ಪಿಜಿಗಳ ಮಾಲೀಕರಿಗೆ ಬೆಂಗಳೂರು ಪೊಲೀಸರಿಂದ ಗೈಡ್‌ಲೈನ್ಸ್
ಬೆಂಗಳೂರು, ಫೆ.02: ಮಯಾನಗರಿ ಬೆಂಗಳೂರಿ(Bengaluru)ಗೆ ಶಿಕ್ಷಣ, ಉದ್ಯೋಗ ಇನ್ನಿತರ ಅವಕಾಶಗಳನ್ನ ಅರಿಸಿಕೊಂಡು ರಾಜ್ಯವಷ್ಟೇ ಅಲ್ಲದೆ ದೇಶ-ವಿದೇಶಗಳಿಂದ ಬರುವವರಿಗೆ ಪಿಜಿ(PG)ಗಳೇ ಆಸರೆಯಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಪಿಜಿ ಮಾಡಲು ಯಾವುದೇ ಕಾನೂನು ಕಟ್ಟುಪಾಡು ಇಲ್ಲದ ಹಿನ್ನಲೆ ಎಲ್ಲೆಂದರಲ್ಲಿ ಪಿಜಿಗಳನ್ನು ನಿರ್ಮಾಣ ಮಾಡಬಹುದು ಎಂಬ ಮನಸ್ಥಿತಿ ಇದೆ. ಇದಕ್ಕೆ ಟಕ್ಕರ್ ಕೊಡಲು ಇದೀಗ ಪಿಜಿ ಮಾಲೀಕರಿಗೆ ಬೆಂಗಳೂರು ಪೊಲೀಸರು ಗೈಡ್‌ಲೈನ್ಸ್ ಕೊಟ್ಟಿದ್ದಾರೆ. ಅದರಂತೆ ಪಿಜಿ ತೆರೆಯಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗಿದೆ.
ಗೈಡ್ಲೈನ್ಸ್ನಲ್ಲಿ ಏನಿದೆ?
- ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ (ಟ್ರೇಡ್ ಲೈಸನ್ಸ್) ಪಡೆಯುವುದು.
- ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯುವುದು ಕಡ್ಡಾಯ.
- ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು.
- ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸುವುದು.
- ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಹಾಗಿಲ್ಲ.
- ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ-1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಗೋಚರವಾಗುವಂತೆ ಪ್ರದರ್ಶಿಸುವುದು. ಹಾಗೂ ಪ್ರಥಮ ಚಿಕೆತ್ಸೆ (First-aid Kits) ಸಲಕರಣೆಗಳನ್ನು ಇಟ್ಟುಕೊಳ್ಳುವುದು.
- ಕರ್ತವ್ಯಕ್ಕೆ ನೇಮಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳ (ಆಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರೇ ವ್ಯಕ್ತಿಗಳ) ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿದ ನಂತರ ಕರ್ತವ್ಯಕ್ಕೆ ನೇಮಿಸಿಕೊಳ್ಳುವುದು.
- ವಿದೇಶಿ ಪ್ರಜೆಗಳು ಪಿ.ಜಿ. ಯಲ್ಲಿ ನೆಲೆಸಿದ್ದಲ್ಲಿ, ಮಾಹಿತಿಯನ್ನು The Registration of Foreginers Rules 1939 ಅನ್ವಯ ಫಾರಂ “ಸಿ” ಅನ್ವಯ ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು.
- ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವು ಹಾಗಿಲ್ಲ.
- ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಧ್ವನಿವರ್ಧಕಗಳನ್ನು ಉಪಯೋಗಿಸುವಂತಿಲ್ಲ.
- ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ, ಸಂಬಂಧಪಟ್ಟ ಪಿ.ಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಯಾಗುತ್ತಾರೆಂದು ಆದೇಶ.
ಇದನ್ನೂ ಓದಿ:ಬೆಂಗಳೂರು ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ರೂ ದಂಡ
ಇನ್ನು ಪಿಜಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ, ಆತ್ಮಹತ್ಯೆ, ಇಂತಹ ಹಲವು ಪ್ರಕರಣಗಳು ಪಿಜಿಗಳಲ್ಲಿ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಅದರಲ್ಲೂ ಬೇರೆ ಬೇರೆ ರಾಜ್ಯ-ದೇಶಗಳಿಂದ ಬಂದವರೂ ಹಿನ್ನಲೆಯೂ ಇರುವುದಿಲ್ಲ. ಹಾಗಾಗಿ ಇನ್ನು ಮುಂದೆ ಯಾವುದೇ ಅಕ್ರಮಗಳು ಆಗದಂತೆ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು, ಈ ಮೇಲಿನ ಗೈಡ್ಲೈನ್ಸ್ಗಳನ್ನು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ