್ರಿ ಅಂಗಡಿಯಲ್ಲೇ ಉಳಿದುಕೊಂಡಿದ್ದು, ಬೆಳಗ್ಗೆ ಅಂಗಡಿ ತೆರೆದಾಗ ಆತ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಪ್ರೀತಿ ಕುರುಡು ಎಂಬ ಮಾತೊಂದು ಇದೆ. ಪ್ರೀತಿಗಾಗಿ ಜನ ಏನೆನ್ನೆಲ್ಲಾ ಮಾಡುತ್ತಾರೆ ಮತ್ತು ಮಾಡಬಹುದು ಅನ್ನೋದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ.